ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರೀ ಇಳಿಕೆ, ಪ್ರಮುಖ ನಗರಗಳಲ್ಲಿ ದರ ಹೀಗಿದೆ
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಇಳಿಕೆಯತ್ತ ಜಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಭೀತಿ ಮುಂದುವರಿದಿದ್ದು ತೈಲ ಬಳಕೆ ಪ್ರಮಾಣವು ತಗ್ಗಿದೆ. ಭಾರತದಲ್ಲಿ ಸೋಮವಾರ ಪೆಟ್ರೋಲ್ ದರವು ಲೀಟರ್‌ಗೆ 24 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ದರವು ಲೀಟರ್‌ಗೆ 25 ಪೈಸೆ ಅಗ್ಗವಾಗಿದೆ.
ಜನವರಿ 12ರಿಂದ ತೈಲ ದರವು ಇಳಿಕೆಯತ್ತಲೇ ಸಾಗಿದ್ದು ಈ ವರ್ಷ ಪೆಟ್ರೋಲ್ ದರ ಲೀಟರ್‌ಗೆ 4.55 ರುಪಾಯಿ ತಗ್ಗಿದೆ. ಡೀಸೆಲ್ ದರವು ಲೀಟರ್‌ಗೆ 4.77 ರುಪಾಯಿ ಕಡಿಮೆಯಾಗಿದೆ.
ತೈಲ ಬೆಲೆ ಸೋಮವಾರದಂದು 20 ಪರ್ಸೆಂಟ್ ಗೂ ಹೆಚ್ಚು ಕುಸಿಯಿತು. ತೈಲದ ಪ್ರಮುಖ ಪೂರೈಕೆದಾರ ರಾಷ್ಟ್ರವಾದ ಸೌದಿ ಅರೇಬಿಯಾ ದರ ಸಮರಕ್ಕೆ ಇಳಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.
| ನಗರ | ಪೆಟ್ರೋಲ್ ದರ | ಡೀಸೆಲ್ ದರ |
| ಬೆಂಗಳೂರು | 73.01 | 65.42 |
| ದೆಹಲಿ | 70.59 | 63.26 |
| ಕೊಲ್ಕತ್ತಾ | 73.28 | 65.59 |
| ಮುಂಬೈ | 76.29 | 66.24 |
| ಚೆನ್ನೈ | 73.33 | 66.75 |
| ಗುರುಗಾವ್ | 70.99 | 62.85 |
| ನೊಯ್ಡ | 72.91 | 63.78 |
| ಭುವನೇಶ್ವರ್ | 69.45 | 67.96 |
| ಚಂಡೀಗಡ | 66.76 | 60.23 |
| ಹೈದ್ರಾಬಾದ್ | 75.04 | 68.88 |
| ಜೈಪುರ | 74.41 | 68.35 |
| ಲಕ್ನೋ | 72.71 | 63.65 |
| ಪಾಟ್ನಾ | 75.24 | 67.98 |
| ತ್ರಿವೆಂಡ್ರಮ್ | 73.69 | 68.21 |
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications