For Quick Alerts
ALLOW NOTIFICATIONS  
For Daily Alerts

ಪಲ್ಲೋಂಜಿ ಸಮೂಹ ಸಂಸ್ಥೆಗಳ ಬೇಡಿಕೆ ಅವಿವೇಕತನದ್ದು ಎಂದ ಟಾಟಾ

By ಅನಿಲ್ ಆಚಾರ್
|

ಶತಕೋಟಿಗಳ ಪಲ್ಲೋಂಜಿ ಸಮೂಹ ಸಂಸ್ಥೆಗಳು ಮುಂದಿಟ್ಟ ಪ್ರಸ್ತಾವಕ್ಕೆ ಟಾಟಾ ಸಮೂಹ ನಿರಾಕರಿಸಿದೆ. ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಪಲ್ಲೋಂಜೀ ಸಮೂಹದ 18.4% ಷೇರಿದೆ. ಇದರ ಮೌಲ್ಯವು 1.75 ಲಕ್ಷ ಕೋಟಿ ರುಪಾಯಿ (2370 ಕೋಟಿ ಅಮೆರಿಕನ್ ಡಾಲರ್) ಆಗುತ್ತದೆ.

 

ಇಷ್ಟು ಮೊತ್ತಕ್ಕೆ ಟಾಟಾದ ಲಿಸ್ಟೆಡ್ ಕಂಪೆನಿಗಳಲ್ಲಿ ಪ್ರೋ ರೇಟಾ ಷೇರುಗಳನ್ನು ಕೇಳಲಾಗಿತ್ತು. ಅಥವಾ ನಗದು ಅಥವಾ ಯಾವುದೇ ಮಾರ್ಕೆಟ್ ನಲ್ಲಿ ವ್ಯವಹಾರ ನಡೆಸುವ ಇನ್ ಸ್ಟ್ರುಮೆಂಟ್ ನೀಡಬೇಕು ಎನ್ನಲಾಗಿತ್ತು. ಪಲ್ಲೋಂಜಿ ಹೂಡಿಕೆ ಮೌಲ್ಯವನ್ನು ಟಾಟಾದಿಂದಲೂ ಅಳೆಯಲಾಗಿದ್ದು, 1100 ಕೋಟಿ ಅಮೆರಿಕನ್ ಡಾಲರ್ ಎನ್ನಲಾಗಿದೆ. ಇದು ಪಲ್ಲೋಂಜೀ ಕೇಳುತ್ತಿರುವ ಮೊತ್ತದ ಅರ್ಧದಷ್ಟಾಗುತ್ತದೆ.

ಮಹಾ ಬೇರ್ಪಡೆ: ಟಾಟಾ ಗ್ರೂಪ್ ನಿಂದ ಹೊರಬರಲು ಒಪ್ಪಿದ ಶಾಪೂರ್ ಜೀ ಪಲ್ಲೋನ್ ಜೀ

"ಇದು ಅವಿವೇಕತನ. ಈ ರೀತಿಯ ಪರಿಹಾರ ನೀಡುವುದಕ್ಕೆ ಸಾಧ್ಯವೇ ಇಲ್ಲ," ಎಂದು ಟಾಟಾ ಪರ ವಕೀಲರಾದ ಹರೀಶ್ ಸಾಳ್ವೆ ಗುರುವಾರದಂದು ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ. "ಇದಕ್ಕೆ ನನ್ನ ವಿರೋಧವಿದೆ," ಎಂದು ಟಾಟಾ ಪರ ವಾದ ಮಂಡಿಸಿದ ಹರೀಶ್ ಸಾಳ್ವೆ ಹೇಳಿದ್ದಾರೆ.

ಪಲ್ಲೋಂಜಿ ಸಮೂಹ ಸಂಸ್ಥೆಗಳ ಬೇಡಿಕೆ ಅವಿವೇಕತನದ್ದು ಎಂದ ಟಾಟಾ

ಕಾಫೀಯಿಂದ ಕಾರಿನ ತನಕ ನಾನಾ ಉದ್ಯಮವನ್ನು ಟಾಟಾ ಸನ್ಸ್ ಹತೋಟಿಯಲ್ಲಿದೆ. ಈಗ ಮಿಸ್ತ್ರಿ ಕೇಳುತ್ತಿರುವುದನ್ನು ಒಪ್ಪಿಕೊಂಡು ಬಿಟ್ಟರೆ ಟಾಟಾ ಸನ್ಸ್ ಅನ್ನೇ ಪಲ್ಲೋಂಜೀ ನುಂಗಿ ಹಾಕಿಕೊಳ್ಳುತ್ತದೆ. ಏಕೆಂದರೆ ಆ ಎಲ್ಲ ಕಂಪೆನಿಗಳಲ್ಲೂ ಶಾಪೂರ್ ಜೀ ಪಲ್ಲೋಂಜೀ ಅಲ್ಪ ಪ್ರಮಾಣದ ಷೇರನ್ನು ಹೊಂದುತ್ತದೆ.

ಎಪ್ಪತ್ತು ವರ್ಷದಿಂದ ಎಸ್ ಪಿ ಹಾಗೂ ಟಾಟಾ ಗ್ರೂಪ್ ಮಧ್ಯೆ ಇರುವ ಸಂಬಂಧ ಕಡಿದುಕೊಳ್ಳುವ ಬಗ್ಗೆ ಕಳೆದ ಸೆಪ್ಟೆಂಬರ್ ನಲ್ಲಿ ಘೋಷಣೆ ಮಾಡಲಾಯಿತು. ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್ ಅಧ್ಯಕ್ಷ ಸ್ಥಾನದಿಂದ ನಾಲ್ಕು ವರ್ಷಗಳ ಕೆಳಗೆ ದಿಢೀರನೇ ಕಿತ್ತೊಗೆಯಲಾಯಿತು. ಆಗಿನಿಂದ ಈ ಬಿಕ್ಕಟ್ಟು ನಡೆದುಕೊಂಡು ಬಂದಿದೆ.

English summary

Pallonji's Share Swap Offer Rejected By Tata, Call It As Nonsense

Tata group rejects SP group share swap offer, call it as nonsense, lawyer Harish Salve said to Supreme Court on Thursday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X