ಷೇರುಪೇಟೆಯಲ್ಲಿ ಗೂಳಿಯಾಟ: ಯಾವೆಲ್ಲಾ ಸ್ಟಾಕ್ ಏರಿಕೆ ನೋಡಿ

ಸತತ ಮೂರನೇ ದಿನವು ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡು ಸೂಚ್ಯಂಕಗಳು ಕೂಡಾ ಹೆಚ್ಚಳವಾಗಿದೆ. ಇನ್ನು ನವದೆಹಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ) ಸತತ ಮೂರನೇ ಏರಿಕೆಯನ್ನು ದಾಖಲಿಸಿದೆ. ಅದಾನಿ ಗ್ರೂಪ್ ಎನ್‌ಡಿಟಿವಿ ಷೇರು ಖರೀದಿಯ ಆಫರ್ ನೀಡಿದ ಬಳಿಕ ಎನ್‌ಡಿಟಿವಿ ಷೇರು ನಿರಂತರ ಏರುಗತಿಯಲ್ಲೇ ಸಾಗುತ್ತಿದೆ.

ಗುರುವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 252.88 ಅಂಕ ಅಥವಾ ಶೇಕಡ0.43ರಷ್ಟು ಏರಿದ್ದು 59338.31ಕ್ಕೆ ತಲುಪಿದೆ. ನಿಫ್ಟಿ 69.90 ಅಂಕ ಅಥವಾ ಶೇಕಡ 0.40ರಷ್ಟು ಏರಿಕೆ ಕಂಡು 17674.90ಕ್ಕೆ ವಹಿವಾಟು ಆರಂಭ ಮಾಡಿದೆ. 1551 ಷೇರುಗಳು ಏರಿಕೆಯನ್ನು ಕಂಡಿದ್ದರೆ, 380 ಷೇರುಗಳು ಕುಸಿತವಾಗಿದೆ. 93 ಷೇರುಗಳು ಸ್ಥಿರವಾಗಿತ್ತು.

ಇನ್ನು ಬುಧವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 54 ಅಂಕ ಏರಿದ್ದು 59,085ಕ್ಕೆ ತಲುಪಿದೆ. ನಿಫ್ಟಿ 30 ಅಂಕ ಏರಿಕೆ ಕಂಡು 17,607ಕ್ಕೆ ವಹಿವಾಟು ಅಂತ್ಯ ಮಾಡಿದೆ. 1551 ಷೇರುಗಳು ಏರಿಕೆಯನ್ನು ಕಂಡಿದ್ದರೆ, 380 ಷೇರುಗಳು ಕುಸಿತವಾಗಿದೆ. 93 ಷೇರುಗಳು ಸ್ಥಿರವಾಗಿತ್ತು.

 ಯಾವುದು ಟಾಪ್ ಸ್ಟಾಕ್?

ಯಾವುದು ಟಾಪ್ ಸ್ಟಾಕ್?

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಸ್ಟಾಕ್ ಟಾಪ್ ಸ್ಟಾಕ್ ಆಗಿದೆ. ಸ್ಟಾಕ್ ಶೇಕಡ 2.13ರಷ್ಟು ಏರಿಕೆಯಾಗಿ ಸುಮಾರು ರೂಪಾಯಿ 1,314.95ಕ್ಕೆ ತಲುಪಿದೆ. ಇನ್ನು ಸಿಪ್ಲಾ ಸ್ಟಾಕ್ ಭಾರೀ ಇಳಿಕೆಯಾದ ಸ್ಟಾಕ್ ಆಗಿದೆ. ಷೇರು ಸುಮಾರು ಶೇಕಡ 0.87ರಷ್ಟು ಹೆಚ್ಚಳವಾಗಿ, ರೂಪಾಯಿ 1,028.35ಕ್ಕೆ ತಲುಪಿದೆ. ಇನ್ನು ನಿಫ್ಟಿ ಪಿಎಸ್‌ಯು ಬ್ಯಾಂಕ್ ಬೆಸ್ಟ್ ಸೆಕ್ಟರ್ ಆಗಿದ್ದರೆ, ನಿಫ್ಟಿ ಫಾರ್ಮಾ ಭಾರೀ ಕುಸಿತ ಕಂಡ ಸೆಕ್ಟರ್ ಆಗಿದೆ.

 ಆರಂಭಿಕ ವಹಿವಾಟಿನಲ್ಲಿ ಯಾವೆಲ್ಲಾ ಸ್ಟಾಕ್‌ಗಳು ಏರಿಕೆ, ಇಳಿಕೆ?

ಆರಂಭಿಕ ವಹಿವಾಟಿನಲ್ಲಿ ಯಾವೆಲ್ಲಾ ಸ್ಟಾಕ್‌ಗಳು ಏರಿಕೆ, ಇಳಿಕೆ?

ಭಾರ್ತಿ ಏರ್‌ಟೆಲ್, ಟೈಟಾನ್, ಟಾಟಾ ಸ್ಟೀಲ್ಸ್, ಹಿಂದೂಸ್ತಾನ್ ಯೂನಿಲಿವವರ್, ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಎಂ, ಎಂ&ಎಂ, ಡಾ ರೆಡ್ಡೀಸ್, ಎಸ್‌ಬಿಐ ಇನ್ಸೂರೆನ್ಸ್, ಎನ್‌ಟಿಪಿಸಿ, ವಿಪ್ರೋ, ಆಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಬಜಾಜ್ ಫಿನ್‌ಸರ್ವ್, ಟಿಸಿಎಸ್, ರಿಲಯನ್ಸ್, ಎಚ್‌ಡಿಎಫ್‌ಸಿ, ಪವರ್ ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಎಲ್‌ಟಿ, ಕೋಟಕ್ ಬ್ಯಾಂಕ್, ಐಟಿಸಿ, ಎಚ್‌ಸಿಎಲ್‌ ಟೆಕ್, ಮಾರುತಿ ಸ್ಟಾಕ್‌ಗಳು ಏರಿಕೆಯಾಗಿದೆ. ನೆಸ್ಲೆ ಇಂಡಿಯಾ, ಏಷ್ಯನ್ ಪೇಂಟ್ಸ್ ಸ್ಟಾಕ್‌ಗಳು ಇಳಿಕೆಯಾಗಿದ್ದವು.

 ಹತ್ತು ಗಂಟೆಗೆ ಸ್ಟಾಕ್ ಮಾರುಕಟ್ಟೆ ಹೇಗಿದೆ?

ಹತ್ತು ಗಂಟೆಗೆ ಸ್ಟಾಕ್ ಮಾರುಕಟ್ಟೆ ಹೇಗಿದೆ?

ಇನ್ನು ಹತ್ತು ಗಂಟೆ ಸುಮಾರಿಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬಂದಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕ 377.62 ಅಂಕ ಅಥವಾ ಶೇಕಡ 0.64ರಷ್ಟು ಏರಿದ್ದು 59463.05ಕ್ಕೆ ತಲುಪಿದೆ. ನಿಫ್ಟಿ 109.00 ಅಂಕ ಅಥವಾ ಶೇಕಡ 0.62ರಷ್ಟು ಏರಿಕೆ ಕಂಡು 17714ಕ್ಕೆ ತಲುಪಿದೆ. 2133 ಷೇರುಗಳು ಏರಿಕೆಯನ್ನು ಕಂಡಿದ್ದರೆ, 696 ಷೇರುಗಳು ಕುಸಿತವಾಗಿದೆ. 105 ಷೇರುಗಳು ಸ್ಥಿರವಾಗಿತ್ತು. ಸೆನ್ಸೆಕ್ಸ್‌ನಲ್ಲಿ ಯುಪಿಎಲ್, ದಿವೀಸ್ ಲ್ಯಾಬ್, ಬಜಾಜ್ ಫಿನ್‌ಸರ್ವ್, ಎಸ್‌ಬಿಐ, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಷೇರುಗಳು ಏರಕೆಯನ್ನು ಕಂಡಿದ್ದರೆ, ಅದಾನಿ ಪೋರ್ಟ್, ಎಚ್‌ಸಿಎಲ್ ಟೆಕ್, ಸಿಪ್ಲಾ ಸ್ಟಾಕ್ ಕುಸಿತವಾಗಿದೆ. ಇನ್ನು ನಿಫ್ಟಿಯಲ್ಲಿ ಬಜಾಜ್ ಫಿನ್‌ಸರ್ವ್, ಎಸ್‌ಬಿಐ, ಎಚ್‌ಯುಎಲ್‌, ಟಾಟಾ ಸ್ಟೀಲ್ಸ್, ಕೋಟಕ್ ಮಹೀಂದ್ರಾ ಸ್ಟಾಕ್ ಏರಿಕೆಯಾಗಿದ್ದರೆ, ಎಚ್‌ಸಿಎಲ್ ಟೆಕ್ ಕುಸಿತವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+