"ಪೂರ್ವಗ್ರಹ ಇಲ್ಲದ ಸಾಮಾಜಿಕ ಮಾಧ್ಯಮ" Parler ಶುಕ್ರವಾರದಂದು ಉಚಿತ ಆಪ್ಲಿಕೇಷನ್ ಗಳ ವಿಭಾಗದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದ ಮರು ದಿನವಾದ ಶನಿವಾರ ಆಪಲ್ ಕಂಪೆನಿಯು ಆ ಅಪ್ಲಿಕೇಷನ್ ಅನ್ನು ಅಮಾನತು ಮಾಡಿದೆ.
"ಆಪ್ ಸ್ಟೋರ್ ನಲ್ಲಿ ವಿವಿಧ ಆಯಾಮದ ಅಂಶಗಳನ್ನು ಪ್ರತಿನಿಧಿಸುವುದನ್ನು ನಾವು ಯಾವಾಗಲೂ ಬೆಂಬಲಿಸುತ್ತೇವೆ, ಆದರೆ ಹಿಂಸೆಯ ಆತಂಕವೊಡ್ಡುವ ಮತ್ತು ಕಾನೂನುಬಾಹಿರ ಚಟುವಟಿಕೆಗೆ ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ಸ್ಥಾನವಿಲ್ಲ," ಎಂದು ಆಪಲ್ ಕಂಪೆನಿಯ ವಕ್ತಾರರು FOX ಬಿಜಿನೆಸ್ ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಜನರ ಸುರಕ್ಷತೆಗೆ ಆತಂಕವೊಡ್ಡುವ ಮಾಹಿತಿಯನ್ನು ಪ್ರಚುರ ಮಾಡುವುದನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಪಾರ್ಲೆರ್ ಅಗತ್ಯ ಕ್ರಮ ತೆಗೆದುಕೊಂಡಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವ ತನಕ ಆಪ್ ಸ್ಟೋರ್ ನಿಂದ ಪಾರ್ಲೆರ್ ಅಮಾನತು ಮಾಡಿದ್ದೇವೆ," ಎಂದು ಹೇಳಲಾಗಿದೆ.
ಆಪ್ ಪರಿಶೀಲನಾ ಮಂಡಳಿಯಿಂದ ಪಾರ್ಲೆ ಅಧಿಕಾರಿಗಳಿಗೆ ಪತ್ರ
ಆಪ್ ಪರಿಶೀಲನಾ ಮಂಡಳಿಯಿಂದ ಪಾರ್ಲೆ ಅಧಿಕಾರಿಗಳಿಗೆ ಪತ್ರ ಬರೆದು, "ಆಪ್ ಸ್ಟೋರ್ ಮಾರ್ಗದರ್ಶನ ಸೂತ್ರಕ್ಕೆ ಬದ್ಧವಾಗದ ಹೊರತು ಪಾರ್ಲೆರ್ ಆಪ್ ತೆಗೆಯಲಾಗಿರುತ್ತದೆ. ಪರಿಣಾಮಕಾರಿಯಾಗಿ ಬದಲಾವಣೆ ಮಾಡಿ, ಅಪಾಯಕಾರಿ ಹಾಗೂ ತೊಂದರೆಯಾಗುವಂಥ ಮಾಹಿತಿಯನ್ನು ನಿಮ್ಮ ಸೇವೆಯಿಂದ ಹೊರಗಿಡಬೇಕು." ಎನ್ನಲಾಗಿದೆ.
ಗೂಗಲ್ ಕೂಡ ಶುಕ್ರವಾರದಂದು ಆಪ್ ಸ್ಟೋರ್ ನಿಂದ ಪಾರ್ಲೆರ್ ಅನ್ನು ಅಮಾನತು ಮಾಡಿತ್ತು. ದ ಫೆಡರಲಿಸ್ಟ್ ಸಹ ಸಂಸ್ಥಾಪಕ ಸೀನ್ ಡೇವಿಸ್ ಟ್ವೀಟ್ ಮಾಡಿ, "ಸೆನ್ಸಾರ್ ಷಿಪ್ ಪಾಲಿಸಿಗಳನ್ನು" ಅನುಸರಿಸುವಂತೆ ಅಥವಾ ಡಿಲಿಸ್ಟ್ ಎದುರಿಸಬೇಕು ಎಂದು ಪಾರ್ಲೆರ್ ಗೆ ಆಪಲ್ ಕೇಳುತ್ತಿದೆ ಎಂಬುದನ್ನು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಕ್ಯಾಪಿಟಾಲ್ ನಲ್ಲಿ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿ, ರಕ್ತಪಾತವಾದ ಮೇಲೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಯಕ್ತಿಕ ಖಾತೆಯನ್ನು ನಿಷೇಧಿಸುವುದಾಗಿ ಟ್ವಿಟ್ಟರ್ ನಿಂದ ಘೋಷಿಸಿತ್ತು. ಆ ನಂತರ ಆಪಲ್ ಮತ್ತು ಗೂಗಲ್ ನಿಂದ ಪಾರ್ಲೆರ್ ಆಪ್ ಅಮಾನತು ಆಗಿದೆ.
4,50,000ಕ್ಕೂ ಹೆಚ್ಚು ಹೊಸ ಡೌನ್ ಲೋಡ್
ಡೇಟಾ ಅನಲಿಸ್ಟ್ಸ್ ಕಂಪೆನಿ ಆಪ್ ಶನಿವಾರದ ಅಂದಾಜಿನ ಪ್ರಕಾರ, ಆಪ್ ಸ್ಟೋರ್ ನಲ್ಲಿ ಪಾರ್ಲೆರ್ ಆಪ್ ಡೌನ್ ಲೋಡ್ 15 ಲಕ್ಷ ದಾಟಬಹುದು ಎಂದಿತ್ತು. ಶುಕ್ರವಾರದಂದು ಆಪ್ ಅಂದಾಜಿನಂತೆ, ಡೌನ್ ಲೋಡ್ 3,40,000 ದಾಟಿದೆ. ಕಳೆದ ವಾರ ಅದು 12000 ಇತ್ತು ಎಂದು ಕಂಪೆನಿ ದತ್ತಾಂಶದ ತಿಳಿದುಬಂದಿದೆ. ಬುಧವಾರ ಮತ್ತು ಶುಕ್ರವಾರದ ಮಧ್ಯೆ 4,50,000ಕ್ಕೂ ಹೆಚ್ಚು ಹೊಸ ಡೌನ್ ಲೋಡ್ ಆಗಿದೆ.
ಗೂಗಲ್ ವಕ್ತಾರರು ಫಾಕ್ಸ್ ನ್ಯೂಸ್ ಗೆ ಶುಕ್ರವಾರದ ಹೇಳಿಕೆಯಲ್ಲಿ ನೀಡಿರುವ ಸ್ಪಷ್ಟತೆ ಪ್ರಕಾರ, ಬಳಕೆದಾರರಿಗೆ ಮಾಹಿತಿಯನ್ನು ಒದಗಿಸುವ ಅಪ್ಲಿಕೇಷನ್ ಗಳು ನಿಯಮಾವಳಿಗೆ ಬದ್ಧವಾಗಿರಬೇಕು. ಹಿಂಸೆಯನ್ನು ಪ್ರಚೋದಿಸುವ ಪೋಸ್ಟ್ ಗಳೂ ಸೇರಿದಂತೆ ಕೆಲವು ಆಕ್ಷೇಪಾರ್ಹ ಮಾಹಿತಿಯನ್ನು ತೆಗೆಯಬೇಕು. ಆಪ್ ಡೆವಲಪರ್ ಗಳು ಈ ನಿಯಮಕ್ಕೆ ಒಪ್ಪಿರುತ್ತಾರೆ ಎಂದಿದೆ.
ಯುಎಸ್ ಸಂವಿಧಾನದ ಆಶಯಕ್ಕೆ ತಕ್ಕಂತೆಯೇ ಕೆಲಸ
ಪಾರ್ಲೆರ್ ಆಪ್ ನಲ್ಲಿ ಪೋಸ್ಟ್ ಗಳು ಮುಂದುವರಿದಂತೆ ಯು.ಎಸ್.ನಲ್ಲಿನ ಹಿಂಸೆಗೆ ಪ್ರಚೋದನೆ ಸಿಗುತ್ತಿದೆ ಎಂದು ನಮಗೆ ಗೊತ್ತಿದೆ. ಈಗ ನಡೆಯುತ್ತಿರುವ ಮತ್ತು ತುರ್ತಾಗಿ ಗಮನಿಸಬೇಕಾದ ಸಾರ್ವಜನಿಕ ಸುರಕ್ಷತೆಗೆ ಆತಂಕ ಒಡ್ಡುವ ಸಂಗತಿಯ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸುವ ತನಕ ಪ್ಲೇ ಸ್ಟೋರ್ ನಿಂದ ಅಪ್ಲಿಕೇಷನ್ ಅಮಾನತು ಮಾಡಿದ್ದೇವೆ ಎಂದು ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.
ಪಾರ್ಲೆ ಉದ್ದೇಶ ಏನೆಂದರೆ, ಯುನೈಟೆಡ್ ಸ್ಟೇಟ್ಸ್ ಸಂವಿಧಾನದ ಮೊದಲ ತಿದ್ದುಪಡಿಯ ಆಶಯದೊಂದಿಗೆ ಸೋಷಿಯಲ್ ಪ್ಲಾಟ್ ಫಾರ್ಮ್ ರೂಪಿಸುವುದು ಎಂದು ಕಮ್ಯುನಿಟಿ ಮಾರ್ಗದರ್ಶಿ ಸೂತ್ರದಲ್ಲಿ ಇದೆ. ಅದರ ಪ್ರಕಾರ, ಪಾರ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯ- ವಸ್ತುಗಳು, ಭಯೋತ್ಪಾದನಾ ಸಂಸ್ಥೆಗಳಿಂದ ಅಥವಾ ಪರವಾಗಿ ಹಾಕಿರುವ ವಿಚಾರಗಳು ಹಾಗೂ ಬೌದ್ಧಿಕ ಆಸ್ತಿ ಕಳುವು ವಿಷಯಗಳನ್ನು ಪ್ರಕಟಿಸುವುದಕ್ಕೆ ಅವಕಾಶ ನೀಡಲ್ಲ ಎಂದು ಕಂಪೆನಿ ಹೇಳಿದೆ.


Click it and Unblock the Notifications