ಮಾರುಕಟ್ಟೆಗೆ ದಿನವೂ ಹೊಸ ಹೊಸ ಮೊಬೈಲ್‌ಗಳು ಲಾಂಚ್ ಆಗುತ್ತವೆ. ದಿನವೂ ಬಿಡುಗಡೆ ಆಗುವ ಮೊಬೈಲ್‌ಗಳು ವಿಶಿಷ್ಠ ಟೆಕ್ನಾಲಜಿಯನ್ನು ಹೊಂದಿರುತ್ತವೆ. ಈ ಮೂಲಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹರಸಾಹಸ ಪಡುತ್ತವೆ. ಪ್ರತಿಯೊಂದು ಸ್ಮಾರ್ಟ್ ಫೋನ್ ತನ್ನದೇ ಆದ ವೈಶಿಷ್ಠಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ.
ಫೆಬ್ರವರಿ 29ರಂದು ಇನ್ನೊಂದು ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಸ್ಮಾರ್ಟ್ ಫೋನ್ ಮಾರುಕಟ್ಟೆ ದಿನೇ ದಿನೇ ಬೆಳೆಯುತ್ತಲೇ ಇದೆ. 2021ರಲ್ಲಿ ಈ ಮಾರುಕಟ್ಟೆ ಭಾರತದಲ್ಲಿ 160.70 ಮಿಲಿಯನ್ ಡಾಲರ್ ವಹಿವಾಟನ್ನು ನಡೆಸಿದರೆ, 2027ರ ವರೆಗೆ 253 ಮಿಲಿಯನ್ ಡಾಲರ್ ವಹಿವಾಟು ನಡೆಸುವ ಗುರಿಯನ್ನು ಹೊಂದಲಾಗಿದೆ. ವಿವಿಧ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.

ಕ್ಯಾಮೇರಾ ಹೇಗಿದೆ?
OPPO ತನ್ನ ಹೊಸ ಹ್ಯಾಂಡ್‌ಸೆಟ್ ಅನ್ನು ಭಾರತದಲ್ಲಿ ಫೆಬ್ರವರಿ 29 ರಂದು ಬಿಡುಗಡೆ ಮಾಡಿದೆ. ಗುರುವಾರ (ಫೆ.29) ಬಿಡುಗಡೆ ಆಗಲಿರುವ ಸ್ಮಾರ್ಟ್‌ಫೋನ್ OPPO F25 Pro 5G ಆಗಿದೆ. ಫೋನ್ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 64 ಎಂಪಿ ಅಲ್ಟ್ರಾ ಕ್ಲಿಯರ್ ಆಗಿರುತ್ತದೆ. 8 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 2 MP ಮ್ಯಾಕ್ರೋ ಕ್ಯಾಮರಾ ಇರಲಿದೆ.
32 MP ಅಲ್ಟ್ರಾ ಕ್ಲಿಯರ್ ಸೆಲ್ಫಿ ಕ್ಯಾಮೆರಾ ಇದ್ದು, ಇದು Sony IMX615 ಸೆಂನ್ಸರ್ ಹೊಂದಿದೆ. ಫ್ಲಿಪ್‌ಕಾರ್ಟ್ ಪುಟದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಮುಂಭಾಗ ಮತ್ತು ಹಿಂಭಾಗದಲ್ಲಿ 4K ವೀಡಿಯೊ ಸ್ಪಷ್ಟತೆ ಲಭ್ಯವಿರುತ್ತದೆ.
ಎಷ್ಟು ಗಂಟೆಯಲ್ಲಿ ಫುಲ್ ಚಾರ್ಜ್ ಆಗುತ್ತದೆ
ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ, ಇದರೊಂದಿಗೆ 67W Supervooc ಫ್ಲಾಶ್ ಚಾರ್ಜಿಂಗ್ ಬೆಂಬಲವಿದೆ. 48 ನಿಮಿಷಗಳಲ್ಲಿ ಫೋನ್ 100% ಚಾರ್ಜ್ ಆಗುತ್ತದೆ. ಬ್ಯಾಟರಿಯ ಬಾಳಿಕೆ 4 ವರ್ಷಗಳು ಎಂದು ಕಂಪನಿ ಹೇಳಿಕೊಂಡಿದೆ.

ನೀರು ಬಿದ್ದರೆ ಹಾಳಾಗುತ್ತದೆಯಾ?
ಫೋನ್ IP65 ನೀರು ಮತ್ತು ಧೂಳಿನ ಪ್ರತಿರೋಧವನ್ನು ಪಡೆದುಕೊಂಡಿದೆ. ಅಂದರೆ ಧೂಳು, ಮಳೆಯಲ್ಲಿ ಒದ್ದೆಯಾದರೂ ಫೋನ್ ಹಾಳಾಗುವುದಿಲ್ಲ. ಫೋನ್ 6.7 ಇಂಚಿನ 120Hz AMOLED ಪರದೆಯನ್ನು ಹೊಂದಿರುತ್ತದೆ. ಇದು ಗಡಿಯಿಲ್ಲದ ವಿನ್ಯಾಸವನ್ನು ಹೊಂದಿದೆ. ಇದು ಅದರ ನೋಟವನ್ನು ಹೆಚ್ಚು ಸುಂದರವಾಗಿಸುತ್ತದೆ.
OPPO F25 Pro 5G ಸ್ಮಾರ್ಟ್‌ಫೋನ್ 8GB/128GB ಮತ್ತು 8GB/256GB ಎಂಬ ಎರಡು ಶ್ರೇಣಿಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್ ಅನ್ನು ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್ 25 ಸಾವಿರ ರೂಪಾಯಿ ಒಳಗೆ ಲಭ್ಯ.


Click it and Unblock the Notifications