Petrol Price: ಪೆಟ್ರೋಲ್ ಬೆಲೆ ಲೀಟರ್‌ಗೆ 15 ರೂಪಾಯಿಗೆ ಇಳಿಯುತ್ತೆ, ಗಡ್ಕರಿ ಹೇಳಿದ್ದೇನು?

ದೆಹಲಿ, ಬೆಂಗಳೂರು ಮತ್ತು ಮುಂಬೈನಂತಹ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಳವಾಗಿದೆ. ಕಳೆದ ಹಲವಾರು ದಿನಗಳಿಂದ ಪೆಟ್ರೋಲ್ ದರವು ಸ್ಥಿರವಾಗಿದ್ದರೂ ಕೂಡಾ ಈಗಾಗಲೇ ದರವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ನಡುವೆ ಸಾರಿಗೆಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ಪೂರೈಸಿದರೆ, ದೇಶದಲ್ಲಿ ಇಂಧನ ಬೆಲೆಗಳು ಪ್ರತಿ ಲೀಟರ್‌ಗೆ 15 ರೂಪಾಯಿಗೆ ಕಡಿಮೆಯಾಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 15 ರೂಪಾಯಿ ಆಗಿರುವುದು ಒಂದು ಕನಸಿನಂತೆ ಕಾಣುತ್ತದೆ. ಆದರೂ ಕೂಡಾ ಇಂಧನದ ಮೇಲಿನ ಅವಲಂಬನೆ ಕಡಿಮೆಯಾದರೆ, ಜನರು ತಮ್ಮ ವಾಹನಗಳಿಗೆ ವಿದ್ಯುತ್ ಹಾಗೂ ಎಥೆನಾಲ್‌ಗಳನ್ನು ಬಳಕೆ ಮಾಡಲು ಪ್ರಾರಂಭಿಸಿದರೆ, ಇದರ ಮೇಲೆ ಹೆಚ್ಚು ಅವಲಂಬಿತರಾದರೆ ಈ ಪರಿಸ್ಥಿತಿ ನಿಜವಾಗಬಹುದು ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

 ಪೆಟ್ರೋಲ್ ಬೆಲೆ ಲೀ.ಗೆ 15 ರೂ.ಗೆ ಇಳಿಯುತ್ತೆ, ಗಡ್ಕರಿ ಹೇಳಿದ್ದೇನು?

ನಿತಿನ್ ಗಡ್ಕರಿ ನಿರ್ದಿಷ್ಟವಾಗಿ ಹೇಳಿದ್ದು ಏನು?

ಈ ಬಗ್ಗೆ ರಾಜಸ್ಥಾನದಲ್ಲಿ ಸಾರ್ವಜನಿಕ ಭಾಷಣವನ್ನು ಮಾಡಿದ ನಿತಿನ್ ಗಡ್ಕರಿ, "ಸರಾಸರಿ ಶೇಕಡ 60 ಎಥೆನಾಲ್ ಮತ್ತು ಶೇಕಡ 40ರಷ್ಟು ಎಲೆಕ್ಟ್ರಿಸಿಟಿ ಪಡೆದರೆ ಪೆಟ್ರೋಲ್ ಲೀಟರ್‌ಗೆ 15 ರೂಪಾಯಿಗೆ ಇಳಿಕೆಯಾಗಲಿದೆ. ವಾಯುಮಾಲಿನ್ಯ ಹಾಗೂ ಆಮದು ಕಡಿಮೆಯಾಗಲಿದೆ. ಆಮದು ವೆಚ್ಚ 16 ಲಕ್ಷ ಕೋಟಿ ರೂಪಾಯಿ ಆಗಿದ್ದು, ಇದು ರೈತರ ಮನೆಗೆ ತಲುಪಲಿದೆ," ಎಂದು ತಿಳಿಸಿದ್ದಾರೆ.

ಮುಂದಿನ 5 ವರ್ಷದಲ್ಲಿ ಭಾರತ ಬಹುದೊಡ್ಡ ವಾಹನ ಉತ್ಪಾದನಾ ಕೇಂದ್ರವಾಗಲಿದೆ: ನಿತಿನ್ ಗಡ್ಕರಿ
ಸರ್ಕಾರದ ದೃಷ್ಟಿಕೋನವನ್ನು ಒತ್ತಿ ಹೇಳಿದ ನಿತಿನ್ ಗಡ್ಕರಿ, "ದೇಶದ ರೈತರನ್ನು ಶ್ಲಾಘಿಸಿದರು. ರೈತರು ದೇಶದ ಅನ್ನದಾತರೂ ಹೌದು, ಇಂಧನ ಪೂರೈಕೆದಾರರು ಕೂಡಾ ಹೌದು," ಎಂದು ಹೇಳಿದ್ದಾರೆ. "ನಮ್ಮ ಸರ್ಕಾರವು ರೈತರು ಅನ್ನದಾತ ಮಾತ್ರವಲ್ಲ, ಇಂಧನ ಪೂರೈಕೆದಾರರು ಕೂಡಾ ಆಗುತ್ತಾರೆ ಎಂಬ ಮನಸ್ಥಿತಿಯನ್ನು ಹೊಂದಿದೆ. ಎಲ್ಲಾ ವಾಹನಗಳು ಈಗ ರೈತ ಉತ್ಪಾದಿಸುವ ಎಥೆನಾಲ್‌ನಿಂದ ಚಲಿಸುತ್ತವೆ," ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಇನ್ನು ಈ ಎಥೆನಾಲ್‌ನಿಂದಾಗಿ ಪೆಟ್ರೋಲ್ ದರ ಇಳಿಕೆಗೆ ಸಹಾಯವಾಗಲಿದೆ ಎಂಬುವುದು ಗಡ್ಕರಿ ಹೇಳಿದ್ದಾರೆ. ಕಳೆದ ಒಂಬತ್ತು ವರ್ಷಗಳ ಕೇಂದ್ರ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿದು ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಗಡ್ಕರಿ, ಬಡತನವನ್ನು ತೊಡೆದುಹಾಕುವ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಬಡತನವನ್ನು ತೊಡೆದುಹಾಕಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಆಟೋಮೊಬೈಲ್ ಉದ್ಯಮದ ವಹಿವಾಟು 7.55 ಲಕ್ಷ ಕೋಟಿ ರೂಪಾಯಿಗಳಾಗಿದ್ದು , ಈ ಕ್ಷೇತ್ರದಲ್ಲಿ ನಾಲ್ಕೂವರೆ ಕೋಟಿ ಉದ್ಯೋಗಗಳ ಸೃಷ್ಟಿಯಾಗಿದೆ. ಈ ಉದ್ಯಮವು ಸರ್ಕಾರಕ್ಕೆ ಗರಿಷ್ಠ ಜಿಎಸ್‌ಟಿ ನೀಡುತ್ತದೆ. ನಾವು ಈ ಉದ್ಯಮವನ್ನು 15 ಲಕ್ಷ ಕೋಟಿ ರೂಪಾಯಿಗಳಾಗಿಸಲು ನಿರ್ಧರಿಸಿದ್ದೇವೆ. ಉದ್ಯಮವು ಹತ್ತು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ," ಎಂದು ಹೇಳಿದ್ದಾರೆ.

ಇಂಧನ ದರ ಕಡಿತ ಮಾಡಲು ನಿತಿನ್‌ ಗಡ್ಕರಿ ಉಪಾಯ

ಈ ಹಿಂದೆ ತಮ್ಮ ವಿನೂತನ ಐಡಿಯಾಗಳನ್ನು ನೀಡುವ ಮೂಲಕವೇ ಹೆಚ್ಚು ಸುದ್ದಿಯಾಗುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಇನ್ನಷ್ಟು ಇಳಿಸಲು ಹೊಸ ಉಪಾಯವನ್ನು ಮಾಡಿದ್ದಾರೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿ ಅಡಿಯಲ್ಲಿ ತಂದರೆ ಬೆಲೆಯನ್ನು ಇಳಿಕೆ ಮಾಡಲು ಸಾಧ್ಯ. ಇತರ ಇಂಧನಗಳಿಗಿಂತ ವಾಹನಗಳಲ್ಲಿ ಎಥೆನಾಲ್‌ ಬಳಕೆ ಮಾಡುವುದು ಉತ್ತಮ ಆಯ್ಕೆ ಎಂದು ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಫ್ಲೆಕ್ಸ್‌ ಇಂಧನ ಇಂಜಿನ್‌ಗಳನ್ನು ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಂಧನ ದರ ಇನ್ನಷ್ಟು ಏರಿಕೆ ತಡೆಯುವುದು ಹೇಗೆ ಎಂಬ ಬಗ್ಗೆ ಮಾತನಾಡುತ್ತಾ, ಪೆಟ್ರೋಲ್‌ ಹಾಗೂ ಎಥೆನಾಲ್‌ ಕ್ಯಾಲೋರಿಫೀಕ್‌ ಮೌಲ್ಯವನ್ನು ಸಮೀಕರಣ ಮಾಡುವ ರಷ್ಯಾದ ತಂತ್ರಜ್ಞಾನದ ಉಲ್ಲೇಖವನ್ನು ಮಾಡಿದ್ದಾರೆ. ಹಾಗೆಯೇ ಕೆಲವು ರಾಜ್ಯಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಆಕ್ಷೇಪ ಮಾಡುತ್ತದೆ. ಜಿಎಸ್‌ಟಿ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳಿಗೂ ಆದಾಯ ಬರಲಿದೆ ಎಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+