For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1 ರಿಂದ ಏರಿಕೆಯಾಗಲಿದೆ ಪೆಟ್ರೋಲ್-ಡೀಸೆಲ್ ದರ

|

ಕಳೆದ ಒಂದು ತಿಂಗಳಿನಲ್ಲಿ ಬಹುತೇಕ ಇಳಿಕೆಯ ಹಾದಿ ಹಿಡಿದಿದ್ದ ಪೆಟ್ರೋಲ್-ಡೀಸೆಲ್ ದರವು ಏಪ್ರಿಲ್ 1ರಿಂದ ಏರಿಕೆ ಕಾಣಲಿದೆ ಎಂದು ರಾಷ್ಟ್ರೀಯ ತೈಲ ಮಾರಾಟಗಾರ ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಶುಕ್ರವಾರ ಹೇಳಿದೆ.

 

ಏಪ್ರಿಲ್ 1 ವಿಶ್ವದಲ್ಲೇ ಶುದ್ಧ ಪೆಟ್ರೋಲ್- ಡೀಸೆಲ್ ಬಳಕೆ ಭಾರತದಲ್ಲಿ ಆರಂಭದ ದಿನಏಪ್ರಿಲ್ 1 ವಿಶ್ವದಲ್ಲೇ ಶುದ್ಧ ಪೆಟ್ರೋಲ್- ಡೀಸೆಲ್ ಬಳಕೆ ಭಾರತದಲ್ಲಿ ಆರಂಭದ ದಿನ

ಕಡಿಮೆ ಮಾಲಿನ್ಯವನ್ನು ಹೊರಸೂಸುವ ಬಿಎಸ್-VI ಇಂಧನಗಳನ್ನು ಪೂರೈಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಏಪ್ರಿಲ್ 1 ರಿಂದ ವಿಶ್ವದಲ್ಲೇ ಅತ್ಯಂತ ಶುದ್ಧ ಪೆಟ್ರೋಲ್-ಡೀಸೆಲ್ ಬಳಕೆಯು ಬಾರತದಲ್ಲಿ ಆರಂಭವಾಗಲಿದೆ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಲ್ಫರ್ ಅಂಶವಿರುವ ಬಿಎಸ್ VI ಪೆಟ್ರೋಲ್- ಡೀಸೆಲ್ ಉತ್ಪಾದನೆಯನ್ನು ಎಲ್ಲ ರಿಫೈನರೀಸ್ ಕಳೆದ ವರ್ಷದ ಕೊನೆಯಿಂದಲೇ ಆರಂಭಿಸಿದೆ.

 
ಏಪ್ರಿಲ್ 1 ರಿಂದ ಏರಿಕೆಯಾಗಲಿದೆ ಪೆಟ್ರೋಲ್-ಡೀಸೆಲ್ ದರ

'' ನಾನು ಜನರಿಗೆ ಭರವಸೆ ನೀಡುತ್ತೇನೆ, ಒಂದೇ ಬಾರಿ ದರ ಏರಿಕೆ ಮಾಡಿ ಗ್ರಾಹಕರಿಗೆ ಹೊರೆ ಹೆಚ್ಚಿಸುವುದಿಲ್ಲ. ಪೆಟ್ರೋಲ್ -ಡೀಸೆಲ್ ದರದಲ್ಲಿ ಕನಿಷ್ಠ ಹೆಚ್ಚಳ ಮಾಡಲಾಗುವುದು '' ಎಂದು ಕಂಪನಿಯ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕಗಳನ್ನು ನವೀಕರಣಗೊಳಿಸಲಾಗಿದ್ದು, ಇದಕ್ಕಾಗಿ 35,000 ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗಿದೆ.

English summary

Petrol Diesel Prices Will Hike From April 1

Indian oil corporation(IOC) on Friday said it is ready to supply low emission BS-VI from April 1 and that there will be a marginal increase in retail prices.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X