'ದೇಶ ಪ್ರೇಮ' ಅಂದ್ರೆ ಇದೇ ಅಲ್ವಾ..! ಈ ಪೋಷಕರು ಮಾಡಿರುವ ಕಾರ್ಯಕ್ಕೆ ಇಡೀ ದೇಶವೇ ಸಲಾಂ ಹೇಳುತ್ತಿದೆ. ಹೌದು, ನಿನ್ನೆ 'ಪಾಪಿ'ಸ್ತಾನದ ವಿರುದ್ದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ದಿನದಂದೇ ಹುಟ್ಟಿದ ಹೆಣ್ಣು ಮಗುವಿಗೆ ಪೋಷಕರು 'ಸಿಂಧೂರ' ಎಂದು ಹೆಸರಿಟ್ಟಿದ್ದಾರೆ. ನಿಜಕ್ಕೂ ಈ ಮಗು ಅದೃಷ್ಟದೊಂದಿಗೆ ಪ್ರಪಂಚಕ್ಕೆ ಕಾಲಿಟ್ಟಿದೆ. ಈ ಸೌಭಾಗ್ಯ ಯಾವ ಪೋಷಕರಿಗೆ ತಾನೆ ಸಿಗುತ್ತೆ ಹೇಳಿ. ಬನ್ನಿ, ಈ ಮಗು ಜನಿಸಿದ್ದು ಎಲ್ಲಿ? ಪೋಷಕರು ಇದೇ ಹೆಸರಿಟ್ಟಿದ್ದು ಯಾಕೆ? ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.
ಹೌದು, ಪಾಪಿ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಆಪರೇಷನ್ ಸಿಂಧೂರ್ ಎಂಬ ಹೆಸರಿನಡಿಯಲ್ಲಿ ಕ್ಷಿಪಣೆ ದಾಳಿಯನ್ನು ಮಾಡಿತ್ತು.ಈ ಕಾರ್ಯಾಚರಣೆ ಫಲವನ್ನು ಕೊಟ್ಟ ಶುಭದಿನವೇ ಹೆಣ್ಣು ಮಗುವಿನ ಜನನವಾಗಿದೆ. ಈ ದಿನದ ಸವಿನೆನಪಿಗಾಗಿ ಹೆತ್ತ ತಂದೆ- ತಾಯಿಗಳು ಈ ಅದೃಷ್ಟದ ಮಗುವಿಗೆ 'ಸಿಂಧೂರ' ಎಂದು ಹೆಸರಿಟ್ಟು ಗೌರವ ಸಮರ್ಪಣೆಯನ್ನು ಮಾಡಿದ್ಧಾರೆ.

ಬಿಹಾರದ ಕತಿಹಾರ್‌ನಲ್ಲಿರುವ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದೆ. ತನ್ನ ಮಗಳಿಗೆ 'ಸಿಂಧೂರ' ಎಂದು ಹೆಸರಿಡೋದಕ್ಕೆ ಭಾರತೀಯ ಸೇನೆಯ ಆಪರೇಷನ್ ಸಿಂಧೂರವೇ ನನಗೆ ಪ್ರೇರಣೆ ಎಂದು ಪೋಷಕರು ಭಾವುಕರಾಗಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಕೈಗೊಂಡು ಪಾಕಿಸ್ತಾನದ ಉಗ್ರರ 9 ನೆಲೆಗಳ ಮೇಲೆ ದಾಳಿ ಮಾಡಿ ಧೂಳಿಪಟ ಮಾಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ
ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ಹೋಟ್ಸ್‌ಪಾಟ್ ಪಹಲ್ಗಾಮ್‌ನಲ್ಲಿ ಉಗ್ರರು ಭಾಷೆ ಕೇಳಿಲ್ಲ, ನಿಮ್ಮದು ಯಾವ ರಾಜ್ಯ ಎಂದು ಕೇಳಿಲ್ಲ... ಅವರು ಕೇಳಿದ್ದೆಲ್ಲವೂ ನಿಮ್ಮ ಧರ್ಮ ಯಾವುದು ಎನ್ನುವುದು. ಇದು ಸ್ಪಷ್ಟವಾಗಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು 26 ಜನರನ್ನು ಹತ್ಯೆ ಮಾಡಿದ್ದಾರೆ. ಭಾರತವು ಪಾಕಿಸ್ತಾನದ ವಿರುದ್ಧ ಐದು ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿತು, ಅವುಗಳಲ್ಲಿ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ಅಟ್ಟಾರಿ ಗಡಿಯಲ್ಲಿರುವ ಸಮಗ್ರ ಚೆಕ್ ಪೋಸ್ಟ್ ಅನ್ನು ಮುಚ್ಚುವುದು ಮತ್ತು ಹೈಕಮಿಷನ್‌ಗಳ ಒಟ್ಟಾರೆ ಬಲವನ್ನು ಕಡಿತಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಮಾಯಕರ ಜೀವ ತೆಗೆದ ಪಾಪಿ ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೋಗಿ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಪ್ರತಿಜ್ಞೆ ಮಾಡಿದ್ದಾರೆ.
ಭಾರತದ ಮಣ್ಣಿನ ಮೇಲೆ ಶತ್ರುಗಳು ದಾಳಿ ಮಾಡಿದ್ದಾರೆ. ಹಲವು ರಾಜ್ಯಗಳು ತಮ್ಮ ತಮ್ಮ ಮಕ್ಕಳನ್ನು ಕಳೆದುಕೊಂಡಿವೆ, ಹಾಗೇ ಭಯೋತ್ಪಾದಕರು ಮತ್ತೆ ಬಾಲ ಬಿಚ್ಚಿದ್ದಾರೆ. ಹೀಗಾಗಿ ಯಾರೂ ಊಹಿಸದ ರೀತಿಯಲ್ಲಿ ನಾವು ಉಗ್ರರನ್ನು ಶಿಕ್ಷಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ
'ಪಾಪಿ'ಗಳ ಸಂಹಾರ! ಬೆಂಗಳೂರಿನಲ್ಲೇ ಈ ಶಸ್ತ್ರಾಸ್ತ್ರಗಳು ತಯಾರಿ
ಶತ್ರುಗಳ ಸಂಹಾರಕ್ಕೆ ಕೈಗೊಂಡ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ಫಲ ಕೊಟ್ಟಿದೆ. ವಿಶೇಷವೆಂದರೆ, ಶತ್ರುಗಳ ಸಂಹಾರ ಮಾಡಲು ಭಾರತ ಸೈನ್ಯ ಬಳಸಿದ ಶಸ್ತ್ರಾಸ್ತ್ರಗಳನ್ನು ಬೆಂಗಳೂರಿನ (Bengaluru) ಕಂಪನಿ ತಯಾರಿಸಿದೆ. ಹೌದು, ಆಪರೇಷನ್ ಸಿಂಧೂರ್ ಕಾರ್ಯಚರಣೆಯಲ್ಲಿ SkyStriker ಸೂಸೈಡ್ ಡ್ರೋನ್‌ಗಳನ್ನು (Suicide Drone) ಬಳಕೆಯನ್ನು ಮಾಡಲಾಗಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಲ್ಫಾ ಡಿಸೈನ್ ಮತ್ತು ಇಸ್ರೇಲ್‌ನ ಎಲ್ಬಿಟ್ ಸೆಕ್ಯುರಿಟಿ ಸಿಸ್ಟಮ್ಸ್ ಜಂಟಿಯಾಗಿ ಈ ಸ್ಕೈಸ್ಟ್ರೈಕರ್‌ನ್ನು ಅಭಿವೃದ್ಧಿ ಪಡಿಸಿದೆ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿವೆ.
ಆಪರೇಷನ್ ಸಿಂಧೂರ್ ಮುಂದುವರೆಯಲಿದೆ
ಭಾರತೀಯ ಸೇನೆ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಿದೆ. ಭಯೋತ್ಪಾದನೆಯ ವಿರುದ್ಧ ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಮುಂದುವರೆಯಲಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಹಲವು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದಿದ್ದಾರೆ.


Click it and Unblock the Notifications