ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಕೇವಲ ಎರಡು ತಿಂಗಳಲ್ಲಿ, 417 ಕ್ಕೂ ಹೆಚ್ಚು ಕಂಪನಿಗಳು ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಕೆಲಸದಿಂದ ಕಿತ್ತುಹಾಕಿವೆ. ಅಂಕಿಅಂಶ ತಿಳಿಯಿರಿ
ಬೆಂಗಳೂರು, ಫೆಬ್ರವರಿ 28: ಈ ವರ್ಷದ ಆರಂಭದಿಂದಲೂ ನೌಕರರಿಗೆ ಕೆಟ್ಟ ಸುದ್ದಿಗಳೆ ಬರುತ್ತಿವೆ. ಜಗತ್ತಿನಾದ್ಯಂತ ಲಕ್ಷಾಂತರ ನೌಕರರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಭಾರೀ ಕಷ್ಟದಲ್ಲಿರುವ ಉದ್ಯೋಗಿಗಳು ಜಗತ್ತಿನಾದ್ಯಂತ ನೌಕರಿಗಾಗಿ ಪರದಾಡುತ್ತಿದ್ದಾರೆ. ಕೇವಲ 2 ತಿಂಗಳಲ್ಲಿ, 400 ಕ್ಕೂ ಹೆಚ್ಚು ಕಂಪನಿಗಳು ಜಾಗತಿಕವಾಗಿ ಲಕ್ಷಾಂತರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ.
Amazon, Microsoft, Google, Salesforce ಮತ್ತು ಇತರ ಕಂಪನಿಗಳು ಜನವರಿಯಲ್ಲಿ ಸುಮಾರು 1 ಲಕ್ಷ ಟೆಕ್ ಉದ್ಯೋಗಿಗಳನ್ನು ಕೆಲಸದಿಂದ ವಜಾಗಳಿಸಿವೆ. ಒಟ್ಟಾರೆಯಾಗಿ, 2022 ರಲ್ಲಿ ಮತ್ತು ಈ ವರ್ಷದ ಫೆಬ್ರವರಿವರೆಗೆ 3 ಲಕ್ಷಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

2023ರ ಎರಡು (ಜನವರಿ, ಫೆಬ್ರವರಿ) ತಿಂಗಳಲ್ಲಿ 1.2 ಲಕ್ಷಕ್ಕೂ ಅಧಿಕ ನೌಕರರು ಕೆಲಸ ಕಳೆದುಕೊಂಡಿದ್ದಾರೆ. 1,046 ಕಂಪನಿಗಳು ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿವೆ. Big Tech ಕಂಪನಿಗಳಿಂದ ಹಿಡಿದು Startupಗಳ ವರೆಗೆ ವಜಾಗಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. 2022 ರಲ್ಲಿ 1,61 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಲೇಆಫ್ಸ್ ಟ್ರ್ಯಾಕಿಂಗ್ ಸೈಟ್ Layoffs.fyi ಡೇಟಾ ಮಾಹಿತಿ ನೀಡಿದೆ.
ಆರ್ಥಿಕ ಸಂಕಷ್ಟಗಳ ಪರಿಣಾಮ ವೆಚ್ಚ ಕಡಿತ ಕ್ರಮಗಳ ಭಾಗವಾಗಿ, ನೂರಾರು ದೈತ್ಯ Company ಗಳು ಉದ್ಯೋಗಿಗಳನ್ನು ವಜಾ ಮಾಡುವುದನ್ನು ಮುಂದುವರೆಸಿವೆ. ಈ ಕ್ರಮದ ಹಿಂದೆ ವಿವಿಧ ಕಾರಣಗಳನ್ನು ಉಲ್ಲೇಖಿಸಲಾಗಿದೆ. ಅತಿಯಾದ ನೇಮಕ, ಅನಿಶ್ಚಿತ ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳು, ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಸಂಕಷ್ಟಗಳನ್ನು ಉಲ್ಲೇಖಿಸಲಾಗಿದೆ.
ವಜಾಗೊಳಿಸಿದ ಕಂಪನಿಗಳು
Meta: ಮೆಟಾ (ಹಿಂದೆ Facebook) ಮತ್ತೊಂದು ದೊಡ್ಡ ಸುತ್ತಿನ ವಜಾಗೊಳಿಸುವಿಕೆ ಪ್ರಕ್ರಿಯೆಗೆ ಸಿದ್ದವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಿಸಿದಂತೆಯೇ ಈ ಭಾರಿಯೂ ವಜಾಗೊಳಿಸುವಿಕೆಯನ್ನು ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ. Meta ಕಂಪನಿಯು ಇತ್ತೀಚಿನ ಸುತ್ತಿನ ಕಾರ್ಯಕ್ಷಮತೆಯ ವಿಮರ್ಶೆಗಳಲ್ಲಿ ಸಾವಿರಾರು ಉದ್ಯೋಗಿಗಳಿಗೆ 'ಸಬ್‌ಪಾರ್ ರೇಟಿಂಗ್‌ಗಳನ್ನು' ನೀಡಿದೆ ಎಂದು ವರದಿಯಾಗಿದೆ ಇದು Companyಯಲ್ಲಿ ಹೆಚ್ಚಿನ ವಜಾಗೊಳಿಸುವಿಕೆಗೆ ವೇದಿಕೆಯಾಗಿದೆ.

Ericsson: ಸ್ವೀಡಿಷ್ Telecom ಗೇರ್-ತಯಾರಕ Ericsson ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳಲ್ಲಿ ವೆಚ್ಚವನ್ನು ಕಡಿತಗೊಳಿಸಲು ಸುಮಾರು 8,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.
McKinsey & Co: ಜಾಗತಿಕ ಸಲಹಾ ಕಂಪನಿ McKinsey & Co ಸುಮಾರು 2,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ.
KPMG: ಮತ್ತೊಂದು ಪ್ರಮುಖ ಸಲಹಾ ಕಂಪನಿ KPMG ತನ್ನ 2 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದು US ನಲ್ಲಿ ಸುಮಾರು 700 ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.
Digital Ocean: ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ ಪ್ರೊವೈಡರ್ ಡಿಜಿಟಲ್ ಓಷನ್ ತನ್ನ ಉದ್ಯೋಗಿಗಳ ಶೇಕಡಾ 11 ರಷ್ಟು ಅಥವಾ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.


Click it and Unblock the Notifications