For Quick Alerts
ALLOW NOTIFICATIONS  
For Daily Alerts

ಪಿಎಫ್‌ ಕೊಡುಗೆ ಮಿತಿ 5 ಲಕ್ಷ ರೂಪಾಯಿಗೆ ಏರಿಕೆ: ಯಾರಿಗೆ ಪ್ರಯೋಜನ?

|

ಫೆಬ್ರವರಿ ತಿಂಗಳಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಭವಿಷ್ಯ ನಿಧಿ (ಪಿಎಫ್) ನಲ್ಲಿನ ಹೂಡಿಕೆಯ ಮೇಲಿನ ತೆರಿಗೆ ಮುಕ್ತ ಆದಾಯವನ್ನು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2.50 ಲಕ್ಷ ರೂ. ಸೀಮಿತಗೊಳಿಸಿದರು.

 

ಇಲ್ಲಿಯವರೆಗೆ, ತೆರಿಗೆ ಮುಕ್ತ ಲಾಭವನ್ನು ಪಡೆಯಲು ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಬಹುದಾದ ಮೊತ್ತಕ್ಕೆ ಯಾವುದೇ ಮಿತಿ ಇರಲಿಲ್ಲ. ಭವಿಷ್ಯ ನಿಧಿ ಯೋಜನೆಗಳಿಗೆ ಉದ್ಯೋಗದಾತರ ಕೊಡುಗೆಗೆ ಕಳೆದ ವರ್ಷದ ಬಜೆಟ್ ವರ್ಷಕ್ಕೆ 7.5 ಲಕ್ಷ ರೂ. ಮಿತಿ ಹೊಂದಿದ್ದು, ಈಗ ನೌಕರರ ಭವಿಷ್ಯ ನಿಧಿ ಯೋಜನೆಗಳಿಗೆ 2.5 ಲಕ್ಷ ರೂ.ಗಳ ಉಳಿತಾಯ ಹಣವನ್ನು ಹಿಂತೆಗೆದುಕೊಳ್ಳುವ ಸಮಯದಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಆದರೆ ಕೆಲವು ನಿಗದಿತ ಪ್ರಕರಣಗಳಲ್ಲಿ ನೌಕರರು ಭವಿಷ್ಯ ನಿಧಿ (ಪಿಎಫ್) ಕೊಡುಗೆಯಿಂದ ಗಳಿಸುವ ಬಡ್ಡಿಗೆ ತೆರಿಗೆ ವಿನಾಯಿತಿ ಮಿತಿಯನ್ನು ವರ್ಷಕ್ಕೆ 5 ಲಕ್ಷ ರೂ.ಗೆ ಏರಿಸಿದೆ. ಹೆಚ್ಚಿನ ಆದಾಯ ಗಳಿಸುವವರು ತಮ್ಮ ಹೆಚ್ಚುವರಿ ಸಂಪತ್ತನ್ನು ಪಿಎಫ್‌ನಲ್ಲಿ ಉಳಿತಾಯ ಮಾಡುವುದನ್ನು ನಿರುತ್ಸಾಹಗೊಳಿಸಲು ಈ ದಾರಿ ಹುಡುಕಲಾಗಿದೆ. ಈ ಮೂಲಕ ತೆರಿಗೆ ಮುಕ್ತ ಮಿತಿಯನ್ನು ಈಗ ವರ್ಷಕ್ಕೆ ಗರಿಷ್ಠ 5 ಲಕ್ಷ ರೂ.ಗೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

ಪಿಎಫ್ ಮಿತಿ ಏರಿಕೆ ಹೇಗೆ?

ಪಿಎಫ್ ಮಿತಿ ಏರಿಕೆ ಹೇಗೆ?

ಇದರರ್ಥ ನೌಕರನು ಈಗ ವಾರ್ಷಿಕ ಆಧಾರದ ಮೇಲೆ ಭವಿಷ್ಯ ನಿಧಿಗೆ 5 ಲಕ್ಷ ರೂ.ವರಗೆ ಕೊಡುಗೆ ನೀಡಬಹುದು ಮತ್ತು ಅದರ ಮೇಲೆ ತೆರಿಗೆ ವಿನಾಯಿತಿ ಬಡ್ಡಿ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಆದಾಗ್ಯೂ, ಈ ವಿನಾಯಿತಿಯು ಉದ್ಯೋಗದಾತರ ಕೊಡುಗೆಯನ್ನು ಶಾಸನಬದ್ಧ ಮಿತಿಯನ್ನು ಮೀರಿ ಮೂಲ ವೇತನದ 12 ಪ್ರತಿಶತದವರೆಗೆ ಒಳಗೊಂಡಿರುವುದಿಲ್ಲ ಎಂಬ ಷರತ್ತಿಗೆ ಒಳಪಟ್ಟಿರುತ್ತದೆ.

ಇದ್ರಿಂದ ಯಾರಿಗೆ ಲಾಭ?

ಇದ್ರಿಂದ ಯಾರಿಗೆ ಲಾಭ?

ಈಗ ಹೆಚ್ಚಿರುವ ಇಪಿಎಫ್ ಕೊಡುಗೆ ಮಿತಿಯು ದೇಶದ ಮಧ್ಯಮ ಮತ್ತು ಹೆಚ್ಚಿನ ಆದಾಯ ಗಳಿಸುವವರಿಗೆ ಪ್ರಯೋಜನವನ್ನು ನೀಡುತ್ತದೆ. ವಾರ್ಷಿಕವಾಗಿ 5 ಲಕ್ಷ ರೂ. ಅಂದರೆ ಪಿಎಫ್ ಖಾತೆಗೆ ಮಾಸಿಕವಾಗಿ 41,667 ರೂ. ಯಾರು ಕೊಡುಗೆಯನ್ನು ನೀಡುತ್ತಾರೆ ಅವರಿಗೆ ಈ ವಿನಾಯಿತಿ ಸಿಗುತ್ತದೆ. ಆದಾಗ್ಯೂ, ಪಿಎಫ್ ಕೊಡುಗೆ ವಾರ್ಷಿಕವಾಗಿ 5 ಲಕ್ಷ ರೂ.ಗಳನ್ನು ಮೀರಿದರೆ, ಹೆಚ್ಚುವರಿ ಪಿಎಫ್ ಕೊಡುಗೆಯ ಮೇಲಿನ ಬಡ್ಡಿ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ.

2020-21ರ ಪಿಎಫ್ ಬಡ್ಡಿ ದರ 8.5%
 

2020-21ರ ಪಿಎಫ್ ಬಡ್ಡಿ ದರ 8.5%

ಇತ್ತೀಚೆಗಷ್ಟೇ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2020-21ರ ನೌಕರರ ಭವಿಷ್ಯ ನಿಧಿ ಬಡ್ಡಿದರವನ್ನು ಪ್ರಕಟಿಸಿದ್ದು, ಶೇಕಡಾ 8.5ರಷ್ಟು ಶಿಫಾರಸ್ಸು ಮಾಡಿದೆ. ಈ ಮೂಲಕ ಬಡ್ಡಿದರ ಕಡಿತಗೊಳ್ಳಬಹುದು ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿತ್ತು. ಕಳೆದ ವರ್ಷ, ಮಾರ್ಚ್‌ನಲ್ಲಿ ಇಪಿಎಫ್ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ರಲ್ಲಿ ಏಳು ವರ್ಷಗಳ ಕನಿಷ್ಠ ಶೇಕಡಾಕ್ಕೆ 8.5ಕ್ಕೆ ಇಳಿಸಿತ್ತು.

ಪಿಎಫ್‌ ಕೊಡುಗೆ ಹೆಚ್ಚಾಗಬಹುದು

ಪಿಎಫ್‌ ಕೊಡುಗೆ ಹೆಚ್ಚಾಗಬಹುದು

ಕೇಂದ್ರ ಸರ್ಕಾರವು ಹೊಸ ವೇತನ ಸಂಹಿತೆ ಮಸೂದೆ 2021ರ ಜಾರಿಗೆ ತರುವ ಮೂಲಕ ಭಾರಿ ಪ್ರಮಾಣದಲ್ಲಿ ಬದಲಾವಣೆಯನ್ನು ತರಬಹುದು. ಸದ್ಯ ನಿಮ್ಮ ಮೂಲ ವೇತನದಲ್ಲಿ ಶೇಕಡಾ 12ರಷ್ಟು ಹಣವನ್ನು ಪಿಎಫ್ ಕೊಡುಗೆಯಾಗಿ ನೀಡಲಾಗುವುದು. ಆದರೆ ಯಾವಾಗ ನಿಮ್ಮ CTCಯಲ್ಲಿ ಮೂಲ ವೇತನವು ಶೇಕಡಾ 50ರಷ್ಟು ಹೆಚ್ಚಾದಾಗ, ನಿಮ್ಮ ಪಿಎಫ್ ಕೊಡುಗೆ ಕೂಡ ಹೆಚ್ಚಾಗುವುದು. ಉದಾಹರಣೆಗೆ ನಿಮ್ಮ ತಿಂಗಳ ವೇತನ 20,000 ರೂಪಾಯಿ ಆಗಿದ್ದರೆ, ಮೂಲ ವೇತನವು 10,000 ರೂಪಾಯಿ ಆಗಿರಲಿದೆ ಮತ್ತು 1,200 ರೂಪಾಯಿ ಪಿಎಫ್‌ ಕೊಡುಗೆಯಾಗಿ ಅಕೌಂಟ್‌ಗೆ ಸೇರಲಿದೆ.

Read more about: epf epfo interest pf
English summary

PF Contribution Limit Raised To Rs 5 Lakh For Tax Free Interest: Know more

The government has raised the limit for tax exemption on interest earned on provident fund (PF) contribution by employees to Rs 5 lakh per annum in specified cases
Story first published: Wednesday, March 24, 2021, 19:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X