ಕರ್ನಾಟಕ ಸರ್ಕಾರ ಜಾರಿ ಮಾಡುತ್ತಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡಾ ಒಂದಾಗಿದೆ. ಗೃಹಜ್ಯೋತಿ ಯೋಜನೆಯು ರಾಜ್ಯದಲ್ಲಿ ಹಲವಾರು ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದ್ದು ಜೂನ್ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈಗ ಅರ್ಜಿ ಸಲ್ಲಿಸಿದ್ದರೂ ಕೂಡಾ ಹಲವಾರು ಫಲಾನುಭವಿಗಳಿಗೆ ಜಿರೋ ಬಿಲ್ ಬಂದಿಲ್ಲ ಎಂದು ವರದಿ ಟೈಮ್ಸ್ ನೌ ವರದಿ ಹೇಳುತ್ತದೆ.
ದಾಖಲೆಯ ಪ್ರಕಾರ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಿದ ಸುಮಾರು ಶೇಕಡ 38ರಷ್ಟು ಅಂದರೆ ಸುಮಾರು 45 ಲಕ್ಷ ಫಲಾನುಭವಿಗಳಿಗೆ ಬಿಲ್ ಬಂದಿದೆ. ಶೂನ್ಯ ಬಿಲ್ ಬಂದಿಲ್ಲದ ಕಾರಣದಿಂದಾಗಿ ಕಳೆದ ತಿಂಗಳು ಸುಮಾರು 45 ಲಕ್ಷ ಕುಟುಂಬವು ವಿದ್ಯುತ್ ಬಿಲ್ ಅನ್ನು ಪಾವತಿ ಮಾಡಬೇಕಾಗಿದೆ.

ವಿದ್ಯುತ್ ಇಲಾಖೆಯ ಮಾಹಿತಿ ಪ್ರಕಾರ ಸುಮಾರು ಗೃಹ ಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್ ಅನ್ನು ಪಡೆಯಲು 1,40,31,320 ಅರ್ಜಿ ಸಲ್ಲಿಕೆ ಮಾಡಲಾಗಿದೆ. ಎಲ್ಲ ಪರಿಶೀಲನೆ ಮಾಡಿದ ಬಳಿಕ ಈ ಪೈಕಿ ಸುಮಾರು 1,19,38,402 ಅರ್ಜಿಗಳು ಮಾನ್ಯವಾಗಿದೆ ಎಂದು ತಿಳಿದುಬಂದಿದೆ. (ಅರ್ಜಿಗಳನ್ನು ಅನುಮೋದನೆ ಮಾಡಲಾಗಿದೆ).
ಇನ್ನು ಈ ಪೈಕಿ ಸುಮಾರು 74,08,769 (ಶೇಕಡ 62.19) ಅರ್ಹ ಅರ್ಜಿದಾರರಿಗೆ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಜಿರೋ ವಿದ್ಯುತ್ ಬಿಲ್ ಬಂದಿದೆ. ಆದರೆ ಈ ನಡುವೆ 45,29,633 ಅರ್ಜಿದಾರರು ವಿದ್ಯುತ್ ಬಿಲ್ ಅನ್ನು ಪಾವತಿ ಮಾಡಬೇಕಾಗಿದೆ.
ವರದಿ ಪ್ರಕಾರ, "ಒಂದು ಹಣಕಾಸು ವರ್ಷದಲ್ಲಿ ಮಾಸಿಕವಾಗಿ ಎಷ್ಟು ವಿದ್ಯುತ್ ಬಳಕೆ ಮಾಡಲಾಗಿದೆ ಎಂಬ ಲೆಕ್ಕಾಚಾರದಲ್ಲಿ ಅರ್ಜಿದಾರರ ಪೈಕಿ ಯಾರು ಅರ್ಹರು ಎಂದು ನೋಡಲಾಗಿದೆ. ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ 100, 120, 150, 180 ಯುನಿಟ್‌ಗಳನ್ನು ಬಳಕೆ ಮಾಡಿದ್ದರೂ ಕೂಡಾ ಅದಕ್ಕೂ ಮುಂಚಿನ ತಿಂಗಳುಗಳಲ್ಲಿ ಮಾಸಿಕವಾಗಿ 200 ಯುನಿಟ್‌ಗೂ ಅಧಿಕ ಬಳಕೆ ಮಾಡಿದವರು ಈ ಯೋಜನೆಗೆ ಅನರ್ಹರಾಗಿದ್ದಾರೆ," ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅರ್ಜಿ ಸಲ್ಲಿಸಿದ ಬಳಿಕ ಸ್ಟೇಟಸ್ ತಿಳಿಯಿರಿ
ಹಂತ 1: https://sevasindhugs.karnataka.gov.in/ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಹಂತ 2: 'ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ' ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: Track Your Application Status ಎಂದು ಕಾಣಲಿದೆ
ಹಂತ 4: ನಿಮ್ಮ ಎಸ್ಕಾಂ ಯಾವುದು ಎನ್ನುವ ಆಯ್ಕೆ ಕಾಣಿಸುತ್ತದೆ ಅಲ್ಲಿ ನಿಮ್ಮ ಎಸ್ಕಾಂ ಆಯ್ಕೆ ಮಾಡಿಕೊಳ್ಳಿ.
ಹಂತ 5: ವಿದ್ಯುತ್ ಬಿಲ್‌ನಲ್ಲಿರುವ ಖಾತೆ ಸಂಖ್ಯೆ ಅಥವಾ ಅಕೌಂಟ್ ಐಡಿಯನ್ನು ನಮೂದಿಸಿ
ಹಂತ 6: Check Status ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಪ್ರಕ್ರಿಯೆ ಸಂಪೂರ್ಣವಾಗಲಿದೆ.
ಗೃಹ ಬಳಕೆಗೆ ಮಾತ್ರ ಬಳಕೆ ಮಾಡಲಾಗುವ ವಿದ್ಯುತ್ ಮಾತ್ರ ಉಚಿತವಾಗಿರುತ್ತದೆ. ಒಂದು ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ವಿದ್ಯುತ್ ಬಳಸಿರುವುದು ಗಮನಕ್ಕೆ ಬಂದರೆ ಪ್ರಯೋಜನವನ್ನು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಲಾಗುತ್ತದೆ. ಈ ಬಗ್ಗೆ ಅರ್ಜಿ ಸಲ್ಲಿಸುವಾಗಲೇ ನಾವು ದೃಢೀಕರಿಸುವುದು ಮುಖ್ಯವಾಗಿದೆ.


Click it and Unblock the Notifications