ನವದೆಹಲಿ, ಏಪ್ರಿಲ್ 19: ಈವರೆಗೆ ಪೇಟಿಎಂ ಯುಪಿಐ ಗ್ರಾಹಕರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಅನ್ನು ಬಳಸುತ್ತಿದ್ದರು, ಆದರೆ ಇದನ್ನು ಕಳೆದ ಕೆಲದಿನಗಳ ಹಿಂದೆ ಆರ್‌ಬಿಐ ನಿರ್ಬಂಧಿಸಿತ್ತು. ಈ ಹಿನ್ನಲೆ Paytm ನ ಮೂಲ ಕಂಪನಿ One97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL) ಪೇಟಿಎಂ ಯುಪಿಐ ಬಳಕೆದಾರರನ್ನು ಪಾಲುದಾರ ಪಾವತಿ ಸೇವಾ ಪೂರೈಕೆದಾರ ಬ್ಯಾಂಕ್‌ಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕಿಕ್‌ಸ್ಟಾರ್ಟ್ ಮಾಡಿದೆ. ಈ ನಿಟ್ಟಿನಲ್ಲಿ ಬಳಕೆದಾರರಿಗೆ ಈಗಾಗಲೇ ಪಾಪ್ ಅಪ್ ನೋಟಿಫಿಕೇಶನ್ ಕಳುಹಿಸಿದ್ದು, ಅನುಮೋದಿತ ಯುಪಿಐ ಐಡಿಗಳನ್ನು ಬ್ಯಾಂಕ್‌ಗಳಿಗೆ ವರ್ಗಾಯಿಸುವಂತೆ ತಿಳಿಸಿದೆ.
Paytm UPI ಹ್ಯಾಂಡಲ್ ಬಳಸುವ ಗ್ರಾಹಕರ ಖಾತೆಗಳನ್ನು ಈಗ ಪಾವತಿ ಸೇವಾ ಪೂರೈಕೆದಾರರ ಬ್ಯಾಂಕ್‌ಗಳು ನಿರ್ವಹಿಸುತ್ತವೆ. ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಯೆಸ್ ಬ್ಯಾಂಕ್ ಪೇಟಿಎಂ ಪಾಲುದಾರ ಬ್ಯಾಂಕ್‌ಗಳಾಗಿವೆ. ಪೇಟಿಎಂ ಪಾವತಿಗಳ ಬ್ಯಾಂಕ್ ಮೇಲೆ RBI ನಿರ್ಬಂಧಗಳ ಹಿನ್ನೆಲೆಯಲ್ಲಿ, ಪೇಟಿಎಂ ಥರ್ಟ್ ಪಾರ್ಟ್ ಅಪ್ಲಿಕೇಶನ್ ಆಗಿ ಉಳಿಯುತ್ತದೆ.

ಪ್ರಸ್ತುತ @paytm UPI ಹ್ಯಾಂಡಲ್ ಅನ್ನು ಬಳಸುತ್ತಿರುವ ಎಲ್ಲಾ ಬಳಕೆದಾರರನ್ನು ಈಗ Paytm ಪಾಲುದಾರ ಬ್ಯಾಂಕ್‌ಗಳ ಯುಪಿಐ ID ಗಳಿಗೆ ವರ್ಗಾಯಿಸಲಾಗುತ್ತದೆ. ಹೀಗಾಗಿ @ptsbi, @pthdfc, @ptaxis, @ptyes ಯುಪಿಐ ಐಡಿಗಳಿಗೆ ಬದಲಾಗುತ್ತದೆ. ಪೇಟಿಎಂ ಗ್ರಾಹಕರ ವಲಸೆ ಅಥವಾ ಸ್ಥಳಾಂತರ ಪ್ರಕ್ರಿಯೆಯು ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗುವಂತೆ ವ್ಯವಸ್ಥೆ ಮಾಡಿದೆ. ಸ್ಥಳಾಂತರ ಪ್ರಕ್ರಿಯೆಯೂ ಏ.೧೭ ರಿಂದ ಪ್ರಾರಂಭವಾಗಿದೆ.
ಆದರೂ, Paytm UPI ಹ್ಯಾಂಡಲ್‌ಗಳು ಬಳಕೆದಾರರ ಒಪ್ಪಿಗೆಯೊಂದಿಗೆ ಮಾತ್ರ ಹೊಸ ಯುಪಿಐ ಐಡಿಗಳಿಗೆ ಬದಲಾಗುತ್ತವೆ. ತಮ್ಮ ಯುಪಿಐ ಅನ್ನು ಬದಲಾಯಿಸಬೇಕಾದ ಎಲ್ಲಾ ಬಳಕೆದಾರರಿಗೆ Paytm ಪಾಪ್ ಅಪ್ ಅಧಿಸೂಚನೆಗಳನ್ನು ಕಳುಹಿಸುತ್ತಿದೆ. ಇದನ್ನು ಒಪ್ಪುವವರ ಯುಪಿಐ ಐಡಿಗಳನ್ನು Paytm ಪಾಲುದಾರ ಬ್ಯಾಂಕ್‌ಗಳ ಯುಪಿಐ ಐಡಿಗಳಾಗಿ ಪರಿವರ್ತಿಸಲಾಗುತ್ತದೆ. ಇನ್ನು ಮುಂದೆ ಬಳಕೆದಾರರ ಯುಪಿಐ ವಹಿವಾಟುಗಳನ್ನು ಆಯಾ ಬ್ಯಾಂಕ್‌ಗಳು ನಿರ್ವಹಿಸುತ್ತವೆ.
ಈ ಬೆಳವಣಿಗೆಯ ನಡುವೆಯೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮಾರ್ಚ್ 14 ರಂದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಪೂರೈಕೆದಾರ(third-party application provider) (TPAP)ರಾಗಿ ಮುಂದುವರಿಯಲು One97 ಕಮ್ಯುನಿಕೇಷನ್ಸ್ ಲಿಮಿಟೆಡ್ ಗೆ ತನ್ನ ಅನುಮೋದನೆಯನ್ನು ನೀಡಿದೆ. ಹೀಗಾಗಿ ಪೇಟಿಎಂ ಬಹು-ಬ್ಯಾಂಕ್ ಮಾದರಿಯ ಮೂಲಕ ಯುಪಿಐ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತದೆ.
KYC ನಿಯಮಗಳ ಉಲ್ಲಂಘನೆಯಿಂದಾಗಿ 2024 ಫೆಬ್ರವರಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Paytm ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಿತ್ತು. ಈ ಕ್ರಮಗಳು Paytmನ ಪ್ರಮುಖ ಕಾರ್ಯಚಟುವಟಿಕೆಗಳನ್ನು ಪಾವತಿ ಬ್ಯಾಂಕ್ ಆಗಿ ಅಮಾನತುಗೊಳಿಸುವುದಕ್ಕೆ ಕಾರಣವಾಯಿತು. ನಿಯಂತ್ರಕ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಾರ್ಚ್ 14 ರಂದು ಬಹು-ಬ್ಯಾಂಕ್ ಮಾದರಿಯೊಳಗೆ ಥರ್ಟ್ ಪಾರ್ಟಿ ಅಪ್ಲಿಕೇಶನ್ ಪೂರೈಕೆದಾರರಾಗಿ (TPAP) UPI ಸೇವೆಗಳಲ್ಲಿ ಭಾಗವಹಿಸಲು One97 ಕಮ್ಯುನಿಕೇಷನ್ಸ್ ಲಿಮಿಟೆಡ್ ಗೆ ಅನುಮೋದನೆಯನ್ನು ನೀಡಿತು.
ಆರ್‌ಬಿಐ ನಿರ್ಬಂಧಗಳು ಮತ್ತು ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮಾರ್ಚ್‌ನಲ್ಲಿ ಯುಪಿಐ ಮಾರುಕಟ್ಟೆಯಲ್ಲಿ Paytm ಷೇರು 9 ಪ್ರತಿಶತದಷ್ಟು ಕುಸಿದಿದೆ. ಫೆಬ್ರವರಿಯಲ್ಲಿ ಶೇ.11ರಷ್ಟು ಕಡಿಮೆಯಾಗಿದೆ. ಇದರೊಂದಿಗೆ ಪೇಟಿಎಂ ಯುಪಿಐ ಮಾರುಕಟ್ಟೆ ಪಾಲು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇಷ್ಟೆಲ್ಲಾ ಬೆಳವಣಿಗೆಗಳುನಡೆದರೂ, ಪೇಟಿಎಂ ತನ್ನ ಗ್ರಾಹಕರಿಗೆ ಯಾವುದೇ ತೊಂದರೆಗಳಿಲ್ಲದೆ ನಿರಂತರ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ ಅದಕ್ಕಾಗಿಯೇ ನಾಲ್ಕು ಪ್ರಮುಖ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆಯನ್ನು ಸ್ಥಾಪಿಸಿದ್ದು, ಗ್ರಾಹಕರ ಅನುಭವವನ್ನು ಇನ್ನಷ್ಟು ಹೆಚ್ಚಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದೆ.


Click it and Unblock the Notifications