Pahalgam Tragedy: ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ಹೋಟ್ಸ್‌ಪಾಟ್ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಮಾಡಿ ಭಾರತದ 26 ಜನರನ್ನು ಹತ್ಯೆ ಮಾಡಿದ್ದಾರೆ. ಹಲವಾರು ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಈ ಘಟನೆ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ ದೇಶದಾದ್ಯಂತ ಉಗ್ರರ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ಗುಂಡಿಟ್ಟಿಗೆ ಬಲಿಯಾಗಿರುವ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರಗಳು ಪರಿಹಾರವನ್ನು ಘೋಷಣೆ ಮಾಡಿದೆ. ಸರ್ಕಾರ ದ ಜೊತೆ ದೇಶದ ದೊಡ್ಡ ದೊಡ್ಡ ಉದ್ಯೋಮಿಗಳು ಕೂಡ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇದೀಗ ಭಾರತೀಯ ಜೀವ ವಿಮಾ ನಿಗಮ(LIC) ಸಂತ್ರಸ್ತರಿಗೆ ಬೆಂಬಲಕ್ಕೆ ನಿಲ್ಲಲು ನಿರ್ಧಾರ ಮಾಡಿದ್ದು ಒಂದು ಪ್ರಮುಖ ಘೋಷಣೆಯನ್ನು ಮಾಡಿದೆ.
ಹೌದು, ಪಹಲ್ಗಾಮ್ ಉಗ್ರರ ದಾಳಿಗೆ ಬಲಿಯಾದ ಸಂತ್ರಸ್ತರಿಗೆ ಭಾರತೀಯ ಜೀವ ವಿಮಾ ನಿಗಮ(LIC) ವಿಶೇಷ ವಿಂಡೋವನ್ನು ತೆರೆದೆ. ಇಲ್ಲಿ ಡೆತ್ ಕ್ಲೈಮ್ ಅರ್ಜಿಗಳನ್ನು ಬಹುಬೇಗನೆ ವಿಲೇವಾರಿ ಮಾಡಲಾಗುವುದು ಎಂದು ಹೇಳಿದೆ. ಹಾಗಿದ್ರೆ ಭಯೋತ್ಪಾದಕ ದಾಳಿಯ ಸಂತ್ರಸ್ತರು ಡೆತ್ ಕ್ಲೈಮ್‌ಗಳನ್ನು ಹೇಗೆ ಅರ್ಜಿ ಸಲ್ಲಿಸಬೇಕು..? ಎಂಬುವುದನ್ನು ತಿಳಿಯಲು ಮುಂದೆ ಓದಿ..

ಭಾರತೀಯ ಜೀವ ವಿಮಾ ನಿಗಮ (LIC) ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳಿಗಾಗಿ ವಿಶೇಷ ಕ್ಲೈಮ್ ವಿಂಡೋವನ್ನು ತೆರೆಯಲಾಗಿದೆ. ಆರ್ಥಿಕ ನೆರವುನ್ನು ನೀಡಲು ಮುಂದೆ ಬಂದಿದೆ. ಇತ್ತೀಚಿಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಒದಗಿಸುವುದಾಗಿ ಘೋಷಿಸಿದ್ದಾರೆ.
ಪಹಲ್ಗಾಮ್ ದಾಳಿಯಿಂದ ತ್ರೀವ ದುಖಃವಾಗಿದೆ
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಅಮಾಯಕರ ಜೀವಹಾನಿಗೆ ಎಲ್‌ಐಸಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಮೃತರ ಡೆತ್ ಕ್ಲೈಮ್‌ಗಳನ್ನುಇತ್ಯರ್ಥಪಡಿಸಲು ವಿಶೇಷ ವಿಂಡೋ ತೆರೆದಿದೆ. ಈ ಮೂಲಕ "ದುಃಖಿತ ಕುಟುಂಬಗಳಿಗೆ ಎಲ್‌ಐಸಿ ಬೆಂಬಲವಾಗಿ ನಿಂತಿದೆ" ಎಂದು ಎಲ್‌ಐಸಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ಧಾರ್ಥ್ ಮೊಹಾಂತಿ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ತ್ವರಿತ ಪರಿಹಾರ ನೀಡುವ ನಿಟ್ಟಿನಲ್ಲಿ, ಭಾರತೀಯ ಜೀವ ವಿಮಾ ನಿಗಮ (LIC) ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಆದರೆ ಈ ವೇಳೆ ಹಕ್ಕುದಾರರು ತಿಳಿದುಕೊಳ್ಳಲೇಬೇಕಾದ ಕೆಲವು ಮುಖ್ಯ ಅಂಶಗಳು ಇವೆ:
ಡೆತ್ ಕ್ಲೈಮ್ ಪ್ರಕ್ರಿಯೆ ಸಂಪೂರ್ಣವಾಗಿ ಆಫ್‌ಲೈನ್
ಎಲ್‌ಐಸಿ ಹಕ್ಕುದಾರರು ಗಮನಿಸಬೇಕಾದ ಮೊದಲ ಅಂಶವೆಂದರೆ LIC ಡೆತ್ ಕ್ಲೈಮ್ ಪ್ರಕ್ರಿಯೆ ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿ ನಡೆಯುತ್ತದೆ. ಈ ಪ್ರಕ್ರಿಯೆಗಾಗಿ LIC ಶಾಖೆಗೆ ನೇರವಾಗಿ ಭೇಟಿ ನೀಡಬೇಕಾಗುತ್ತದೆ.
ಡೆತ್ ಕ್ಲೈಮ್ ಸಲ್ಲಿಸುವ ಪ್ರಕ್ರಿಯೆ ಹೇಗೆ?
1.ಪಾಲಿಸಿ ನೀಡಿದ LIC ಶಾಖೆಗೆ ಸಂಪರ್ಕಿಸಿ: ನಾಮಿನಿಯು ಪಾಲಿಸಿಯ ಮೂಲ ಪ್ರತಿಯೊಂದಿಗೆ ಶಾಖೆಗೆ ತೆರಳಿ, ಪಾಲಿಸಿ ಸಂಖ್ಯೆ, ಮರಣದ ದಿನಾಂಕ ಹಾಗೂ ಕಾರಣವನ್ನು ಲಿಖಿತವಾಗಿ ನೀಡಬೇಕು.
2. ಕ್ಲೈಮ್ ಫಾರ್ಮ್ A ಸಲ್ಲಿಸಬೇಕು: ಈ ಫಾರ್ಮ್‌ನಲ್ಲಿ ನಾಮಿನಿ ಮತ್ತು ಪಾಲಿಸಿದಾರರ ನಡುವಿನ ಸಂಬಂಧದ ವಿವರ ನೀಡಬೇಕು.
3. ಅಗತ್ಯ ದಾಖಲೆಗಳ ಪಟ್ಟಿ: ಅಧಿಕೃತ ಮರಣ ಪ್ರಮಾಣಪತ್ರ (ಮುನಿಸಿಪಲ್ ಅಥವಾ ಆಸ್ಪತ್ರೆಯಿಂದ)
ಪಾಲಿಸಿ ದಾಖಲೆಗಳು
ನಾಮಿನಿ ಹಾಗೂ ಪಾಲಿಸಿದಾರರ ಗುರುತಿನ ಪುರಾವೆ (ಆಧಾರ್ / ಪ್ಯಾನ್ ಕಾರ್ಡ್)
ಬ್ಯಾಂಕ್ ಖಾತೆ ವಿವರಗಳು ಮತ್ತು ಕ್ಯಾನ್ಸಲ್ ಚೆಕ್
ದಾಖಲೆಗಳ ಪರಿಶೀಲನೆಯ ನಂತರ
LIC ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿ, ಎಲ್ಲವೂ ಸರಿಯಾಗಿದ್ದರೆ, ನಾಮಿನಿಯ ಬ್ಯಾಂಕ್ ಖಾತೆಗೆ ವಿಮಾ ಮೊತ್ತವನ್ನು ಪಾವತಿಸುತ್ತಾರೆ.
ಅರ್ಹತೆ
ಪಾಲಿಸಿಯ ಪ್ರೀಮಿಯಂ ನಿಯಮಿತವಾಗಿ ಪಾವತಿಸಿರುವುದು ಮುಖ್ಯಅಥವಾ, ಗ್ರೇಸ್ ಪಿರಿಯಡ್ ಒಳಗೆ ಸಾವು ಸಂಭವಿಸಿದರೆ ಕೂಡ, ಕ್ಲೈಮ್ ಪ್ರಕ್ರಿಯೆಗೆ ಅರ್ಹತೆ ದೊರೆಯುತ್ತದೆ.
ತಕ್ಷಣಿಕ ಪರಿಹಾರಕ್ಕಾಗಿ ಶಾಖೆಯ ಅಧಿಕಾರಿಗಳೊಂದಿಗೆ ನೇರವಾಗಿ ಸಂಪರ್ಕಿಸುವುದು ಉತ್ತಮ.
ಮತ್ತೊಂದೆಡೆ, ಪಾಲಿಸಿಯನ್ನು ನಾಮನಿರ್ದೇಶನ ಮಾಡದಿದ್ದರೆ, ಮೃತರ ಆಸ್ತಿಯ ಹಕ್ಕುದಾರರು LIC ಅನ್ನು ಸಂಪರ್ಕಿಸಬಹುದು. ಹಕ್ಕುದಾರರು ತಮ್ಮ ಹಕ್ಕುಗಳನ್ನು ಸಾಬೀತುಪಡಿಸುವ ಕಾನೂನು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅಂತಿಮ ಕ್ಲೇಮ್ ವಿತರಣೆಗಾಗಿ NEFT ಫಾರ್ಮ್, ರದ್ದಾದ ಚೆಕ್ ಅಥವಾ ಬ್ಯಾಂಕ್ ಪಾಸ್‌ಬುಕ್‌ನಂತಹ ಬ್ಯಾಂಕಿಂಗ್ ವಿವರಗಳನ್ನು ಅವರಿಗೆ ನೀಡಬೇಕು


Click it and Unblock the Notifications