ಮೆಟಾ ಉದ್ಯೋಗಿಗಳ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಈ ಸಮೀಕ್ಷೆಯು ಹಲವಾರು ಕುತೂಹಲಕಾರಿ ವಿಚಾರಗಳನ್ನು ಬಹಿರಂಗಪಡಿಸಿದೆ. ಪ್ರಮುಖವಾಗಿ ಫೇಸ್‌ಬುಕ್ ಪೋಷಕ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್‌ರ ನಾಯಕತ್ವದಿಂದ ಸುಮಾರು ಶೇಕಡ 70ಕ್ಕೂ ಅಧಿಕ ಉದ್ಯೋಗಿಗಳು ತೃಪ್ತರಿಲ್ಲ ಅಥವಾ ಸಂತೋಷವಾಗಿಲ್ಲ ಎಂದು ಈ ಸಮೀಕ್ಷೆಯು ಹೇಳಿದೆ. ಮೆಟಾ ಸಂಸ್ಥೆಯಲ್ಲಿನ ಉದ್ಯೋಗಿಗಳ ಆಂತರಿಕ ಸಮೀಕ್ಷೆ ಇದಾಗಿದೆ.
ಇನ್ನು ವರದಿಯ ಪ್ರಕಾರ ಈ ಸಮೀಕ್ಷೆಯಲ್ಲಿ ಇನ್ನೊಂದು ಕುತೂಹಲಕಾರಿ ಅಂಶವು ಬಹಿರಂಗವಾಗಿದೆ. ಸಮೀಕ್ಷೆಯ ಪ್ರಕಾರ ಮೆಟಾದ ಒಟ್ಟು ಉದ್ಯೋಗಿಗಳ ಪೈಕಿ ಕೇವಲ ಶೇಕಡ 26ರಷ್ಟು ಉದ್ಯೋಗಿಗಳು ಮಾತ್ರ ಸಿಇಒ ಮಾರ್ಕ್ ಜುಕರ್‌ಬರ್ಗ್ ನಾಯಕತ್ವದ ಮೇಲೆ ನಂಬಿಕೆಯನ್ನು ಹೊಂದಿದ್ದಾರೆ. ಮೆಟಾ ಆಂತರಿಕ ಸಮೀಕ್ಷೆಯಲ್ಲಿ ಶೇಕಡ 26ರಷ್ಟು ಉದ್ಯೋಗಿಗಳು ಮಾತ್ರ ನಾವು ಜುಕರ್‌ಬರ್ಗ್ ನಾಯಕತ್ವದ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಇನ್ನೊಂದು ಕುತೂಹಲಕಾರಿ ವಿಚಾರವೇನೆಂದರೆ ಈ ಸಮೀಕ್ಷೆಯನ್ನು ಇತ್ತೀಚೆಗೆ ಮೇ ತಿಂಗಳಿನಲ್ಲಿ ಮೆಟಾ ಸಂಸ್ಥೆಯು ಮತ್ತೊಂದು ಹಂತದ ಉದ್ಯೋಗ ಕಡಿತವನ್ನು ನಡೆಸುವುದಕ್ಕೂ ಮುನ್ನವೇ ಮಾಡಲಾಗಿದೆ ಎಂಬುವುದು. ಮೆಟಾದ ಮೊದಲ ಹಂತದ ಉದ್ಯೋಗ ಕಡಿತ ಸಂದರ್ಭದಲ್ಲೇ ಉದ್ಯೋಗಿಗಳು ನಾಯಕತ್ವದ ಮೇಲೆ ಅಸಮಾಧಾನ ಹೊಂದಿರುವ ಸಾಧ್ಯತೆಯಿದೆ.
ಮೆಟಾ ಸಂಸ್ಥೆಯಲ್ಲಿ ನಮ್ಮನ್ನು ಪ್ರೋತ್ಸಾಹಿಸಲಾಗುತ್ತಿದೆ ಅಥವಾ ನಮ್ಮ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಲಾಗುತ್ತಿದೆ ಎಂದು ಶೇಕಡ 43ರಷ್ಟು ಉದ್ಯೋಗಿಗಳಿಗೆ ಮಾತ್ರ ಅನಿಸಿದೆ. ಉಳಿದ ಉದ್ಯೋಗಿಗಳು ಸಂಸ್ಥೆಯಲ್ಲಿ ಪ್ರೋತ್ಸಾಹವೇ ದೊರೆಯುತ್ತಿಲ್ಲ ಎಂಬ ಭಾವನೆ ಹೊಂದಿದ್ದಾರೆ. ಇನ್ನು ಅಕ್ಟೋಬರ್‌ನಲ್ಲಿ ಶೇಕಡ 58ರಷ್ಟು ಉದ್ಯೋಗಿಗಳು ನಮಗೆ ಸಂಸ್ಥೆಯಲ್ಲಿ ಪ್ರೋತ್ಸಾಹ, ಮೆಚ್ಚುಗೆ ದೊರೆಯುತ್ತಿದೆ ಎಂದು ಹೇಳಿದ್ದರು. ವೆಚ್ಚಗಳನ್ನು ಕಡಿತ ಮಾಡಲು ಸಂಸ್ಥೆ ಕೈಗೊಂಡ ಕ್ರಮದಿಂದಾಗಿ ತನ್ನ ಉದ್ಯೋಗಿಗಳ ಭರವಸೆಯನ್ನು ಕಳೆದುಕೊಂಡಿದೆ ಎಂಬುವುದು ಖಚಿತವಾಗಿದೆ.
ಮೆಟಾದ ಎಐ ಪ್ಲ್ಯಾನ್ ಬಗ್ಗೆ ಜುಕರ್‌ಬರ್ಗ್ ಹೇಳುವುದೇನು?
ಗುರುವಾರ ಕಂಪನಿಯ ಸಭೆಯಲ್ಲಿ, ಸಿಇಒ ಮಾರ್ಕ್ ಜುಕರ್‌ಬರ್ಗ್ ಸಂಸ್ಥೆಯಲ್ಲಿ ಮುಂದಿನ ನಡೆಯ ಬಗ್ಗೆ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾರ್ಕ್ ಜುಕರ್‌ಬರ್ಗ್ ಮತ್ತು ಇತರರು ಕೃತಕ ಬುದ್ಧಿಮತ್ತೆ ಅಥವಾ ಎಐ (artificial intelligence) ವಿಚಾರದಲ್ಲಿ ಸಂಸ್ಥೆಯ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಸಿಬ್ಬಂದಿಗಳು ಈಗಿನಿಂದಲೇ ಈ ಎಐ ಬಳಕೆಯನ್ನು ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಮೆಟಾದಲ್ಲಿ ಮತ್ತೆ ಉದ್ಯೋಗ ಕಡಿತ?
ಹಲವಾರು ಸಂಸ್ಥೆಗಳು ಕಳೆದ ವರ್ಷದಿಂದ ಉದ್ಯೋಗ ಕಡಿತವನ್ನು ಮಾಡುತ್ತಾ ಬಂದಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮಾಲೀಕತ್ವವನ್ನು ಹೊಂದಿರುವ ಮೆಟಾ ಸಂಸ್ಥೆಯು ಕೂಡಾ ಹಲವಾರು ಹಂತಗಳಲ್ಲಿ ಉದ್ಯೋಗ ಕಡಿತವನ್ನು ಮಾಡುತ್ತಾ ಬಂದಿದೆ. ಮುಂದಿನ ಹಂತದ ಉದ್ಯೋಗ ಕಡಿತವು ಕೂಡಾ ನಡೆಯುವ ಸಾಧ್ಯತೆ ಕಂಡು ಬಂದಿದೆ. ಪ್ರಮುಖವಾಗಿ ಸಂಸ್ಥೆಯಲ್ಲಿನ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತದ ಹಾದಿಯನ್ನು ಸಂಸ್ಥೆಗಳು ಹಿಡಿದಿದೆ.
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ಹಿಂದೆ ಮೇ ತಿಂಗಳಲ್ಲಿ ಉದ್ಯೋಗ ಕಡಿತವನ್ನು ಆರಂಭ ಮಾಡಲಾಗುತ್ತದೆ ಎಂದು ತಿಳಿಸಿದರೂ ಕೂಡಾ, ಸಭೆಯ ಸಮಯದಲ್ಲಿ ನಿಖರವಾದ ಸಮಯವನ್ನು ದೃಢಪಡಿಸಲಾಗಿಲ್ಲ. ಈ ಉದ್ಯೋಗ ಕಡಿತವು ಪ್ರಾಥಮಿಕವಾಗಿ ಮೆಟಾದ ವ್ಯಾಪಾರ ವಿಭಾಗಗಳ ಮೇಲೆ ಪ್ರಭಾವ ಉಂಟು ಮಾಡಲಿದೆ. ಹಾಗೆಯೇ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ವೋಕ್ಸ್ ವರದಿ ಮಾಡಿದೆ.
ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲೇ ಮೆಟಾ ಹಾಗೂ ಟ್ವಿಟ್ಟರ್ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದೆ. ಮೆಟಾ ಸುಮಾರು 1,100 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಸುಮಾರು ಶೇಕಡ 13ರಷ್ಟು ಉದ್ಯೋಗಿಗಳನ್ನು ದಿಡೀರ್ ವಜಾಗೊಳಿಸಿದೆ. ಫೇಸ್‌ಬುಕ್ ಅನ್ನು ನಿರ್ವಹಣೆ ಮಾಡುವ ಮೆಟಾದ ಷೇರುಗಳು ಈ ವರ್ಷ ಭಾರೀ ನಷ್ಟವನ್ನು ಅನುಭವಿಸಿದೆ. ಮೆಟಾ ಷೇರುಗಳು ಶೇಕಡ 70ರಷ್ಟು ಕುಸಿದಿದೆ. ಸುಮಾರು 255.79 ಬಿಲಿಯನ್ ಡಾಲರ್ ಕುಸಿತ ಕಂಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications