ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಹೌದು, ಈಗಾಗಲೇ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಜಾಗಗಳನ್ನು ರಾಜ್ಯ ಸರ್ಕಾರವು ಅಂತಿಮ ಮಾಡಿದೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಿದೆ. ಆದರೆ, ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವು ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. ಇದರ ನಡುವೆ ಪರಂದೂರು ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯ ಬಹಳ ವೇಗದಲ್ಲಿ ನಡೆಯುತ್ತಿದ್ದು,ಇದೀಗ ದೊಡ್ಡ ಸಿಕ್ಕಿದೆ.
ತಮಿಳು ನಾಡು ಸರ್ಕಾರ ಚೆನ್ನೈನಿಂದ ಪಶ್ಚಿಮಕ್ಕೆ 70 ಕಿ.ಮೀ ದೂರದಲ್ಲಿರುವ ಗ್ರೀನ್‌ಫೀಲ್ಡ್ ಪರಂದೂರು ವಿಮಾನ ನಿಲ್ದಾಣಕ್ಕೆ 20,000 ಕೋಟಿ ವೆಚ್ಚದಲ್ಲಿ ಟೆಂಡರ್ ಬಿಡುಗಡೆಯನ್ನು ಮಾಡುವ ಸಾಧ್ಯತೆಯಿದೆ.

ಈ ಯೋಜನೆಗೆ ಕೇಂದ್ರವು ಯಾವುದೇ ಕ್ಷಣದಲ್ಲಿ ಅದರೂ ಅನುಮೋದನೆ ನೀಡುವ ನಿರೀಕ್ಷೆಯ ಇದೆ ಎಂದು ಮೂಲಗಳು ತಿಳಿಸಿವೆ. ಹೊಸ ವಿಮಾನ ನಿಲ್ದಾಣದ ಯೋಜನೆಗಾಗಿ ಭೂಸ್ವಾಧೀನ ಕಾರ್ಯ ಭರದಿಂದ ಸಾಗುತ್ತಿದೆ. ಭೂಮಾಲೀಕರಿಗೆ ನೀಡಲಾಗುತ್ತಿರುವ ಪರಿಹಾರವು ಸಾಕಷ್ಟು ಗಣನೀಯವಾಗಿದ್ದು, ಮಾರುಕಟ್ಟೆ ಮೌಲ್ಯಕ್ಕಿಂತ ಐದರಿಂದ ಆರು ಪಟ್ಟು ಹೆಚ್ಚಾಗಲಿದೆ ಎಂದು ಮಾಹಿತಿಯನ್ನು ತಿಳಿಸಿದೆ.
ಪರಂದೂರು ವಿಮಾನ ನಿಲ್ದಾಣ ನಿರ್ಮಾಣ ನಮ್ಮ ಕೃಷಿ ಭೂಮಿಯಲ್ಲಿ ಮಾಡಬಾರದು ಎಂದು ರೈತರು ವಿರೋಧವನ್ನು ಸಹ ಮಾಡಿದ್ದಾರು. ಪರಂದೂರಿನ ಸುತ್ತಮುತ್ತಲಿನ ಏಕನಪುರಂ, ನೆಲ್ವಾಯ್, ವಳತ್ತೂರ್, ಎಡಿಯಯಾರ್ಪಕ್ಕಂ, ಮಾದಾಪುರಂ ಮತ್ತು ಅಕ್ಕಮ್ಮಪುರಂ ಸೇರಿದಂತೆ 13 ಗ್ರಾಮಗಳಲ್ಲಿ ಈ ಯೋಜನೆಯಿಂದಾಗಿ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ಅಗ್ರಹವನ್ನು ಸಹ ಮಾಡಿದ್ದರು.
ಚೆನ್ನೈ ವಿಮಾನ ನಿಲ್ದಾಣವು ವಾರ್ಷಿಕವಾಗಿ 2.2 ಕೋಟಿಗೂ ಹೆಚ್ಚು ಜನರನ್ನು ನಿರ್ವಹಿಸುತ್ತಿರುವುದರಿಂದ ಪರಂದೂರು ಬಳಿ ವಿಮಾನ ನಿಲ್ದಾಣದ ಮಾಡಿದ್ರೆ ಪ್ರಯಾಣಿಕರ ಸಂಖ್ಯೆಯನ್ನು ನಿಭಾಹಿಸಬಹುದು ಆರ್ಥಿಕ ಅದಾಯಕ್ಕೆ ಹೆಚ್ಚಿನ ಸಹಾಐವಾಗುತ್ತದೆ ಎಮದು ತಮಿಳುನಾಡು ಸರ್ಕಾರ ಈ ನಿರ್ಧಾರವನ್ನು ಮಾಡಿದೆ.
ಮುಂದಿನ ಏಳು ವರ್ಷಗಳವರೆಗೆ ಇದು ವರ್ಷಕ್ಕೆ 3.5 ಕೋಟಿ ಪ್ರಯಾಣಿಕರನ್ನು ನಿರ್ವಹಿಸಬಲ್ಲದು. ಪರಂದೂರು ವಿಮಾನ ನಿಲ್ದಾಣಕ್ಕೆ ಸ್ಥಳ ಅನುಮತಿ ನೀಡಲು ರಕ್ಷಣಾ ಸಚಿವಾಲಯವು ಆಕ್ಷೇಪಣೆಯಿಲ್ಲ ಎಂದು ಸಹ ಹೇಳಿಕೆಯನ್ನು ನೀಡಿದೆ.
ಪರಂದೂರು ವಿಮಾನ ನಿಲ್ದಾಣವು ವಾರ್ಷಿಕವಾಗಿ 10 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಚೆನ್ನೈ ಬಳಿಯ ಎರಡನೇ ವಿಮಾನ ನಿಲ್ದಾಣವಾಗಲಿದೆ. ಇದು ಎರಡು ರನ್‌ವೇಗಳು, ಟರ್ಮಿನಲ್ ಕಟ್ಟಡಗಳು, ಟ್ಯಾಕ್ಸಿವೇಗಳು, ಮತ್ತು ಸರಕು ಟರ್ಮಿನಲ್ ಅನ್ನು ಹೊಂದಿರುತ್ತದೆ.
1 ಆಗಸ್ಟ್ 2024 ರಂದು, ಕೇಂದ್ರವು ಪರಂದೂರು ವಿಮಾನ ನಿಲ್ದಾಣಕ್ಕಾಗಿ ಸೈಟ್ ಕ್ಲಿಯರೆನ್ಸ್ ಅನ್ನು ನೀಡಿತು ಮತ್ತು ಒಂದು ತಿಂಗಳಲ್ಲಿ, ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮವು ಅರ್ಜಿಯನ್ನು ಕಳುಹಿಸಿತು ಮತ್ತು ನಾಗರಿಕ ವಿಮಾನಯಾನ ಸಚಿವಾಲಯದಿಂದ 'ತಾತ್ವಿಕ' ಅನುಮೋದನೆಯನ್ನು ಕೋರಿತ್ತು. ರಾಜ್ಯ ಸರ್ಕಾರದ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರೆ, ಹೆಚ್ಚಿನ ಇಲಾಖೆಗಳು ವಿಮಾನ ನಿಲ್ದಾಣ ಯೋಜನೆಯನ್ನು ಬೆಂಬಲಿಸಿವೆ ಆದರೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವ ಮೊದಲು ರಾಜ್ಯ ಸರ್ಕಾರವು ಕೆಲವು ಅವಲೋಕನಗಳು ಮತ್ತು ಅವಶ್ಯಕತೆಗಳನ್ನು ಅನುಸರಿಸಬೇಕು ಎಂದು ಮೂಲಗಳು ಮಾಹಿತಿಯನ್ನು ತಿಳಿಸಿವೆ.
ಉದಾಹರಣೆಗೆ, ಚಿಮಣಿಗಳು ಮತ್ತು ವಿದ್ಯುತ್ ಮಾರ್ಗಗಳು ಸೇರಿದಂತೆ ಕೆಲವು ಅಡೆತಡೆಗಳನ್ನು ತೆಗೆದುಹಾಕಬೇಕಾಗಿದೆ ಎಂದು DGCA ಫ್ಲ್ಯಾಗ್ ಮಾಡಿದೆ. ಅಂತೆಯೇ, ಜಲಮೂಲಗಳ ಉಪಸ್ಥಿತಿ ಮತ್ತು ಪ್ರವಾಹದ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು. ಸಭೆಯಲ್ಲಿ, ರಾಜ್ಯ ಸರ್ಕಾರವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ವಿಸ್ತೃತ ಯೋಜನೆಯನ್ನು ರೂಪಿಸಿದ್ದೇವೆ ಮತ್ತು ಅಡೆತಡೆಗಳನ್ನು ಸಹ ತೆಗೆದುಹಾಕಲಾಗುವುದು ಎಂದು ಹೇಳಿದರು. ಸಭೆಯಲ್ಲಿ, NITI ಆಯೋಗ್ ಯೋಜನೆಯಿಂದ ತೊಂದರೆಗೊಳಗಾಗುವ 1,005 ಕುಟುಂಬಗಳ ಬಗ್ಗೆ ಮತ್ತು ಅವರ ಪುನರ್ವಸತಿ ಬಗ್ಗೆ ಕೇಳಿದೆ. ಅವರಿಗಾಗಿ ವಿಶೇಷ ಕಾರ್ಯಕ್ರಮಕ್ಕಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications