Operation Sindoor: 'ಸಿಂಧೂರ್' ಟ್ರೇಡ್​​ಮಾರ್ಕ್​​ಗೆ ಅರ್ಜಿ.. ಹಿಂದೆ ಸರಿದ ರಿಲಯನ್ಸ್.. ಈ ಹೆಸರು ಬಳಸಬಹುದಾ?

ಶತ್ರುಗಳ‌‌‌ ಸಂಹಾರಕ್ಕೆ ಕೈಗೊಂಡ ಆಪರೇಷನ್‌ ಸಿಂಧೂರ್ (Operation Sindoor) ಕಾರ್ಯಾಚರಣೆ ಫಲ ಕೊಟ್ಟಿದೆ. ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಹೆಸರಿನಡಿಯಲ್ಲಿ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಇತ್ತ ಆಪರೇಷನ್ ಸಿಂಧೂರ್ ಹೆಸರಿಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಹೌದು, ಆಪರೇಷನ್ ಸಿಂದೂರ್ ಈಗ ಎಲ್ಲ ಕಡೆಯಲ್ಲೂ ಟ್ರೆಂಡಿಂಗ್ ಆಗುತ್ತಿದೆ. ಪಾಕಿಸ್ತಾನದಲ್ಲೂ ಸಹ ಈ ಹೆಸರು ಕೂಡ ಟ್ರೆಂಡಿಂಗ್ ಆಗಿದೆ.ಆಪರೇಷನ್ ಸಿಂದೂರ್ ಹೆಸರು ಬಹಳ ಜನಪ್ರಿಯವಾಗುತ್ತಿದ್ದಂತೆಯೇ ಆ ಹೆಸರನ್ನು ಟ್ರೇಡ್​​ಮಾರ್​ಕ್ (Trademark) ಆಗಿ ನೊಂದಾಯಿಸಲು ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ರಿಲಯನ್ಸ್ ಕೂಡ ಒಂದಾಗಿತ್ತು. ಆದರೆ ಇದೀಗ ಜಿಯೋ ಸ್ಟುಡಿಯೋಸ್ ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದೆ ಎಂದು ಹೇಳಿದೆ.

Sindoor ಟ್ರೇಡ್​​ಮಾರ್ಕ್​​ಗೆ ಅರ್ಜಿಸಲ್ಲಿಸಿ ಹಿಂದೆ ಸರಿದ ರಿಲಯನ್ಸ್‌

ಈ ಕುರಿತು ಮಾಹಿತಿಯನ್ನು ಜಿಯೋ ಸ್ಟುಡಿಯೋಸ್ ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರಿಯ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದೆ.

ಆಪರೇಷನ್ ಸಿಂದೂರ್​ನ ಹೆಸರನ್ನು ಹೀಗೆ ಟ್ರೇಡ್ ಮಾರ್ಕ್ ಆಗಿ ಉಪಯೋಗಿಸಲು ಯತ್ನಿಸುತ್ತಿರುವ ವಿಚಾರವು ವಿವಾದಕ್ಕೆ ಎಡೆ ಮಾಡಿಕೊಂಡಲು ಯತ್ನಿಸುತ್ತಿದೆ. ತಕ್ಷಣವೇ ಎಚ್ಚತ್ತುಕೊಂಡ ರಿಲಯನ್ಸ್ ಅರ್ಜಿ ಹಿಂಪಡೆಕೆಯ ವಿಚಾರವನ್ನು ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಕೊಟ್ಟ ಸ್ವಷ್ಟನೆ ಏನು..?

ರಿಲಯನ್ಸ್ ಇಂಡಸ್ಟ್ರೀಸ್‌ನ ಒಂದು ಘಟಕವಾದ ಜಿಯೋ ಸ್ಟುಡಿಯೋಸ್, ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಈ ಅರ್ಜಿಯನ್ನು ಕಿರಿಯ ಉದ್ಯೋಗಿಯೊಬ್ಬರು ಯಾವುದೇ ಅನುಮತಿಯಿಲ್ಲದೆ ಆಕಸ್ಮಿಕವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿಕೆಯನ್ನು ನೀಡಿದೆ.

'ಆಪರೇಷನ್ ಸಿಂಧೂರ್' ಎಂಬ ಹೆಸರಿನ ಟ್ರೇಡ್‌ಮಾರ್ಕ್ ಹಕ್ಕನ್ನು ಹೊಂದುವ ಉದ್ದೇಶ ನಮಗೆ ಇಲ್ಲ. ಈ ಪದಗುಚ್ಛವು ಈಗ ರಾಷ್ಟ್ರೀಯ ಪ್ರಜ್ಞೆಯ ಭಾಗವಾಗಿದ್ದು, ಭಾರತೀಯ ಶೌರ್ಯದ ಸಂಕೇತವಾಗಿದೆ ಎಂದು ರಿಲಯನ್ಸ್ ಕಂಪನಿ ಮಾಹಿತಿಯನ್ನು ತಿಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದರ ಪಾಲುದಾರ ಸಂಸ್ಥೆಗಳು ಆಪರೇಷನ್ ಸಿಂಧೂರ್ ಬಗ್ಗೆ ತಮ್ಮ ಗೌರವ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಯಶಸ್ಸುಗಳ ಬಗ್ಗೆ ಪ್ರಶಂಸೆಯನ್ನು ಕೂಡ ರಿಲಯನ್ಸ್ ವ್ಯಕ್ತಪಡಿಸಿದ್ದಾರೆ. 'ಭಾರತ ಮೊದಲು' (India First) ಎಂಬ ರಾಷ್ಟ್ರಧರ್ಮದ ಧ್ಯೇಯವನ್ನು ಬಿಂಬಿಸಿ, ರಿಲಯನ್ಸ್ ತನ್ನ ಸಂಪೂರ್ಣ ಬೆಂಬಲವನ್ನು ಸರ್ಕಾರ ಹಾಗೂ ಸೇನೆಗೆ ನೀಡುತ್ತಿವುದಕ್ಕಾಗಿ ಅವರು ಹೇಳಿಕೆಯನ್ನು ನೀಡಿದ್ಧಾರೆ.

ಆಪರೇಷನ್ ಸಿಂಧೂರ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ಹಕ್ಕಿಗಾಗಿ ಯಾರೆಲ್ಲಾ ಅರ್ಜಿ ಸಲ್ಲಿಸಿದ್ದಾರೆ..?

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌, ಮುಖೇಶ್ ಚೆತ್ರಮ್ ಅಗರವಾಲ್‌, ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್ಹ್
ಅಲೋಕ್ ಕೊಠಾರಿ ಎಂಬುವವರು ಆಪರೇಷನ್ ಸಿಂಧೂರ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದರು. ಇದರಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಹೊರಬಂದಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ

ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ಹೋಟ್ಸ್‌ಪಾಟ್‌ ಪಹಲ್ಗಾಮ್‌ನಲ್ಲಿ ಉಗ್ರರು ಭಾಷೆ ಕೇಳಿಲ್ಲ, ನಿಮ್ಮದು ಯಾವ ರಾಜ್ಯ ಎಂದು ಕೇಳಿಲ್ಲ... ಅವರು ಕೇಳಿದ್ದೆಲ್ಲವೂ ನಿಮ್ಮ ಧರ್ಮ ಯಾವುದು ಎನ್ನುವುದು. ಇದು ಸ್ಪಷ್ಟವಾಗಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು 26 ಜನರನ್ನು ಹತ್ಯೆ ಮಾಡಿದ್ದಾರೆ. ಭಾರತವು ಪಾಕಿಸ್ತಾನದ ವಿರುದ್ಧ ಐದು ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿತು, ಅವುಗಳಲ್ಲಿ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ಅಟ್ಟಾರಿ ಗಡಿಯಲ್ಲಿರುವ ಸಮಗ್ರ ಚೆಕ್ ಪೋಸ್ಟ್ ಅನ್ನು ಮುಚ್ಚುವುದು ಮತ್ತು ಹೈಕಮಿಷನ್‌ಗಳ ಒಟ್ಟಾರೆ ಬಲವನ್ನು ಕಡಿತಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಮಾಯಕರ ಜೀವ ತೆಗೆದ ಪಾಪಿ ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೋಗಿ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಪ್ರತಿಜ್ಞೆ ಮಾಡಿದ್ದಾರೆ.

ಆಪರೇಷನ್ ಸಿಂಧೂರ್ ಮುಂದುವರೆಯಲಿದೆ

ಭಾರತೀಯ ಸೇನೆ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಿದೆ. ಭಯೋತ್ಪಾದನೆಯ ವಿರುದ್ಧ ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಮುಂದುವರೆಯಲಿದೆ. ಆಪರೇಷನ್ ಸಿಂಧೂ‌ರ್ ಕಾರ್ಯಾಚರಣೆಯಲ್ಲಿ ಹಲವು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+