ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಇತ್ತೀಚೆಗೆ ಟ್ರಾಫಿಕ್ ಸಮಸ್ಯೆ (Traffic Problem) ದಿನಹೋದಂತೆ ಹೆಚ್ಚಾಗುತ್ತಲೇ ಹೋಗುತ್ತಿದೆ ಹೊರತು, ಕಮ್ಮಿಯಾಗುತ್ತಿಲ್ಲ. ಈ ಮಧ್ಯೆ ದಿನಕ್ಕೊಂದು ಹೊಸ ಹೊಸ ಗಾಡಿಗಳು ರಸ್ತೆಗಿಳಿಯುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗಾಗಿ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ಬೆಂಗಳೂರಿನಲ್ಲಿ ಶೀಘ್ರದಲ್ಲೇ ಸುಸಂಘಟಿತ ಪಾರ್ಕಿಂಗ್ ಶುಲ್ಕ ನೀತಿಯನ್ನು ಜಾರಿಗೆ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಿದ್ಧತೆ ನಡೆಸುತ್ತಿದೆ. ರಸ್ತೆಬದಿಯ ಪಾರ್ಕಿಂಗ್ ಅನ್ನು ನಿಯಂತ್ರಿಸಿ, ಖಾಸಗಿ ಪಾರ್ಕಿಂಗ್ ಸ್ಥಳಗಳ ದುರುಪಯೋಗವನ್ನು ತಡೆಯುವುದು ಈ ಕರಡು ನೀತಿಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತಾಪಿತ ಕರಡು ಪ್ರಕಾರ, ವಾಹನ ಮಾಲೀಕರು ತಮ್ಮ ಮನೆಯ ಆವರಣದ ಹೊರಗೆ, ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲ್ಲಿಸಿದರೆ, ಇನ್ಮುಂದೆ ಶುಲ್ಕ ಪಾವತಿಸಬೇಕಾಗುತ್ತದೆ.
ಇನ್ಮೇಲೆ ಪಾರ್ಕಿಂಗ್‌ಗೂ ಕಟ್ಟಬೇಕು ಶುಲ್ಕ!
ಈ ನೀತಿಯಡಿ, ಪ್ರತಿ ಕಾರಿಗೆ ತಿಂಗಳಿಗೆ 3,000 ರೂಪಾಯಿಗಳವರೆಗೆ ಶುಲ್ಕ ವಿಧಿಸುವ ಪ್ರಸ್ತಾಪವಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಇದರ ಅನುಷ್ಠಾನವಾಗುವ ಸಾಧ್ಯತೆಯಿದೆ. ನಗರದಾದ್ಯಂತ ನಿಗದಿತ ಪಾರ್ಕಿಂಗ್ ವಲಯಗಳನ್ನು ಗುರುತಿಸಲಾಗುವುದು ಮತ್ತು ಶುಲ್ಕ ಪಾವತಿಸುವವರಿಗೆ ಮಾತ್ರ ಅಲ್ಲಿ ವಾಹನ ನಿಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಈ ಕ್ರಮವು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಭಾಯಿಸಲು ಮತ್ತು ಕಟ್ಟಡ ನಿರ್ಮಾಣದಲ್ಲಾಗುತ್ತಿರುವ ದುರುಪಯೋಗ, ಪಾರ್ಕಿಂಗ್‌ಗೆ ಸರಿಯಾದ ಸ್ಥಳ ನಿಯೋಜನೆ ಮಾಡುವುದೇ ಇದರ ಉದ್ದೇಶದವಾಗಿದೆ. ಸಿಕ್ಕ ಸಿಕ್ಕಲ್ಲಿ ರಸ್ತೆಬದಿ ಪಾರ್ಕಿಂಗ್ ಮಾಡುವುದರಿಂದ, ವಾಹನ ಸವಾರರು, ಪಾದಚಾರಿಗಳು ಹಾಗೂ ಒಟ್ಟಾರೆ ಸಾರ್ವಜನಿಕರಿಗೆ ಅನೇಕ ಸಮಸ್ಯೆಯನ್ನುಂಟುಮಾಡುವುದಲ್ಲದೆ ಅಪಘಾತಗಳಿಗೂ ಕಾರಣವಾಗುತ್ತಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಮಾತನಾಡಿ, ಅನೇಕ ನಿವಾಸಿಗಳು ತಮ್ಮ ಮನೆಗಳ ಮುಂದೆ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ಶುಲ್ಕ ಅಥವಾ ತೆರಿಗೆ ಪಾವತಿಸದೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಆದ್ದರಿಂದ, ಪಾರ್ಕಿಂಗ್ ಸಮಸ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಮುಂದಾಗಿದ್ದೇವೆ ಎನ್ನಲಾಗಿದೆ. "ಸಾರ್ವಜನಿಕ ರಸ್ತೆಗಳನ್ನು ಖಾಸಗಿ ಆಸ್ತಿ ಎಂದು ಪರಿಗಣಿಸಲಾಗುತ್ತಿದೆ. ವೈಯಕ್ತಿಕ ಸಮಸ್ಯೆಗಳು ಸಾರ್ವಜನಿಕ ಸಮಸ್ಯೆಗಳಾಗಿ ಬದಲಾಗುತ್ತಿವೆ," ಎಂದು ಹೇಳಿದರು. ಕೆಲವೇ ದಿನಗಳಲ್ಲಿ ಈ ನೀತಿ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ, ಇನ್ಮೇಲೆ ಸಿಕ್ಕ ಸಿಕ್ಕಲ್ಲಿ ಯಾರೂ ಪಾರ್ಕಿಂಗ್ ಮಾಡಲಾಗುವುದಿಲ್ಲ. ವಿಶೇಷವಾಗಿ ಸರ್ವೀಸ್ ರಸ್ತೆಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ವಾಹನಗಳು ನಿಂತಲ್ಲೇ ಜಾಮ್ ಆಗುತ್ತದೆ. ಒಂದು ವಾಹನದಿಂದಾಗಿ ನಂತರ ಸಾಲು ಸಾಲು ವಾಹನಗಳು ನಿಲ್ಲುತ್ತದೆ. ಅದೇ ಕಾರಣದಿಂದ ನಂತರ ಟ್ರಾಫಿಕ್ ಸಮಸ್ಯೆಯನ್ನುಂಟು ಮಾಡುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ವಿಶೇಷ ಕ್ರಮಕ್ಕೆ ಮುಂದಾಗಿದ್ದು, ಈ ನೀತಿಯಲ್ಲಿ ಬೈಕ್, ಕಾರುಗಳಿಗೆ ಪ್ರತ್ಯೇಕ ಶುಲ್ಕ ಇರಲಿದೆ ಎನ್ನಲಾಗಿದೆ.


Click it and Unblock the Notifications