For Quick Alerts
ALLOW NOTIFICATIONS  
For Daily Alerts

3 ದಿನಗಳ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ: ಬೆಂಗಳೂರಿನಲ್ಲಿ 94 ರೂ. ಗಡಿ ದಾಟಿದೆ

|

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮೂರು ದಿನಗಳ ವಿರಾಮದ ಬಳಿಕ ಶನಿವಾರ ಪೆಟ್ರೋಲ್, ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿದೆ. ಈಗಾಗಲೇ ಸಾರ್ವಕಾಲಿಕ ದಾಖಲೆ ಮಾಡಿರುವ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ 91.17ರಷ್ಟಿದ್ದು, ಡೀಸೆಲ್ ದರವು ಲೀಟರ್‌ಗೆ 81.47 ರೂಪಾಯಿಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಸರ್ಕಾರಿ ತೈಲ ಸಂಸ್ಥೆಗಳು ಪ್ರಕಟಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 27: 94.22 (24 ಪೈಸೆ ಏರಿಕೆ)
ಫೆಬ್ರವರಿ 26: 93.98
ಫೆಬ್ರವರಿ 25: 93.98
ಫೆಬ್ರವರಿ 24: 93.98

ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 27: 86.37 (16 ಪೈಸೆ ಏರಿಕೆ)
ಫೆಬ್ರವರಿ 26: 86.21
ಫೆಬ್ರವರಿ 25: 86.21
ಫೆಬ್ರವರಿ 24: 86.21

 

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 27: 91.17 (24 ಪೈಸೆ ಏರಿಕೆ)
ಫೆಬ್ರವರಿ 26: 90.93
ಫೆಬ್ರವರಿ 25: 90.93
ಫೆಬ್ರವರಿ 24: 90.93


ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 27: 81.47 (15 ಪೈಸೆ ಏರಿಕೆ)
ಫೆಬ್ರವರಿ 26: 81.32
ಫೆಬ್ರವರಿ 25: 81.32
ಫೆಬ್ರವರಿ 24: 81.32

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 27: 97.57 (23 ಪೈಸೆ ಏರಿಕೆ)
ಫೆಬ್ರವರಿ 26: 97.34
ಫೆಬ್ರವರಿ 25: 97.34
ಫೆಬ್ರವರಿ 24: 97.34


ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 27: 88.60 (16 ಪೈಸೆ ಏರಿಕೆ)
ಫೆಬ್ರವರಿ 26: 88.44
ಫೆಬ್ರವರಿ 25: 88.44
ಫೆಬ್ರವರಿ 24: 88.44

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 27: 93.20 (30 ಪೈಸೆ ಏರಿಕೆ)
ಫೆಬ್ರವರಿ 26: 92.90
ಫೆಬ್ರವರಿ 25: 92.90
ಫೆಬ್ರವರಿ 24: 92.90


ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 27: 86.53 (22 ಪೈಸೆ ಏರಿಕೆ)
ಫೆಬ್ರವರಿ 26: 86.31
ಫೆಬ್ರವರಿ 25: 86.31
ಫೆಬ್ರವರಿ 24: 86.31

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 27: 94.79 (25 ಪೈಸೆ ಏರಿಕೆ)
ಫೆಬ್ರವರಿ 26: 94.54
ಫೆಬ್ರವರಿ 25: 94.54
ಫೆಬ್ರವರಿ 24: 94.54


ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 27: 88.86 (17 ಪೈಸೆ ಏರಿಕೆ)
ಫೆಬ್ರವರಿ 26: 88.69
ಫೆಬ್ರವರಿ 25: 88.69
ಫೆಬ್ರವರಿ 24: 88.69

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol and Diesel Prices On Feb 27: Check Latest Rate Here

Petrol, Diesel Prices Up In Metro cities. Saturday (February 27) India's Major cities latest Petrol and diesel rates here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X