ಭಾರತದ ಪ್ರಮುಖ ಡಿಜಿಟಲ್ ಪಾವತಿ ಪೂರೈಕೆದಾರರಲ್ಲಿ ಒಂದಾದ ಪೇಟಿಎಂ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ)ಗೆ ಸೆಬಿ ಒಪ್ಪಿಗೆ ನೀಡಿದೆ. ಈ ಮೂಲಕ ಭಾರತದ ಅತಿದೊಡ್ಡ ಐಪಿಒ ಆಗಿ ಹೊರಹೊಮ್ಮಿದೆ.
ಶುಕ್ರವಾರ ಪೇಟಿಎಂ ಐಪಿಒ ಮೂಲಕ 16,600 ಕೋಟಿ ಬಂಡವಾಳ ಸಂಗ್ರಹಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅನುಮೋದನೆ ನೀಡಿದೆ. ಕಂಪನಿಯು ಈ ತಿಂಗಳ ಅಂತ್ಯದ ಹೊತ್ತಿಗೆ ಷೇರು ಮಾರುಕಟ್ಟೆ ಪ್ರವೇಶಿಸಲು ನಿರೀಕ್ಷೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಎಂದು ಕರೆಯಲ್ಪಡುವ ಕಂಪನಿಯು ನವೆಂಬರ್‌ನಲ್ಲಿ ಭಾರತದಲ್ಲಿ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲು ಯೋಜಿಸುತ್ತಿದೆ ಎಂದು ಈ ಹಿಂದೆ ವರದಿಯೊಂದು ಹೊರಬಿದ್ದಿತ್ತು.
ಆದರೆ ಈಗ ಪೇಟಿಎಂ ಮತ್ತೆ ಸುದ್ದಿಯಾಗಿದ್ದು, ಕಂಪನಿಯು ಇದೇ ತಿಂಗಳಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಷೇರುಪೇಟೆಯಲ್ಲಿ ನೋಂದಾಯಿತ ಆಗುವ ಪ್ರಕ್ರಿಯೆಗೆ ವೇಗ ನೀಡಬೇಕು ಎಂಬ ಉದ್ದೇಶದಿಂದ ಕಂಪನಿಯು ಐಪಿಒ ಪೂರ್ವದ ಷೇರು ಮಾರಾಟ ಪ್ರಕ್ರಿಯೆಯನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಪೇಟಿಎಂ ಡಿಜಿಟಲ್ ಪಾವತಿಗಳನ್ನು ಮೀರಿ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್‌ಗಳು, ಹಣಕಾಸು ಸೇವೆಗಳು, ಸಂಪತ್ತು ನಿರ್ವಹಣೆ ಮತ್ತು ಡಿಜಿಟಲ್ ವ್ಯಾಲೆಟ್‌ಗಳ ಪ್ರವೇಶ ಹೊಂದಿದೆ. ಇದು ಭಾರತದಲ್ಲಿ 2 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಪಾಲುದಾರರನ್ನು ಹೊಂದಿದ್ದು, 1.4 ಬಿಲಿಯನ್ ಬಳಕೆದಾರರು ಮಾಸಿಕ ವಹಿವಾಟುಗಳನ್ನು ನಡೆಸುತ್ತಾರೆ.


Click it and Unblock the Notifications