ದಿನೇ ದಿನೇ ತೈಲ ದರಗಳು ಗಗನಕ್ಕೇರುತ್ತಿದ್ದು, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಶನಿವಾರ (ಮೇ 29) ಪೆಟ್ರೋಲ್, ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿವೆ. ಈ ಮೂಲಕ ಮುಂಬೈ, ಜೈಪುರ ಸೇರಿದಂತೆ ಹಲವು ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂಪಾಯಿ ಗಡಿದಾಟಿದ್ದು, ಕೊರೊನಾ ಸಾಂಕ್ರಾಮಿಕದ ನಡುವೆ ತೈಲ ದರ ಏರಿಕೆ ವಾಹನಸವಾರರ ಚಿಂತೆಗೆ ಕಾರಣವಾಗಿದೆ.
ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 26 ಪೈಸೆ ಏರಿಕೆಗೊಂಡು 93.94 ರೂಪಾಯಿ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 28 ಪೈಸೆ ಹೆಚ್ಚಾಗಿ 84.61 ರೂಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 29: 97.07 (27 ಪೈಸೆ ಏರಿಕೆ)
ಮೇ 28: 96.80
ಮೇ 27: 96.80
ಮೇ 26: 96.55
ಡೀಸೆಲ್ (ಪ್ರತಿ ಲೀಟರ್)
ಮೇ 29: 89.99 (29 ಪೈಸೆ ಏರಿಕೆ)
ಮೇ 28: 89.70
ಮೇ 27: 89.70
ಮೇ 26: 89.39
ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 29: 93.94 (26 ಪೈಸೆ ಏರಿಕೆ)
ಮೇ 28: 93.68
ಮೇ 27: 93.68
ಮೇ 26: 93.44
ಡೀಸೆಲ್ (ಪ್ರತಿ ಲೀಟರ್)
ಮೇ 29: 84.89 (28 ಪೈಸೆ ಏರಿಕೆ)
ಮೇ 28: 84.61
ಮೇ 27: 84.61
ಮೇ 26: 84.32
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 29: 100.19 (25 ಪೈಸೆ ಏರಿಕೆ)
ಮೇ 28: 99.94
ಮೇ 27: 99.94
ಮೇ 26: 99.71
ಡೀಸೆಲ್ (ಪ್ರತಿ ಲೀಟರ್)
ಮೇ 29: 92.17 (30 ಪೈಸೆ ಏರಿಕೆ)
ಮೇ 28: 91.87
ಮೇ 27: 91.87
ಮೇ 26: 91.57
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 29: 95.51 (23 ಪೈಸೆ ಏರಿಕೆ)
ಮೇ 28: 95.28
ಮೇ 27: 95.28
ಮೇ 26: 95.06
ಡೀಸೆಲ್ (ಪ್ರತಿ ಲೀಟರ್)
ಮೇ 29: 89.65 (26 ಪೈಸೆ ಏರಿಕೆ)
ಮೇ 28: 89.39
ಮೇ 27: 89.39
ಮೇ 26: 89.11
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಮೇ 29: 97.63 (27 ಪೈಸೆ ಏರಿಕೆ)
ಮೇ 28: 97.36
ಮೇ 27: 97.36
ಮೇ 26: 97.12
ಡೀಸೆಲ್ (ಪ್ರತಿ ಲೀಟರ್)
ಮೇ 29: 92.54 (30 ಪೈಸೆ ಏರಿಕೆ)
ಮೇ 28: 92.24
ಮೇ 27: 92.24
ಮೇ 26: 91.92
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications