ಬೆಂಗಳೂರು, ಮಾರ್ಚ್ 24: ಭಾರತದಲ್ಲಿ ನಿರಂತರವಾಗಿ ಎರಡು ದಿನ ಏರಿಕೆ ಆಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗುರುವಾರ ಸ್ಥಿರತೆ ಕಂಡು ಬಂದಿದೆ. ಮಾರ್ಚ್ 24ರಂದು ಇಂಧನ ದರದಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಮತ್ತೊಮ್ಮೆ 102 ರೂಪಾಯಿ ಗಡಿ ದಾಟಿದೆ. ಕಳೆದ 137 ದಿನಗಳಿಂದ 100.56 ರೂಪಾಯಿಗೆ ಸ್ಥಿರವಾಗಿದ್ದ ಬೆಲೆ ನಿರಂತರ ಎರಡು ದಿನಗಳ ಏರಿಕೆ ನಂತರ ಪೆಟ್ರೋಲ್ ದರ 102.26 ರೂಪಾಯಿ ಹಾಗೂ ಡೀಸೆಲ್ ದರ 86.58 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 102.91 ರೂಪಾಯಿ, ಡೀಸೆಲ್ ದರ 92.95 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 106.34 ರೂಪಾಯಿ, ಡೀಸೆಲ್ ದರ 91.42 ರೂಪಾಯಿ ಆಗಿದೆ. ಭೋಪಾಲ್ ನಗರದಲ್ಲಿ ಪೆಟ್ರೋಲ್ ದರ 108.98 ರೂಪಾಯಿ ಹಾಗೂ ಡೀಸೆಲ್ ದರ 92.52 ರೂಪಾಯಿ ಇದೆ.
ಭಾರತದ ಪ್ರಮುಖ ನಗರಗಳಲ್ಲಿ 137 ದಿನಗಳ ಬಳಿಕ ಎರಡು ಬಾರಿ ನಿರಂತರವಾಗಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿತ್ತು. ಮಂಗಳವಾರ ಮತ್ತು ಬುಧವಾರ ಎರಡು ದಿನ 80 ಪೈಸೆ ಏರಿಕೆ ಆಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಗುರವಾರ ಸ್ಥಿರವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಮುಂದುವರೆದಿದ್ದು, ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸುಮಾರು 40% ಏರಿಕೆಯಾಗಿದ್ದು, ಕೈಗಾರಿಕಾ ಡೀಸೆಲ್ ಬೆಲೆ 25 ರು ಏರಿಕೆ ಮಾಡಲಾಗಿತ್ತು. ಇದಾದ ಬೆನ್ನಲ್ಲೇ ರೀಟೈಲ್ ದರ ಪೆಟ್ರೋಲ್, ಡೀಸೆಲ್ ದರ ಕೂಡಾ ಪರಿಷ್ಕರಿಸಲಾಗಿದೆ.

ಭಾರತದ ಮೂರು ಸರ್ಕಾರಿ ತೈಲ ಕಂಪನಿಗಳು ಗುರುವಾರ (ಮಾರ್ಚ್, 24) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, ಇಂದು ಇಂಧನ ದರಗಳು ಹೇಗಿವೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಎಷ್ಟಿದೆ?:
ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 114 ಯುಎಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ನಿನ್ನೆಯ ಸೆಷನ್‌ಗೆ ಹೋಲಿಸಿದರೆ ಶೇ 0.11ರಷ್ಟು ಏರಿಕೆ ಕಂಡಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.
ಪ್ರಮುಖ ನಗರಗಳಲ್ಲಿ ಎಷ್ಟಿದೆ ಗೊತ್ತಾ ಇಂಧನ ದರ:
ದೆಹಲಿ:
ಪೆಟ್ರೋಲ್ ದರ : 97.01
ಡೀಸೆಲ್ ದರ : 88.27
ಮುಂಬೈ:
ಪೆಟ್ರೋಲ್ ದರ : 111.67
ಡೀಸೆಲ್ ದರ : 95.85
ಚೆನ್ನೈ:
ಪೆಟ್ರೋಲ್ ದರ : 102.91
ಡೀಸೆಲ್ ದರ : 92.95
ಕೋಲ್ಕತ್ತಾ:
ಪೆಟ್ರೋಲ್ ದರ : 106.34
ಡೀಸೆಲ್ ದರ : 91.42
ಭೋಪಾಲ್:
ಪೆಟ್ರೋಲ್ ದರ : 108.98
ಡೀಸೆಲ್ ದರ : 92.52
ಹೈದ್ರಾಬಾದ್:
ಪೆಟ್ರೋಲ್ ದರ : 110.01
ಡೀಸೆಲ್ ದರ : 96.37
ಬೆಂಗಳೂರು:
ಪೆಟ್ರೋಲ್ ದರ : 102.26
ಡೀಸೆಲ್ ದರ : 86.58
ಗುವಾಹಟಿ:
ಪೆಟ್ರೋಲ್ ದರ : 96.34
ಡೀಸೆಲ್ ದರ : 82.67
ಲಕ್ನೋ:
ಪೆಟ್ರೋಲ್ ದರ : 96.87
ಡೀಸೆಲ್ ದರ : 88.42
ಗಾಂಧಿನಗರ:
ಪೆಟ್ರೋಲ್ ದರ : 96.94
ಡೀಸೆಲ್ ದರ : 91
ತಿರುವನಂತಪುರಂ:
ಪೆಟ್ರೋಲ್ ದರ : 108.11
ಡೀಸೆಲ್ ದರ : 95.47


Click it and Unblock the Notifications