ಇನ್ನೂ ಬುದ್ದಿ ಕಲಿಯದ ಪಾಕ್! ನನ್ನನ್ನು ಕೆಣಕಿದರೆ ಸುಮ್ಮನೆ ಬಿಡೊ ಮಾತೇ ಇಲ್ಲ! ನಾವೂ ಅಷ್ಟೇ ನಿಮ್ಮನ್ನು ಕೆಣಕುತ್ತಲೇ ಇರ್ತಿವೆ. ಇದು 'ಪಾಪಿ' ಪಾಕಿಸ್ತಾನಕ್ಕೆ ಮೋದಿ ಸರ್ಕಾರದ ಎಚ್ಚರಿಕೆ. ಹೌದು, ಭಾರತವನ್ನು ಕೆಳಕಿದ 'ಪಾಪಿ' ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ (Narendra Modi) ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಪಹಲ್ಗಾಮ್ ದಾಳಿಯ (Pahalgam Attack)ಯಲ್ಲಿ 26 ಅಮಾಯಕ ಜೀವಗಳನ್ನು ಬಲಿ ತಗೆದುಕೊಂಡಿರುವ ಉಗ್ರರ ವಿರುದ್ದ ಸಿಟ್ಟಿಗೆದ್ದಿರುವ ಭಾರತ ಪಾಕಿಸ್ತಾನದ ವಿರುದ್ಧ 5 ದೊಡ್ಡ ಕಠಿಣ ಕ್ರಮಕ್ಕೆ ಮುಂದಾಗಿದೆ. ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಇದಕ್ಕೆ ಪ್ರತಿಯಾಗಿ 'ಪಾಪಿ' ಪಾಕಿಸ್ತಾನ ಗುರುವಾರದಿಂದ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಇದಕ್ಕೆ ತಕ್ಕ ತಿರುಗೇಟು ಕೊಡಲಿದೆ.
ಹೌದು, ಭಾರತ ಸರ್ಕಾರ ಈಗಾಗಲೇ ಸಿಂಧೂ ಜಲ ಒಪ್ಪಂದ ಸ್ಥಗಿತ, ವಾಘಾ ಗೇಟ್ ಬಂದ್, ವೀಸಾ ಸ್ಥಗಿತ, ಪಾಕ್ ಪ್ರಜೆಗಳು ಭಾರತ ಬಿಟ್ಟು ಹೋಗಲು ಆದೇಶ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಕೋಪಿತಗೊಂಡಿರುವ ಪಾಕಿಸ್ತಾನ, ಭಾರತದ ವಾಯುಪ್ರದೇಶವನ್ನು ಮುಚ್ಚಿದೆ. ಈಗಾಗಲೇ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವ ಪಾಕಿಸ್ತಾನ ಮತ್ತಷ್ಟು ನಷ್ಟವನ್ನು ಅನುಭವಿಸುವುದು ಖಚಿತವಾಗಿದೆ. ಶೀಘ್ರದಲ್ಲೇ ಪ್ರಧಾನಿ ಮೋದಿ ಅಂಡ್ ಟೀಂ ಎದುರಾಳಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಿದೆ.

ಪಾಕ್ ಈ ಕ್ರಮದಿಂದ ದೆಹಲಿ ಮತ್ತು ಇತರ ಉತ್ತರ ಭಾರತದ ನಗರಗಳಿಂದ ಹೊರಡುವ ಅಂತರರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಲಿದೆ, ಟಿಕೆಟ್ ದರಗಳು ಕೂಡ ಏರಿಕೆಯಾಗುವ ಸಾಧ್ಯತೆಯಿದೆ.
ಪುಲ್ವಾಮಾ ದಾಳಿಯ ನಂತರದ ಪಾಕ್ ನಿರ್ಧಾರಕ್ಕೆ ಭಾರೀ ಆರ್ಥಿಕ ನಷ್ಟ
ಪಾಕಿಸ್ತಾನವು ಪುಲ್ವಾಮಾ ಉಗ್ರ ದಾಳಿಯ ನಂತರ ತನ್ನ ವಾಯುಪ್ರದೇಶವನ್ನು ಮುಚ್ಚುವ ನಿರ್ಧಾರದಿಂದ 100 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ನಷ್ಟವನ್ನು ಅನುಭವಿಸಬೇಕಾಯಿತು ಎಂಬ ಮಾಹಿತಿ ವರದಿಯಾಗಿದೆ. ಈ ನಿರ್ಧಾರವು ಹಲವು ಅಂತಾರಾಷ್ಟ್ರೀಯ ವಿಮಾನಯಾನ ಮಾರ್ಗಗಳನ್ನು ಬೇರೆ ದಾರಿಗಳಿಂದ ಸಾಗಿಸಲು ಕಾರಣವಾಗಿದ್ದು, ನಾನಾ ವಿಮಾನಯಾನ ಕಂಪನಿಗಳಿಗೆ ಹಾಗೂ ಸ್ಥಳೀಯ ತಾಣಗಳಿಗೆ ತೀವ್ರ ಹಾನಿ ಉಂಟಾಗಿದೆ.
ಈ ಬಾರಿಯೂ ಪಾಕಿಸ್ತಾನವು ಇದೇ ತತ್ವವನ್ನು ಅನುಸರಿಸಿದರೆ, ಆರ್ಥಿಕವಾಗಿ ಮತ್ತೊಂದು ದೊಡ್ಡ ನಷ್ಟ ಎದುರಾಗಬಹುದು ಎಂದು ವಿಮಾನಯಾನ ಮತ್ತು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಮಾನಯಾನ ಮಾರ್ಗದ ತಡೆ ಅಥವಾ ತಿರುಗಾಟವು ಇಂಧನ ವೆಚ್ಚ, ಪ್ರಯಾಣ ಸಮಯ, ಟಿಕೆಟ್ ದರಗಳಿಗೆ ಪರಿಣಾಮ ಬೀರುತ್ತದೆ, ಜೊತೆಗೆ ಪಾಕಿಸ್ತಾನದ ಆಂತರಿಕ ವಿಮಾನಯಾನ ಸೇವೆಗಳಿಗೂ ಪ್ರತಿಕೂಲದ ಮೇಲೂ ಸಹ ಪ್ರಭಾವನ್ನು ಬೀರುತ್ತದೆ.
ವಾಯುಪ್ರದೇಶ ಮುಚ್ಚಿಕೊಡುವ ನಿರ್ಧಾರದಿಂದ ಪಾಕಿಸ್ತಾನಕ್ಕೆ ನಷ್ಟ
ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಮುಚ್ಚುವುದರಿಂದ ದೇಶಕ್ಕೆ ಭಾರೀ ಆರ್ಥಿಕ ಹಾನಿ ಸಂಭವಿಸಬಹುದು ಎಂಬ ಎಚ್ಚರಿಕೆ ತಜ್ಞರಿಂದ ವ್ಯಕ್ತವಾಗಿದೆ. ಯಾವುದೇ ದೇಶದ ವಾಯುಪ್ರದೇಶವನ್ನು ಉಪಯೋಗಿಸುವ ಪ್ರತಿವೇಳೆ, ವಿಮಾನಯಾನ ಸಂಸ್ಥೆಗಳು ಆ ದೇಶಕ್ಕೆ ಮಾರ್ಗ ಸಂಚರಣೆ ಶುಲ್ಕ (route navigation fee) ಪಾವತಿಸುತ್ತವೆ. ಈ ಪಾವತಿಯೂ ವಿಮಾನದ ತೂಕ ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ವಿಮಾನ ದೊಡ್ಡದಾಗಿದ್ದಷ್ಟು, ಪಾವತಿಸಬೇಕಾದ ಶುಲ್ಕವೂ ಹೆಚ್ಚು ಆಗುತ್ತದೆ.
ಪಾಕಿಸ್ತಾನದ ವಾಯುಪ್ರದೇಶವು ಏಷ್ಯಾ ಮತ್ತು ಯೂರೋಪ್ ನಡುವಿನ ಪ್ರಮುಖ ಹಾರಣಾ ಮಾರ್ಗವಾಗಿದೆ. ಈ ಮಾರ್ಗವನ್ನು ನಿರ್ಬಂಧಿಸಿದರೆ ಅನೇಕ ಅಂತಾರಾಷ್ಟ್ರೀಯ ವಿಮಾನಗಳು ಬೇರೆ ದಾರಿಗಳನ್ನು ಉಪಯೋಗಿಸಬೇಕಾಗಿ ಬಂದು, ವಿಮಾನಯಾನ ಸಂಸ್ಥೆಗಳು ಪಾಕಿಸ್ತಾನಕ್ಕೆ ಪಾವತಿಸಬಹುದಾದ ಕೋಟಿ ಕೋಟಿ ರೂಪಾಯಿ ಮೌಲ್ಯದ ಸಂಚರಣೆ ಶುಲ್ಕವನ್ನು ನಷ್ಟವಾಗುತ್ತದೆ.
ಏರ್ ಇಂಡಿಯಾ ಎಕ್ಸ್‌ನಲ್ಲಿ ಪಾಕಿಸ್ತಾನದ ವಾಯುಪ್ರದೇಶದ ನಿರ್ಬಂಧದಿಂದ, ಉತ್ತರ ಅಮೆರಿಕ, ಯುಕೆ, ಯುರೋಪ್ ಹಾಗೂ ಮಧ್ಯಪ್ರಾಚ್ಯಕ್ಕೆ ಹೋಗುವ ಕೆಲ ವಿಮಾನಗಳು ವಿಸ್ತೃತ ಪರ್ಯಾಯ ಮಾರ್ಗವನ್ನು ಬಳಸಬೇಕಾಗಿದೆ. ಈ ಮೂಲಕ ವಿಮಾನಯಾನದ ಅವಧಿ ಮತ್ತು ಇಂಧನ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಗ್ರಾಹಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದು ಮಾಹಿತಿಯನ್ನು ತಿಳಿಸಿದೆ.
ಪಾಕಿಸ್ತಾನದ ವಾಯುಪ್ರದೇಶ ಮುಚ್ಚಿದ ಕಾರಣ, ಕೆಲ ಅಂತರರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ಶ್ರಮಿಸುತ್ತಿದ್ದೇವೆ ಎಂದು ಇಂಡಿಗೋ ಕೂಡ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.
ಹೊಸ ವಿಮಾನ ಮಾರ್ಗಗಳು ಯಾವುವು?
1. ನೀವು ಅರೇಬಿಯನ್ ಸಮುದ್ರದ ಮೂಲಕ ಮಧ್ಯಪ್ರಾಚ್ಯಕ್ಕೆ ಪ್ರಯಾಣಿಸಬಹುದು.
2. ನೀವು ಇರಾನ್, ಮಧ್ಯ ಏಷ್ಯಾ ಮತ್ತು ರಷ್ಯಾ ಮೂಲಕ ಯುರೋಪಿಯನ್/ಯುಎಸ್ ನಗರಗಳಿಗೆ ವಿಮಾನದಲ್ಲಿ ಪ್ರಯಾಣಿಸಬಹುದು.
3. ಅಮೆರಿಕಕ್ಕೆ ಹೋಗುವ ವಿಮಾನವು ಯುರೋಪ್‌ನಲ್ಲಿ ವಿರಾಮವನ್ನು ಹೊಂದಿರುತ್ತದೆ. ಇದು ನಿಮಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುತ್ತದೆ.
ಅಂತರರಾಷ್ಟ್ರೀಯ ವಿಮಾನ ಮಾರ್ಗಗಳು ಮತ್ತು ವೇಳಾಪಟ್ಟಿಗಳಲ್ಲಿ ಪ್ರಮುಖ ಬದಲಾವಣೆಗಳಿವೆ. ಇದು ಭಾರತವನ್ನು ಬಿಟ್ಟು ಹೋಗುವಾಗ ಮತ್ತು ಭಾರತಕ್ಕೆ ಆಗಮಿಸುವವರಿಗೆ ದೊಡ್ಡ ಬಿಕ್ಕಟ್ಟನ್ನು ಎದುರಾಗುತ್ತದೆ. ಮಾರ್ಗಗಳನ್ನು ಬದಲಾಯಿಸುವುದರಿಂದ ಪ್ರಯಾಣದ ಸಮಯ ಹೆಚ್ಚಾಗುವುದಲ್ಲದೆ, ಟಿಕೆಟ್ ಬೆಲೆಯೂ ಹೆಚ್ಚಾಗುತ್ತದೆ. ಇದು ಸುಮಾರು ಶೇ. 8 ರಿಂದ 12 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.


Click it and Unblock the Notifications