ಜನನಿಬಿಡ ನಗರಗಳಲ್ಲಿ ಬೆಂಗಳೂರು (Bengaluru) ಕೂಡಾ ಒಂದು. ಆದರೆ ದಿನೇ ದಿನೇ ಬೆಂಗಳೂರಿನಲ್ಲಿ ಪವರ್ ಕಟ್, ಟ್ರಾಫಿಕ್ ಸಮಸ್ಯೆ, ನೀರಿನ ಸಮಸ್ಯೆ, ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದಕ್ಕಾಗಿ ಬೆಂಗಳೂರು ಮಹಾನಗರ ಪಾಲಿಕೆ (GBA) ಕೂಡಾ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಇದೀಗ ಬೆಂಗಳೂರು ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸ ಕ್ರಮ ಕೈಗೊಂಡಿದೆ. ಹೌದು, ಇನ್ಮೇಲೆ ಸಿಕ್ಕ ಸಿಕ್ಕಲ್ಲಿ, ಮನಬಂದಂತೆ ಪಾರ್ಕಿಂಗ್ ಮಾಡುವಂತಿಲ್ಲ. ಇನ್ಮುಂದೆ ರೋಡ್ ಸೈಡ್ ಪಾರ್ಕಿಂಗ್ ಮಾಡೋಕು ಶುಲ್ಕ (Parking Fees) ವಿಧಿಸಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಹೌದು, ಇನ್ಮೇಲೆ ಬೆಂಗಳೂರಿನಲ್ಲಿ ಪಾರ್ಕಿಂಗ್ ಸಂಬಂಧಿಸಿ ಹೊಸ ನಿಯಮ ಜಾರಿಗೆ ಬರಲಿದೆ. ರಾಜ್ಯ ಸರ್ಕಾರಕ್ಕೆ ಗ್ರೇಟರ್ ಬೆಂಗಳೂರು ಅಧಿಕಾರಿಗಳು ಪೇ ಆಂಡ್ ಪಾರ್ಕ್ ಎಂಬ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಂದರೆ ಇನ್ಮೇಲೆ ಸಾರ್ವಜನಿಕ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಬೇಕೆಂದರೆ ಶುಲ್ಕ ಕಟ್ಟಬೇಕಾಗುತ್ತದೆ.
ಎಲ್ಲೆಲ್ಲಿ ಜಾರಿಯಾಗುತ್ತೆ ಪಾರ್ಕಿಂಗ್ ಶುಲ್ಕ ನಿಯಮ?
ಸದ್ಯ ಹೆಬ್ಬಾಳ ವಿಭಾಗದ ಟ್ಯಾಂಕ್ ಬಂಡ್ ರೋಡ್, ತರಳಬಾಳು ರೋಡ್ ಮತ್ತು ಭೂಪಸಂದ್ರ ಮೈನ್ ರೋಡ್‌ನಲ್ಲಿ ಈ ನಿಯಮ ಜಾರಿಗೆ ತರಲಿದೆ. ಅಲ್ಲದೇ ಯಲಹಂ ಹೊಸ ಪಟ್ಟಣದ ವಾರ್ಡ್ ನಂಬರ್ 05 ರಲ್ಲಿ 1ನೇ ಎ, 13ನೇ ಎ ಮೈನ್ ರೋಡ್‌ಗಳು ಮತ್ತು 3ನೇ ಬಿ, 16ನೇ ಬಿ, 15ನೇ ಎ ಅಡ್ಡ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕದ ನಿಯಮ ಜಾರಿಗೆ ಬರಲಿದೆ. ಅಲ್ಲದೇ ಸಂದೀಪ್ ಉನ್ನಿಕೃಷ್ಣ ರಸ್ತೆಗಳಲ್ಲೂ ಇನ್ಮೇಲೆ ಪಾರ್ಕಿಂಗ್‌ಗೆ ಶುಲ್ಕ ಪಾವತಿ ಮಾಡಬೇಕು.
ಶುಲ್ಕದ ಮೊತ್ತ ಎಷ್ಟು?
ವಾಹನಗಳ ವಿಧದ ಪ್ರಕಾರ, ಪಾರ್ಕಿಂಗ್ ಶುಲ್ಕಗಳನ್ನು ವಿಧಿಸಲಾಗುತ್ತದೆ. ಆ ಪ್ರಕಾರ, ನಾಲ್ಕು ಚಕ್ರಗಳ ವಾಹನಗಳ ಪಾರ್ಕಿಂಗ್‌ಗೆ ಗಂಟೆಗೆ 30 ರೂ. ಶುಲ್ಕ ವಿಧಿಸಿದರೆ, ದ್ವಿಚಕ್ರ ವಾಹನಗಳಿಗೆ ಗಂಟೆಗೆ 15 ರೂ. ವಿಧಿಲಾಗಿದೆ. ದರ ನೋಡಿಕೊಂಡು ವಾಹನ ಮಾಲೀಕರು ಹಣ ಪಾವತಿ ಮಾಡಬೇಕಾಗುತ್ತದೆ. ಇನ್ನು ದೈನಂದಿನ ಪಾಸ್ ಸೇವೆಯೂ ನೀಡಲಾಗಿದ್ದು, ಅದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ. ದೈನಂದಿನ ಪಾಸ್ ಮೊತ್ತ ನಾಲ್ಕು ಚಕ್ರದ ವಾಹನಗಳಿಗೆ 150 ರೂ. ಆದ್ರೆ, ದ್ವಿಚಕ್ರದ ವಾಹನಗಳಿಗೆ 75 ರೂ. ಆಗಿರುತ್ತದೆ. ಇನ್ನು ಮಾಸಿಕ ಪಾಸ್ ಅನ್ನೂ ನೀಡಲಾಗುತ್ತಿದ್ದು, ಅದಕ್ಕಾಗಿ ನಾಲ್ಕು ಚಕ್ರದ ವಾಹನ ಮಾಲೀಕರು 3000 ಸಾವಿರ ರೂ. ಮತ್ತು ಎರಡು ಚಕ್ರದ ವಾಹನ ಮಾಲೀಕರು 1,500 ರೂ. ಪಾವತಿ ಮಾಡಬೇಕು.
ಈಗಾಗಲೇ ಖಾಸಗಿ ಜಾಗಗಳಲ್ಲಿ ವಾಹನಗಳ ಪಾರ್ಕಿಂಗ್‌ಗಾಗಿ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಇದೀಗ ಸಾರ್ವಹನಿಕ ಸ್ಥಳಗಳಲ್ಲೂ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಕಾರಿಗೆ ಬರಲಿದೆ. ಸದ್ಯ ಕೆಲವು ಸ್ಥಳಗಳಲ್ಲಿ ಮಾತ್ರ ಈ ನಿಯಮ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲೆಲಿ ಬರುತ್ತೆ ಎಂದು ಕಾದು ನೋಡಬೇಕಿದೆ.


Click it and Unblock the Notifications