ಭಾರತೀಯ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಇತ್ತೀಚೆಗೆ ಇಮೇಲ್ ಮೂಲಕ ಜೀವ ಬೆದರಿಕೆಯನ್ನು ಪಡೆದಿದ್ದಾರೆ. ದೇಶದಲ್ಲೇ ಅತೀ ಶ್ರೀಮಂತ ವ್ಯಕ್ತಿಯ ಬಳಿ ಹಣ ಕೇಳಲಾಗಿದ್ದು, ಹಣ ನೀಡದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಲಾಗಿದೆ.
ಪೊಲೀಸರ ಪ್ರಕಾರ, ಅಕ್ಟೋಬರ್ 27 ರಂದು 20 ಕೋಟಿ ರೂಪಾಯಿ ಮೊತ್ತಕ್ಕೆ ಬೇಡಿಕೆಯ ಬೆದರಿಕೆ ಬಂದಿದೆ. ಅನಾಮಧೇಯ ಇಮೇಲ್ ಶಾದಾಬ್ ಖಾನ್ ಎಂದು ಗುರುತಿಸಲಾಗಿದ್ದು, ಬೇಡಿಕೆಯ ಮೊತ್ತವನ್ನು ಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.

"ನೀವು ನಮಗೆ 20 ಕೋಟಿ ರೂಪಾಯಿಗಳನ್ನು ನೀಡದಿದ್ದರೆ, ನಾವು ನಿಮ್ಮನ್ನು ಕೊಲ್ಲುತ್ತೇವೆ. ನಾವು ಭಾರತದಲ್ಲಿ ಅತ್ಯುತ್ತಮ ಶೂಟರ್‌ಗಳನ್ನು ಹೊಂದಿದ್ದೇವೆ," ಎಂದು ಈ ಇಮೇಲ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಬೆದರಿಕೆ ಇಮೇಲ್ ಬಂದ ಬಳಿಕ ಮುಕೇಶ್ ಅಂಬಾನಿ ಮುಂಬೈ ನಿವಾಸ ಆಂಟಿಲಿಯಾದಲ್ಲಿ ದೂರು ದಾಖಲು ಮಾಡಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಗಾಮ್ದೇವಿ ಪೊಲೀಸರು ದೂರು ದಾಖಲಿಸಿದ್ದಾರೆ.
ಅದಾದ ಬಳಿಕ ಪ್ರಸಿದ್ಧ ಕೈಗಾರಿಕೋದ್ಯಮಿಗೆ ಈ ಬೆದರಿಕೆಯ ಹಿಂದಿನ ಅಪರಾಧಿಯನ್ನು ಗುರುತಿಸಲು ಸಮಗ್ರ ತನಿಖೆ ಆರಂಭಿಸಲಾಗಿದೆ. ಈ ಬೆದರಿಕೆಯು ಮುಕೇಶ್ ಅಂಬಾನಿಗೆ ಬಂದ ಇತ್ತೀಚಿನ ಬೆದರಿಕೆಗಳಲ್ಲಿ ಒಂದಾಗಿದೆ. ಗಮನಾರ್ಹವಾಗಿ, ಕಳೆದ ವರ್ಷ, ಅಪರಿಚಿತ ಕರೆ ಬಂದಿತ್ತು. ಅಂಬಾನಿ ಮತ್ತು ಅವರ ಕುಟುಂಬದ ವಿರುದ್ಧ ಬೆದರಿಕೆ ಹಾಕಿದ್ದರು.
ಅದಾದ ಬಳಿಕ ಭದ್ರತೆಯನ್ನು ಕೂಡಾ ಹೆಚ್ಚಳ ಮಾಡಲಾಗಿದೆ. ಆಗಸ್ಟ್ 2022 ರಲ್ಲಿ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಆಭರಣ ವ್ಯಾಪಾರಿಯನ್ನು ಬಂಧಿಸಲಾಗಿತ್ತು.


Click it and Unblock the Notifications