For Quick Alerts
ALLOW NOTIFICATIONS  
For Daily Alerts

ಷೇರು ಪೇಟೆ ಜಿಗಿತ: ಮಹೀಂದ್ರಾ ಟಾಪ್ ನಿಫ್ಟಿ ಗೇನರ್

|

ಸೋಮವಾರ ವಾರದ ವಹಿವಾಟಿನ ಆರಂಭದಲ್ಲೇ ಷೇರು ಮಾರುಕಟ್ಟೆ ಲಾಭವನ್ನು ವಿಸ್ತರಿಸಿದೆ. ಪ್ರಮುಖವಾಗಿ ಏಷ್ಯನ್ ಸ್ಟಾಕ್ ಕೊನೆಯ ವಾರದಲ್ಲಿ ವಾಲ್‌ಸ್ಟ್ರೀಟ್ ವಹಿವಾಟಿನಲ್ಲಿ ಲಾಭವನ್ನು ಕಂಡಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 616 ಅಂಕ ಅಥವಾ ಶೇಕಡ 1.17ರಷ್ಟು ಏರಿಕೆಯಾಗಿ 53,344ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 186 ಅಂಕ ಅಥವಾ ಶೇಕಡ 1.19ರಷ್ಟು ಹೆಚ್ಚಾಗಿ 15,886ಕ್ಕೆ ಏರಿದೆ.

ಮುಂದಿನ ವಾರ ಈ 4 ಸ್ಟಾಕ್ ಖರೀದಿಸಿದರೆ ಬಂಪರ್ ಲಾಟರಿ!ಮುಂದಿನ ವಾರ ಈ 4 ಸ್ಟಾಕ್ ಖರೀದಿಸಿದರೆ ಬಂಪರ್ ಲಾಟರಿ!

ಮಿಡ್, ಸ್ಟಾಲ್ ಕ್ಯಾಪ್ ಷೇರುಗಳು ಕ್ರಮವಾಗಿ ಶೇಕಡ 1.10, ಶೇಕಡ 1.18 ಏರಿಕೆಯಾಗಿದೆ. ಇನ್ನು ಮಹೀಂದ್ರಾ ಟಾಪ್ ನಿಫ್ಟಿ ಗೇನರ್ ಆಗಿದೆ. ಇದರ ಸ್ಟಾಕ್ ಶೇಕಡ 4ರಷ್ಟು ಹೆಚ್ಚಾಗಿ 1,020.45ಕ್ಕೆ ತಲುಪಿದೆ. ಇನ್ನು ಈ ಸಂದರ್ಭದಲ್ಲೇ ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಜೆಎಸ್‌ಡಬ್ಲ್ಯೂ ಸ್ಟೀಲ್ಸ್, ಎಲ್&ಟಿ ಲಾಭವನ್ನು ಕಂಡಿದೆ.

ಷೇರು ಪೇಟೆ ಜಿಗಿತ: ಮಹೀಂದ್ರಾ ಟಾಪ್ ನಿಫ್ಟಿ ಗೇನರ್

ಎಷ್ಟು ಷೇರಿಗೆ ಲಾಭ, ಎಷ್ಟಕ್ಕೆ ನಷ್ಟ?

1,219 ಷೇರುಗಳು ಲಾಭವನ್ನು ಕಂಡಿದ್ದರೆ, 286 ಷೇರುಗಳು ನಷ್ಟವನ್ನು ಕಂಡಿದೆ. ಬಿಎಸ್‌ಇ ಸೂಚ್ಯಂಕದಲ್ಲಿ ಟೆಕ್‌ಎಂ, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಎಲ್ ಆಂಡ್ ಟಿ, ವಿಪ್ರೋ, ಸನ್ ಫಾರ್ಮಾ, ಬಜಾಜ್ ಫಿನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಟಿಸಿಎಸ್, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್ ಮತ್ತು ಡಾ ರೆಡ್ಡೀಸ್ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ.

ಎಲ್‌ಐಸಿ ಷೇರು ಜಿಗಿತ

ಈ ನಡುವೆ ದೇಶದ ಪ್ರಮುಖ ವಿಮಾ ಸಂಸ್ಥೆ ಜೀವ ವಿಮಾ ನಿಗಮ (ಎಲ್‌ಐಸಿ) ಶೇಕಡ 0.39ರಷ್ಟು ಹೆಚ್ಚಳ ಕಂಡು 664.25 ರೂಪಾಯಿಗೆ ತಲುಪಿದೆ. ಆದರೆ ವಿತರಣಾ ಬೆಲೆಯಿಂದ ಭಾರೀ ಕುಸಿತ ಕಂಡಿದೆ.

ಶುಕ್ರವಾರ ಕೊನೆಯ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯು ಬಿಎಸ್‌ಇ ಸೆನ್ಸೆಕ್ಸ್ 462 ಪಾಯಿಂಟ್‌ಗಳು ಅಥವಾ ಶೇಕಡಾ 0.88 ರಷ್ಟು ಜಿಗಿದು 52,728 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 143 ಪಾಯಿಂಟ್ ಅಥವಾ 0.92 ರಷ್ಟು ಏರಿಕೆ ಕಂಡು 15,699 ಕ್ಕೆ ಸ್ಥಿರವಾಗಿದೆ.

English summary

Opening Bell: Sensex Rises Over 600 Points, Nifty Trades Above 15,850

Sensex Rises Over 600 Points, Nifty Trades Above 15,850.
Story first published: Monday, June 27, 2022, 10:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X