ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಗುರುವಾರ ಕೂಡ ತೈಲ ಬೆಲೆಯನ್ನು ಏರಿಕೆ ಮಾಡಿದ್ದು, ಸತತ 10ನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ದರವು ತುಟ್ಟಿಯಾಗಿದೆ. ದೆಹಲಿಯಲ್ಲಿ ಲೀಟರ್‌ಗೆ ಪೆಟ್ರೋಲ್ ದರ 34 ಪೈಸೆ ಹೆಚ್ಚಾಗಿ 89.88 ರೂಪಾಯಿಗೆ ತಲುಪಿದೆ. ಡೀಸೆಲ್ ದರವು 80.27 ರೂಪಾಯಿಗೆ ತಲುಪಿದ್ದು, ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ.
ಏತನ್ಮಧ್ಯೆ, ರಾಜಸ್ಥಾನದ ಶ್ರೀಗಂಗನಗರ ಜಿಲ್ಲೆಯಲ್ಲಿ ಬುಧವಾರ ಸಾಮಾನ್ಯ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100 ರೂಪಾಯಿ ದಾಟಿದೆ. ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 100.13 ಮತ್ತು 92.13 ರಷ್ಟಿದೆ.

ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವಂತೆ ತೈಲ ಸಮೃದ್ಧ ರಾಷ್ಟ್ರಗಳಿಗೆ ಭಾರತವು ಒತ್ತಾಯಿಸಿದ್ದು, ಹೆಚ್ಚುತ್ತಿರುವ ಅಂತರರಾಷ್ಟ್ರೀಯ ತೈಲ ಬೆಲೆಗಳು ಆರ್ಥಿಕ ಚೇತರಿಕೆ ಮತ್ತು ಬೇಡಿಕೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬುಧವಾರ ಹೇಳಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಸರ್ಕಾರಿ ತೈಲ ಸಂಸ್ಥೆಗಳು ಪ್ರಕಟಿಸುತ್ತವೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 18: 92.89 (35 ಪೈಸೆ ಏರಿಕೆ)
ಫೆಬ್ರವರಿ 17: 92.54
ಫೆಬ್ರವರಿ 16: 92.28
ಫೆಬ್ರವರಿ 15: 88.99
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 18: 85.09 (34 ಪೈಸೆ ಏರಿಕೆ)
ಫೆಬ್ರವರಿ 17: 84.75
ಫೆಬ್ರವರಿ 16: 84.49
ಫೆಬ್ರವರಿ 15: 79.35
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 18: 89.88 (34 ಪೈಸೆ ಏರಿಕೆ)
ಫೆಬ್ರವರಿ 17: 89.54
ಫೆಬ್ರವರಿ 16: 89.29
ಫೆಬ್ರವರಿ 15: 88.99
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 18: 80.27 (32 ಪೈಸೆ ಏರಿಕೆ)
ಫೆಬ್ರವರಿ 17: 79.95
ಫೆಬ್ರವರಿ 16: 79.70
ಫೆಬ್ರವರಿ 15: 79.35
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 18: 96.32 (32 ಪೈಸೆ ಏರಿಕೆ)
ಫೆಬ್ರವರಿ 17: 96.00
ಫೆಬ್ರವರಿ 16: 95.75
ಫೆಬ್ರವರಿ 15: 95.46
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 18: 87.32 (34 ಪೈಸೆ ಏರಿಕೆ)
ಫೆಬ್ರವರಿ 17: 86.98
ಫೆಬ್ರವರಿ 16: 86.72
ಫೆಬ್ರವರಿ 15: 86.34
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 18: 91.98 (30 ಪೈಸೆ ಏರಿಕೆ)
ಫೆಬ್ರವರಿ 17: 91.68
ಫೆಬ್ರವರಿ 16: 91.45
ಫೆಬ್ರವರಿ 15: 91.19
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 18: 85.31 (30 ಪೈಸೆ ಏರಿಕೆ)
ಫೆಬ್ರವರಿ 17: 85.01
ಫೆಬ್ರವರಿ 16: 84.77
ಫೆಬ್ರವರಿ 15: 84.44
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಫೆಬ್ರವರಿ 18: 93.45 (35 ಪೈಸೆ ಏರಿಕೆ)
ಫೆಬ್ರವರಿ 17: 93.10
ಫೆಬ್ರವರಿ 16: 92.84
ಫೆಬ್ರವರಿ 15: 92.53
ಡೀಸೆಲ್ (ಪ್ರತಿ ಲೀಟರ್)
ಫೆಬ್ರವರಿ 18: 87.55 (35 ಪೈಸೆ ಏರಿಕೆ)
ಫೆಬ್ರವರಿ 17: 87.20
ಫೆಬ್ರವರಿ 16: 86.93
ಫೆಬ್ರವರಿ 15: 86.55


Click it and Unblock the Notifications