ಬೆಂಗಳೂರು: ಈ ಬಾರಿಯ ಹುರುನ್ ಇಂಡಿಯಾ 35 ವರ್ಷದೊಳಗಿನ 35 ಸ್ವಯಂ ನಿರ್ಮಿತ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟವರಲ್ಲಿ ಪರಿತಾ ಪರೇಖ್ ಕೂಡಾ ಒಬ್ಬರು. ಪರಿತಾ ಅವರು ಭಾರತದ ಟೆಕ್ ಕ್ಷೇತ್ರದಲ್ಲಿ ಉದಯೋನ್ಮುಖ ಉದ್ಯಮಿಯಾಗಿ, ಶಿಕ್ಷಣ ತಂತ್ರಜ್ಞಾನದಲ್ಲಿನ ತಮ್ಮ ವಿನೂತನ ಪ್ರಯತ್ನಗಳಿಂದ ಖ್ಯಾತರಾಗಿದ್ದಾರೆ.
ಭಾರತದ ಅತ್ಯಂತ ಕಿರಿಯ ಉದ್ಯಮಿಗಳಲ್ಲಿ ಒಬ್ಬರಾದ ಪರಿತಾ ಪರೇಖ್ ed-tech ವೇದಿಕೆಯಾಗಿರುವ "ಟಾಡಲ್" ನ ಸಹ ಸಂಸ್ಥಾಪಕಿಯಾಗಿದ್ದಾರೆ. ಪರಿತಾ ಅವರ ಅವರ ಉದ್ಯಮಶೀಲತೆಯ ಪ್ರಯಾಣದ ಜೊತೆಗೆ ಅವರ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯು ಸೇರಿಕೊಂಡು, ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವಲ್ಲಿ ಅವರಿಗಿದ್ದ ಅಚಲ ನಿರ್ಧಾರವನ್ನು ಪ್ರತಿಬಿಂಬಿಸುತ್ತದೆ.

ಅತ್ಯುತ್ತಮ ಶೈಕ್ಷಣಿಕ ಅರ್ಹತೆಯ ಅಡಿಪಾಯ:
ಪರಿತಾ ಅವರು ಅಹಮದಾಬಾದ್‌ನಲ್ಲಿರುವ ಶಿಕ್ಷಣ ತಜ್ಞರು ಮತ್ತು ಕೈಗಾರಿಕೋದ್ಯಮಿಗಳ ಕುಟುಂಬದಲ್ಲಿ ಬೆಳೆದುಬಂದವರು. ಬಾಲ್ಯದಿಂದಲೂ ಜಾಣ ವಿದ್ಯಾರ್ಥಿ ಮತ್ತು ನಿಪುಣ ಸ್ವಿಮ್ಮರ್ ಆಗಿದ್ದರು. ಶಾಲಾ ಶಿಕ್ಷಣದ ಬಳಿಕ ಇವರು ಬ್ರೌನ್ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದರು. ಈ ವೇಳೆ ಅವರು ತಮ್ಮ ಕ್ಯಾಪ್ಸ್ಟೋನ್ ಪ್ರಬಂಧದ ಮೂಲಕ ಶಿಕ್ಷಣದ ಮೇಲೆ ಕೇಂದ್ರೀಕರಿಸಿದರು. ಶಿಕ್ಷಣ ಸಿದ್ಧಾಂತದ ಈ ಆರಂಭಿಕ ಕೆಲಸವು ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡುವ ಅವರಲ್ಲಿದ್ದ ಗುರಿಯನ್ನು ಮತ್ತಷ್ಟು ಬಲಪಡಿಸಿತು. ಇದಾದ ಬಳಿಕ ಮುಂದೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ರು. ಇದರೊಂದಿಗೆ ಅವರು ಚೈಲ್ ಹುಡ್ ಎಜ್ಯುಕೇಶನ್ (ಬಾಲ್ಯದ ಶಿಕ್ಷಣ) ದಲ್ಲಿ ಪರಿಣತಿ ಯನ್ನು ಪಡೆದುಕೊಂಡರು. ಈ ಅನುಭವವು ಮಕ್ಕಳ-ಕೇಂದ್ರಿತ ಕಲಿಕೆಯ ಬಗ್ಗೆ ಅವರಿಗಿದ್ದ ತಿಳುವಳಿಕೆಯನ್ನು ಇಮ್ಮಡಿಗೊಳಿಸಿತು. ಶೈಕ್ಷಣಿಕ ವ್ಯವಸ್ಥೆಗಳ ಕುರಿತು ಜಾಗತಿಕ ದೃಷ್ಟಿಕೋನವನ್ನು ಒದಗಿಸಿತು.
ಸ್ಟ್ಯಾನ್‌ಫೋರ್ಡ್‌ನಲ್ಲಿದ್ದ ವ್ಯಾಸಂಗ ಮಾಡುತ್ತಿದ್ದ ವೇಳೆ, ಪರಿತಾ ಅವರು ಸಂಶೋಧನೆ ಮತ್ತು ತಂತ್ರಜ್ಞಾನ ಕಲಿಕೆ ಕಡೆಗೆ ಒಡ್ಡಿಕೊಂಡಿದ್ದು ಮುಂದೆ ಅವರ ಉದ್ಯಮಶೀಲತೆಯ ಉತ್ಸಾಹಕ್ಕೆ ಮತ್ತಷ್ಟು ಪೂರಕವಾಯಿತು. ಇದು ಮುಂದೆ ನೂತನ ಎಡ್-ಟೆಕ್ ಪರಿಹಾರತ್ಮಾಕ ಕ್ರಮಗಳತ್ತ ಅವರನ್ನು ಹೆಜ್ಜೆ ಇರಿಸುವಂತೆ ಮಾಡಿತು.
ಟಾಡ್ಲರ್ಸ್ ಡೆನ್‌ನ ಸಹ-ಸಂಸ್ಥಾಪಕಿಯಾದ ಅನುಭವ:
ಟಾಡಲ್ ಅನ್ನು ಸಹ-ಸ್ಥಾಪಿಸುವ ಮೊದಲು, ಕಲಿಕಾ ಕೇಂದ್ರವಾದ ಟಾಡ್ಲರ್ಸ್ ಡೆನ್(ಟಾಡ್ಲರ್ಸ್ ಡೆನ್)ನ ಸಹ-ಸಂಸ್ಥಾಪಕಿಯಾಗಿ ಪರಿತಾ ಅಮೂಲ್ಯವಾದ ಅನುಭವವನ್ನು ಪಡೆದುಕೊಂಡರು. ಶಾಲೆಯ ಪಠ್ಯಕ್ರಮವನ್ನು ರೂಪಿಸುವಲ್ಲಿ ಮತ್ತು ಸಮಗ್ರ ಕಲಿಕೆಯ ಅನುಭವಗಳನ್ನು ಹೆಚ್ಚಿಸಿಕೊಳ್ಳುವಲ್ಲಿನ ಅವರ ಹಾದಿಯೂ ಆರಂಭಿಕ ಶಿಕ್ಷಣದಲ್ಲಿನ ಸವಾಲುಗಳು ಮತ್ತು ಅವಕಾಶಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಅವರ ಅನುಭವಗಳು ಮತ್ತು ಶಿಕ್ಷಣವನ್ನು ಹೆಚ್ಚಿಸುವ ತಂತ್ರಜ್ಞಾನದ ಸಾಮರ್ಥ್ಯದಿಂದ ಪ್ರೇರಿತರಾದ ಪರಿತಾ 2019 ರಲ್ಲಿ "ಟಾಡಲ್" ಅನ್ನು ಸಹ-ಸ್ಥಾಪಿಸಿದರು. ವಿಚಾರಧಾರಿತ ಕಲಿಕೆ ಮತ್ತು ಆಧುನಿಕ ಪಠ್ಯಕ್ರಮದ ಜೊತೆಗೆ ಶಿಕ್ಷಕರಿಗೆ ಪ್ರೋತ್ಸಾಹಿಸಲು ಅರ್ಥಗರ್ಭಿತ ಸಾಧನಗಳನ್ನು ಒದಗಿಸುವ ಈ ವೇದಿಕೆಯನ್ನು ಪ್ರಮುಖ ಉದ್ದೇಶವಾಗಿತ್ತು. ಸಾಂಪ್ರದಾಯಿಕ ವಿಧಾನಗಳು ಮತ್ತು ಆಧುನಿಕ ಶೈಕ್ಷಣಿಕ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಪರಿತಾ ಅವರು ಸೃಜನಶೀಲತೆ, ವಿಚಾರ ಆಧಾರಿತಕ್ಕೆ ಒತ್ತು ನೀಡುವ ಮೂಲಕ ಶಿಕ್ಷಣದ ರೂಪಾಂತರಕ್ಕೆ ಹಾಗೂ ಶಿಕ್ಷಕರ ಸಬಲೀಕರಣಕ್ಕೆ ಪ್ರಯತ್ನಪಡುತ್ತಿದ್ದಾರೆ.
ಹುರುನ್ ಇಂಡಿಯಾ 35 ಮತ್ತು ಸ್ವಯಂ ನಿರ್ಮಿತ ಉದ್ಯಮಿಗಳ ಲಿಸ್ಟ್ ನಲ್ಲಿ ಪರಿತಾ ಅವರು ಸ್ಥಾನ ಗಳಿಸಿಕೊಂಡಿರುವುದು ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಪ್ರಭಾವ ಮತ್ತು ಸಾಧನೆಗಳನ್ನು ಒತ್ತಿ ಹೇಳುತ್ತದೆ. ಟಾಡಲ್‌ನಲ್ಲಿ ಅವರ ನಾಯಕತ್ವದ ಮೂಲಕ ಅವರು ಹೊಸ ತಲೆಮಾರಿನ ಶಿಕ್ಷಣತಜ್ಞರು ಮತ್ತು ಉದ್ಯಮಿಗಳಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಶಿಕ್ಷಣ ಬಗ್ಗೆ ಅವರಿದ್ದ ಸಮರ್ಪಣಾ ಭಾವ ಅವರನ್ನು ಎಡ್-ಟೆಕ್ ವಲಯದಲ್ಲಿ ಪ್ರವರ್ತಕರನ್ನಾಗಿಸಿದೆ. ಪರಿತಾ ಅವರ ಕಥೆಯು ಉತ್ಸಾಹ, ನಾವೀನ್ಯತೆ ಮತ್ತು ಜಗತ್ತಿನಲ್ಲಿ ಶಾಶ್ವತವಾದ ಬದಲಾವಣೆಯನ್ನು ಸೃಷ್ಟಿಸಲು ಶಿಕ್ಷಣದ ಬದ್ಧತೆಯ ಶಕ್ತಿಗೆ ಸಾಕ್ಷಿಯಾಗಿದೆ.


Click it and Unblock the Notifications