ಜಾಗತಿಕ ಮಾರುಕಟ್ಟೆಯಲ್ಲಿ ಲಾಭ ಕಂಡ ಬೆನ್ನಲ್ಲೇ ಸೋಮವಾರದ ಆರಂಭಿಕ ವ್ಯವಹಾರಗಳಲ್ಲಿ ಭಾರತೀಯ ಷೇರುಗಳು ತೀವ್ರವಾಗಿ ಏರಿಕೆ ಕಂಡಿದೆ. ವಾಲ್ ಸ್ಟ್ರೀಟ್‌ನಲ್ಲಿನ ಏಷ್ಯನ್ ಷೇರುಗಳು ಹೆಚ್ಚಿನ ವಹಿವಾಟು ನಡೆಸಿದೆ.
ಆರಂಭಿಕ ವಹಿವಾಟಿನಲ್ಲಿ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 624 ಪಾಯಿಂಟ್‌ಗಳು ಅಥವಾ ಶೇಕಡಾ 1.14 ರಷ್ಟು ಜಿಗಿದು 55,509 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 175 ಪಾಯಿಂಟ್ ಅಥವಾ 1.07 ರಷ್ಟು ಏರಿಕೆಯಾಗಿ 16,528 ಕ್ಕೆ ವಹಿವಾಟು ನಡೆಸಿದೆ.
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.15 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.26 ರಷ್ಟು ಏರಿಕೆಯಾಗಿದೆ. ನಿಫ್ಟಿ ಐಟಿ ಮತ್ತು ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಕ್ರಮವಾಗಿ ಶೇಕಡಾ 2.51 ಮತ್ತು ಶೇಕಡಾ 1.91 ರಷ್ಟು ಏರಿಕೆ ಕಂಡಿದೆ.

ಇನ್ಫೋಸಿಸ್ ಟಾಪ್ ಗೇನರ್ ಆಗಿದ್ದು, ಷೇರುಗಳು ಶೇಕಡಾ 2.85 ರಷ್ಟು ಏರಿಕೆಯಾಗಿ ರೂಪಾಯಿ 1,503.05 ಕ್ಕೆ ತಲುಪಿದೆ. ಯುಪಿಎಲ್, ಟಾಟಾ ಮೋಟಾರ್ಸ್, ಎಚ್‌ಸಿಎಲ್ ಟೆಕ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಕೂಡ ಲಾಭ ಗಳಿಸಿದೆ.
ಯಾರಿಗೆ ಲಾಭ, ಯಾರಿಗೆ ನಷ್ಟ?
2,049 ಷೇರುಗಳು ಲಾಭ ಗಳಿಸಿದ್ದರೆ, 569 ಷೇರುಗಳು ಕುಸಿತ ಕಂಡಿದೆ. ಒಟ್ಟಾರೆಯಾಗಿ ಷೇರು ಮಾರುಕಟ್ಟೆಯು ತೀವ್ರವಾಗಿ ಏರಿಕೆ ಕಂಡು ವಹಿವಾಟು ಆರಂಭಿಸಿದೆ. ಎಲ್ಲಾ ಸೆನ್ಸೆಕ್ಸ್ ಘಟಕಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ.
30-ಷೇರ್ ಬಿಎಸ್‌ಇ ಸೂಚ್ಯಂಕದಲ್ಲಿ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ವಿಪ್ರೋ, ಟೈಟಾನ್, ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಡಿಎಫ್‌ಸಿ, ಟೆಕ್ ಮಹೀಂದ್ರ, ಎಲ್ & ಟಿ, ಟಿಸಿಎಸ್, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಂ & ಎಂ ಹೆಚ್ಚು ಲಾಭ ಗಳಿಸಿದೆ.
ಶುಕ್ರವಾರದಂದು ಸೆನ್ಸೆಕ್ಸ್ 632 ಪಾಯಿಂಟ್ ಅಥವಾ 1.17 ರಷ್ಟು ಏರಿಕೆ ಕಂಡು 54,885 ಕ್ಕೆ ತಲುಪಿದ್ದರೆ, ನಿಫ್ಟಿ 182 ಪಾಯಿಂಟ್ ಅಥವಾ 1.13 ರಷ್ಟು ಏರಿಕೆ ಕಂಡು 16,352 ಕ್ಕೆ ಸ್ಥಿರವಾಗಿದೆ.


Click it and Unblock the Notifications