ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಎರಡು ದಿನಗಳ ವಿರಾಮದ ಬಳಿಕ ತೈಲ ದರವನ್ನು ಮತ್ತೆ ಏರಿಕೆ ಮಾಡಿವೆ. ಈ ಮೂಲಕ ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದೆ. ಜೈಪುರದಲ್ಲಿ ಈಗಾಗಲೇ ಅಧಿಕೃತವಾಗಿ ಪೆಟ್ರೋಲ್ ಲೀಟರ್‌ಗೆ 100 ರೂಪಾಯಿ ಗಡಿದಾಟಿದೆ.
ನವದೆಹಲಿಯಲ್ಲಿ ಶುಕ್ರವಾರ (ಮೇ 21) ಪೆಟ್ರೋಲ್ ದರ ಲೀಟರ್‌ಗೆ 19 ಪೈಸೆ ಹೆಚ್ಚಾಗಿ 93.04 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 29 ಪೈಸೆ ಏರಿಕೆಗೊಂಡು 83.80 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 21: 96.14 (20 ಪೈಸೆ ಏರಿಕೆ)
ಮೇ 20: 95.94
ಮೇ 19: 95.94
ಮೇ 18: 95.94
ಡೀಸೆಲ್ (ಪ್ರತಿ ಲೀಟರ್)
ಮೇ 21: 88.84 (31 ಪೈಸೆ ಏರಿಕೆ)
ಮೇ 20: 88.53
ಮೇ 19: 88.53
ಮೇ 18: 88.53
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 21: 93.04 (19 ಪೈಸೆ ಏರಿಕೆ)
ಮೇ 20: 92.85
ಮೇ 19: 92.85
ಮೇ 18: 92.85
ಡೀಸೆಲ್ (ಪ್ರತಿ ಲೀಟರ್)
ಮೇ 21: 83.80 (29 ಪೈಸೆ ಏರಿಕೆ)
ಮೇ 20: 83.51
ಮೇ 19: 83.51
ಮೇ 18: 83.51
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 21: 99.32 (18 ಪೈಸೆ ಏರಿಕೆ)
ಮೇ 20: 99.14
ಮೇ 19: 99.14
ಮೇ 18: 99.14
ಡೀಸೆಲ್ (ಪ್ರತಿ ಲೀಟರ್)
ಮೇ 21: 91.01 (30 ಪೈಸೆ ಏರಿಕೆ)
ಮೇ 20: 90.71
ಮೇ 19: 90.71
ಮೇ 18: 90.71
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 21: 94.71 (07 ಪೈಸೆ ಏರಿಕೆ)
ಮೇ 20: 94.69
ಮೇ 19: 94.69
ಮೇ 18: 94.69
ಡೀಸೆಲ್ (ಪ್ರತಿ ಲೀಟರ್)
ಮೇ 21: 88.62 (19 ಪೈಸೆ ಏರಿಕೆ)
ಮೇ 20: 88.48
ಮೇ 19: 88.48
ಮೇ 18: 88.48
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 21: 96.70 (20 ಪೈಸೆ ಏರಿಕೆ)
ಮೇ 20: 96.50
ಮೇ 19: 96.50
ಮೇ 18: 96.50
ಡೀಸೆಲ್ (ಪ್ರತಿ ಲೀಟರ್)
ಮೇ 21: 91.36 (32 ಪೈಸೆ ಏರಿಕೆ)
ಮೇ 20: 91.04
ಮೇ 19: 91.04
ಮೇ 18: 91.04
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications