ಇನ್ಮುಂದೆ Unmarried Couplesಗೆ ಸಿಗಲ್ಲ OYO.. Room ಬೇಕಾ ಫ್ರೂಪ್ ಕೊಡಿ! ಹೌದು, 'ಓಯೋ' ಯಾರಾದರೂ ರೂಂ ಬುಕಿಂಗ್ ಮಾಡಬೇಕು ಅಂತ ಹೇಳಿದಾಗೆಲ್ಲಾ ಇದೊಂದೇ ಹೆಸರು ಕೇಳೋದು. ಯುವತಿ ಮತ್ತು ಯುವಕರು ಸೇರಿದಂತೆ ಬಹುತೇಕರು ತಾವು ಉಳಿದುಕೊಳ್ಳಲು 'ಓಯೋ ರೂಂ' ಬುಕ್ ಮಾಡುತ್ತಾರೆ. ಆದ್ರೆ, ಇನ್ನುಂದೆ ಮದುಮೆಯಾಗದ ಜೋಡಿಗಳಿಗೆ ತನ್ನ ಹೋಟೆಲ್ ರೂಮ್ಗಳನ್ನು ಬಾಡಿಗೆ ನೀಡುವುದಿಲ್ಲ ಎಂದು ಟ್ರಾವೆಲ್ ಬುಕಿಂಗ್ ಕಂಪನಿ ಓಯೋ ಪ್ರಕಟಿಸಿದೆ.
ಹೌದು,ಟ್ರಾವೆಲ್ ಬುಕಿಂಗ್ ಕಂಪನಿ ಓಯೋ,ಚೆಕ್-ಇನ್ ನೀತಿ ನಿಯಮಗಳನ್ನು ಪರಿಷ್ಕರಿಸಿದೆ.ತನ್ನ ಪಾಲುದಾರ ಹೋಟೆಲ್‌ಗಳಿಗಾಗಿ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ಹೊರಡಿಸಿರುವ ಓಯೋ, ಮೊದಲಿಗೆ ಮೀರತ್ನಿಂದ ಇವುಗಳನ್ನು ಜಾರಿಗೊಳಿಸಲು ಆರಂಭಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

ರೂಮ್ ಬೇಕಾ ಫ್ರೂಪ್ ಕೊಡಿ!
ಓಯೋದ ಹೊಸ ಪರಿಷ್ಕೃತ ನೀತಿಯ ಅಡಿಯಲ್ಲಿ,ಪುರುಷ ಮತ್ತು ಮತ್ತು ಮಹಿಳಾ ಜೋಡಿಗಳು ಆನ್ಲೈನ್ ಬುಕಿಂಗ್ ಮಾಡುವಾಗ ಅಥವಾ ಚೆಕ್ ಇನ್ ಮಾಡುವಾಗ ಅವರು ತಮ್ಮ ಸಂಗತಿಯ ಸಂಬಂಧವನ್ನು ತೋರಿಸುವ ಪುರಾವೆಗಳನ್ನು ನೀಡುವುದು ಕಡ್ಡಾಯವಾಗಿದೆ. ಯುವತಿ ಮತ್ತು ಯುವಕರ ಸ್ಥಳೀಯ ಸಾಮಾಜಿಕ ಪರಿಸ್ಥಿತಿಗಳನ್ನು ನೋಡಿಕೊಂಡು ಪಾಲುದಾರ ಹೋಟೆಲ್ಗಳು ಸಂಗಾತಿಗಳಿಗೆ ರೂಮ್ ನೀಡಬೇಕೋ ಅಥವಾ ನೀಡದಿರುವ ಬಗ್ಗೆ ವಿವೇಚನೆಯಿಂದ ನಿರ್ಧರಿಸಬಹುದು ಎಂದು ಕಂಪನಿ ಮಾಹಿತಿ ತಿಳಿಸಿದೆ.
ಮೀರತ್‌ನಲ್ಲಿ ಓಯೋ ಹೊಸ ನಿಯಮ ಜಾರಿ
ಮೀರತ್‌ನಲ್ಲಿ ಈಗಲೇ ಓಯೋ ಹೊಸ ನಿಯಮಗಳನ್ನು ತಕ್ಷಣ ಜಾರಿಗೆ ತರುವಂತೆ ತನ್ನ ಪಾಲುದಾರ ಹೋಟೆಲ್ಗಳಿಗೆ ನಿರ್ದೇಶನ ನೀಡಿದೆ. ಓಯೋ ವಾಸ್ತವ ಸ್ಥಿತಿಗತಿಗಳ ಆಧಾರದ ಮೇಲೆ ಕಂಪನಿಯು ಇದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಬಹುದು ಎಂದು ಮೂಲಗಳು ಮಾಹಿತಿ ತಿಳಿಸಿವೆ.
ನಿಯಮ ಜಾರಿಗೆ ಮನವಿ
ಬಹಳ ಹಿಂದಿನಿಂದಲೇ ಓಯೋ ರೂಮ್ ಗಳಿಗೆ ನಿಯಮಗಳನ್ನು ತರಬೇಕು ಎಂದು ನಾಗರಿಕ ಸಮಾಜ ಸಂಘಟನೆಗಳು ಮನವಿಗಳನ್ನು ನೀಡಿದ್ದವು. ಆಗಾಗಿ ನಾವು ಹೊಸ ಮಾರ್ಗಸೂಚಿಗಳನ್ನು ತಯಾರಿಸಿದ್ದೇವೆ. ಇದಲ್ಲದೆ ಅವಿವಾಹಿತ ಜೋಡಿಗಳಿಗೆ ರೂಮ್ ನೀಡದಂತೆ ಕೆಲ ನಗರಗಳ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ ಎಂದು ಕಂಪನಿಯ ಮೂಲಗಳು ಮಹಿತಿಯನ್ನು ತಿಳಿಸಿವೆ.
ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಕ್ರಮ
ಓಯೋ ಕಂಪನಿ ನಿಮ್ಮಗೆ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಕ್ರಮಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ. ನಿಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ಮಧ್ಯೆ ನಾವು ಕಾರ್ಯನಿರ್ವಹಿಸುವ ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಕಾನೂನು ಜಾರಿ ಮತ್ತು ನಾಗರಿಕ ಸಮಾಜಗಳ ಬೇಡಿಕೆಗಳನ್ನು ಆಲಿಸುವುದು ಹಾಗೂ ಅವುಗಳನ್ನು ಪರಿಶೀಲಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ ಎಂಬುದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ಹೊಸ ನೀತಿಯ ಪರಿಶೀಲನೆ
ಓಯೋ ಜಾರಿಗೆ ತಂದಿರುವ ಹೊಸ ನೀತಿ ಮತ್ತು ಅದರ ಪರಿಣಾಮಗಳನ್ನು ನಿಯಮಿತವಾಗಿ ಪರಿಶೀಲನೆ ಮಾಡುತ್ತದೆ. ಇನ್ನೂ ಓಯೋ ಈ ಹೊಸ ನೀತಿಯ ಹಳೆಯ ಗ್ರಹಿಕೆಯನ್ನು ಪರಿವರ್ತಿಸುವ ಮತ್ತು ಕುಟುಂಬಗಳು,ವಿದ್ಯಾರ್ಥಿಗಳು,ವ್ಯವಹಾರ, ಧಾರ್ಮಿಕ ಮತ್ತು ಏಕವ್ಯಕ್ತಿ ಪ್ರಯಾಣಿಕರಿಗೆ ಸುರಕ್ಷಿತ ಅನುಭವವನ್ನು ಒದಗಿಸುವ ಬ್ರಾಂಡ್ ಆಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಓಯೋ ಕಾರ್ಯಕ್ರಮದ ಒಂದು ಭಾಗವಾಗಿದೆ ಎಂದು ಓಯೋ ಉತ್ತರ ಭಾರತದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಮಾಹಿತಿ ತಿಳಿಸಿದ್ದಾರೆ.
ನೀವು ಇನ್ನುಂದೆ ಓಯೋ ರೂಮ್ ಬುಕ್ ಮಾಡುವಾಗ ಕಡ್ಡಾಯವಾಗಿ ನಿಮ್ಮ ಫ್ರೂಪ್ಗಳನ್ನು ನೀಡಲೇ ಬೇಕು.ಓಯೋ ಹೊಸ ನೀತಿಯು ದೀರ್ಘಕಾಲದ ವಾಸ್ತವ್ಯ ಮತ್ತು ಪುನರಾವರ್ತಿತ ಬುಕಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಗ್ರಾಹಕರ ನಂಬಿಕೆ ಮತ್ತು ನಿಷ್ಠೆಯನ್ನು ಹೆಚ್ಚಿಸುತ್ತದೆ.


Click it and Unblock the Notifications