For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಕೊಂಚ ಚೇತರಿಕೆ: ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?

|

ಭಾರತದ ಷೇರು ಮಾರುಕಟ್ಟೆಯು ಸೆಪ್ಟೆಂಬರ್ 19ರಂದು ಕೊಂಚ ಚೇತರಿಕೆ ಕಂಡಿದೆ. ಬರೀ 9 ಅಂಕಗಳಷ್ಟು ಸೆನ್ಸೆಕ್ಸ್ ಏರಿಕೆಯಾಗಿದೆ. ಈ ಹಿಂದಿನ ವಹಿವಾಟಿನಲ್ಲಿ ಅಂದರೆ ಶುಕ್ರವಾರ ಸಂಜೆ ವೇಳೆಗೆ ಷೇರು ಪೇಟೆ ಕುಸಿದಿತ್ತು.

ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 1,093.22 ಅಂಕ ಅಥವಾ ಶೇಕಡ 1.82ರಷ್ಟು ಕುಸಿದು 58,840.79 ಇಳಿದಿದೆ. ಇನ್ನು ನಿಫ್ಟಿ 346.60 ಅಂಕ ಕುಸಿದು 17,530.80ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 952 ಷೇರುಗಳು ಏರಿಕೆಯಾಗಿದ್ದರೆ, 2455 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 100 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಷೇರು ಮಾರುಕಟ್ಟೆ ಡೌನ್: ಯಾವೆಲ್ಲ ಸ್ಟಾಕ್‌ಗಳು ಇಳಿಕೆ?ಷೇರು ಮಾರುಕಟ್ಟೆ ಡೌನ್: ಯಾವೆಲ್ಲ ಸ್ಟಾಕ್‌ಗಳು ಇಳಿಕೆ?

ಸೋಮವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 9.07 ಅಂಕ ಅಥವಾ ಶೇಕಡ 0.02ರಷ್ಟು ಏರಿಕೆಯಾಗಿದ್ದು 58849.86 ಇಳಿದಿದೆ. ಇನ್ನು ನಿಫ್ಟಿ 20.40 ಅಂಕ ಅಥವಾ ಶೇಕಡ 0.12ರಷ್ಟು ಏರಿ 17551.20ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 881 ಷೇರುಗಳು ಏರಿಕೆಯಾಗಿದ್ದರೆ, 567 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 138 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.

ಷೇರುಪೇಟೆ ಕೊಂಚ ಚೇತರಿಕೆ: ಯಾವೆಲ್ಲ ಸ್ಟಾಕ್ ಏರಿಕೆ, ಇಳಿಕೆ?

ಪ್ರಮುಖ ಗೇನರ್, ಲೂಸರ್ ಸ್ಟಾಕ್‌ಗಳು

ಪ್ರಮುಖವಾಗಿ ಬಜಾಜ್ ಫಿನ್‌ಸರ್ವ್, ಒಎನ್‌ಜಿಸಿ, ಇನ್ಫೋಸಿಸ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಎಚ್‌ಡಿಎಫ್‌ಸಿ ಸ್ಟಾಕ್‌ಗಳು ಪ್ರಮುಖವಾಗಿ ಏರಿಕೆ ಕಂಡ ಸ್ಟಾಕ್‌ಗಳು ಆಗಿದೆ. ಇನ್ನು ಅಲ್ಟ್ರಾಟೆಕ್ ಸಿಮೆಂಟ್, ಸಿಪ್ಲಾ, ಏಷ್ಯನ್ ಪೇಂಟ್ಸ್, ಮಾರುತಿ ಸುಜುಕಿ, ಟೈಟಾನ್ ಕಂಪನಿ ಸ್ಟಾಕ್‌ಗಳು ಇಳಿಕೆಯಾದ ಷೇರುಗಳು ಆಗಿದೆ. ಎಂ&ಎಂ ಸ್ಟಾಕ್ ಶೇಕಡ 2.46ರಷ್ಟು ಏರಿಕೆಯಾಗಿ ರೂಪಾಯಿ 1,280.85ಕ್ಕೆ ತಲುಪಿದೆ. ಅಲ್ಟ್ರಾಟೆಕ್ ಸಿಮೆಂಟ್ ಶೇಕಡ 2.08ರಷ್ಟು ಇಳಿದು, ರೂಪಾಯಿ 6,346.65ಕ್ಕೆ ಇಳಿಕೆಯಾಗಿದೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಬೆಸ್ಟ್ ಸೆಕ್ಟರ್ ಆಗಿದ್ದು, ನಿಫ್ಟಿ ಫಾರ್ಮಾ ಭಾರಿ ಇಳಿಕೆಯಾಗಿದೆ.

ಷೇರುಪೇಟೆ ಆರಂಭಿಕ ವಹಿವಾಟು: ಯಾವ ಷೇರುಗಳು ಕುಸಿತ ಕಂಡಿವೆಷೇರುಪೇಟೆ ಆರಂಭಿಕ ವಹಿವಾಟು: ಯಾವ ಷೇರುಗಳು ಕುಸಿತ ಕಂಡಿವೆ

ಆರಂಭಿಕ ವಹಿವಾಟಿನಲ್ಲಿ ಈ ಷೇರುಗಳು ಏರಿಕೆ

ಆರಂಭಿಕ ವಹಿವಾಟಿನಲ್ಲಿ ಇನ್ಫೋಸಿಸ್, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್, ಎಂ&ಎಂ, ರಿಲಯನ್ಸ್, ಎಸ್‌ಬಿಐ ಇನ್ಶೂರೆನ್ಸ್, ಟೆಕ್ ಎಂ, ಎಲ್‌ಟಿ, ಟಿಸಿಎಸ್, ಐಟಿಎಸ್, ವಿಪ್ರೋ ಸ್ಟಾಕ್‌ಗಳು ಏರಿಕೆಯಾಗಿದೆ. ಇನ್ನು ಇಂಡಸ್‌ಇಂಡ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಎನ್‌ಟಿಪಿಸಿ, ಪವರ್‌ಗ್ರಿಡ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಸನ್‌ಫಾರ್ಮಾ, ಕೋಟಕ್ ಮಹೀಂದ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸ್ಟೀಲ್ಸ್, ಬಜಾಜ್ ಏರ್‌ಟೆಲ್, ಸನ್‌ಟೆಕ್, ಡಿಎಲ್‌ಎಫ್, ಶೋಭಾ, ಗೋಡ್ರೆಜ್, ಪ್ರೆಸ್ಟಿಜ್, ಲೋಧಾ, ಬ್ರಿಗೇಡ್ ಸ್ಟಾಕ್‌ಗಳು ಇಳಿಕೆಯಾಗಿದೆ.

English summary

Opening Bell: Sensex Rises Over 9 Points, Nifty Trades Above 17,500

Sensex Rises Over 9 Points, Nifty Trades Above 17,500.
Story first published: Monday, September 19, 2022, 10:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X