ಡಿಜಿಟಲ್ ಪಾವತಿ ಫೋನ್‌ಪೇಯಲ್ಲಿ ಅಕ್ಟೋಬರ್ 2021 ರಲ್ಲಿ ಎರಡು ಶತಕೋಟಿ ವಹಿವಾಟುಗಳನ್ನು ಮಾಡಲಾಗಿದ್ದು, ಈ ಮೂಲಕ ಫೋನ್‌ಪೇನ ದಾಖಲೆ ಸೃಷ್ಟಿ ಆಗಿದೆ. ಫೋನ್‌ಪೇಗೆ ತಿಂಗಳಿನಲ್ಲಿ ಇದೇ ಅಧಿಕ ವಹಿವಾಟು ದಾಖಲೆ ಆಗಿದೆ.
ಈ ಎರಡು ಶತಕೋಟಿ ವಹಿವಾಟಿನಲ್ಲಿ ಹೆಚ್ಚಿನವು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ಅಂದರೆ ಯುಪಿಐ ಮೂಲಕ ನಡೆಸಲಾದ ವಹಿವಾಟು ಆಗಿದೆ. ಇನ್ನು ಯುಪಿಐ ಮೂಲಕ ಫೋನ್‌ಪೇ ಸಂಸ್ಥೆನಲ್ಲಿ ತಿಂಗಳಿಗೆ ಶೇಕಡ 47 ಪ್ರತಿಶತದಷ್ಟು ವಹಿವಾಟು ನಡೆಯುತ್ತದೆ. ಈ ಹಿನ್ನೆಲೆ ಯುಪಿಐ ಮೂಲಕ ವಹಿವಾಟು ನಡೆಸಿದ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳ ಪೈಕಿ ಫೋನ್‌ಪೇ ಮುಂಚೂಣಿಯಲ್ಲಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ದತ್ತಾಂಶದ ಪ್ರಕಾರ ಅಕ್ಟೋಬರ್‌ನಲ್ಲಿ, ಬೆಂಗಳೂರು ಮೂಲದ ಫೋನ್‌ಪೇ ಆನ್‌ಲೈನ್ ಪಾವತಿ ವೇದಿಕೆ ಮೂಲಕ 1.93 ಬಿಲಿಯನ್ ಯುಪಿಐ ವಹಿವಾಟುಗಳು ನಡೆದಿದೆ. ಈ ಬಗ್ಗೆ ಮಾತನಾಡಿರುವ ಫೋನ್‌ಪೇ ಸಂಸ್ಥಾಪಕ ಹಾಗೂ ಸಿಇಒ ಸಮೀರ್ ನಿಗಮ್, "ಕಳೆದ ತಿಂಗಳು ಫೋನ್‌ಪೇ ಅದ್ಭುತವಾಗಿ ವಹಿವಾಟು ನಡೆಸಿದೆ. ಇದು ನಾವು ಈವರೆಗೆ ನಡೆಸಿದ ಅತ್ಯಧಿಕ ವಹಿವಾಟು ಆಗಿದೆ. ನಾವು ಭಾರತದ ಪ್ರಮುಖ ಪಾವತಿ ವೇದಿಕೆಯಾಗಿ ನಮ್ಮ ಸ್ಥಾನವನ್ನು ಭದ್ರಪಡಿಸಿದ್ದೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ನಮ್ಮ ವಹಿವಾಟಿನ 80 ಪ್ರತಿಶತವು ಶ್ರೇಣಿ II, III ನಗರಗಳು ಮತ್ತು ಅದರಾಚೆಗಿನ ವಲಯದಿಂದ ನಡೆಯುತ್ತಿದೆ. ಈ ಅಂಶವು ಡಿಜಿಟಲ್ ಪಾವತಿಗಳು ದೇಶದ ಉದ್ದ ಮತ್ತು ಅಗಲದಾದ್ಯಂತ ನಿಜವಾಗಿಯೂ ವ್ಯಾಪಿಸಿವೆ ಎಂಬುವುದನ್ನು ಸಾಬೀತು ಪಡಿಸುತ್ತದೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ನಮ್ಮಲ್ಲಿ ಯುಪಿಐ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ವ್ಯಾಪಾರಿಗಳಿಗೆ ವಹಿವಾಟುಗಳು ಅಧಿಕವಾಗಿ ನಡೆಯುತ್ತಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಫ್ಲಿಪ್‌ಕಾರ್ಟ್-ಮಾಲೀಕತ್ವದ ಕಂಪನಿಯು ಎನ್‌ಪಿಸಿಐನ ಭಾರತ್ ಬಿಲ್ ಪೇ (ಬಿಬಿಪಿಎಸ್) ವಹಿವಾಟಿನಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಲಭ್ಯವಿರುವ ಡೇಟಾ ಪ್ರಕಾರ ಈ ವೇದಿಕೆಯಲ್ಲಿ ಆಗಸ್ಟ್‌ನಲ್ಲಿ ಶೇಕಡ 49 ರಷ್ಟು ವಹಿವಾಟು ನಡೆದಿದೆ.
ಏನಿದು ಭಾರತ್ ಬಿಲ್ ಪೇ ಅಥವಾ ಬಿಬಿಪಿಎಸ್?
ಭಾರತ್ ಬಿಲ್ ಪೇ ಅಥವಾ ಬಿಬಿಪಿಎಸ್ ಎಂಬುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಂದ ಜಾರಿ ಮಾಡಲಾದ ಪಾವತಿ ವ್ಯವಸ್ಥೆಯಾಗಿದೆ. 2015 ರಲ್ಲಿ ಇದನ್ನು ಎನ್‌ಪಿಸಿಐನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಸ್ಥಾಪನೆ ಮಾಡಲಾಗಿದೆ. ಬಿಬಿಪಿಎಸ್ ಗ್ರಾಹಕರಿಗೆ ವಿದ್ಯುತ್, ಗ್ಯಾಸ್, ಡಿಟಿಎಚ್, ವಿಮೆ, ಸಾಲ ಮರುಪಾವತಿ ಮಾಡಲು ಬೇಕಾದ ಪಾವತಿಯನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ. ಇದರಲ್ಲಿ ಫಾಸ್ಟ್ಯಾಗ್ ರೀಚಾರ್ಜ್, ಪೋಸ್ಟ್-ಪೇಯ್ಡ್ ಮೊಬೈಲ್ ಬಿಲ್‌ಗಳು, ಕೇಬಲ್ ಮತ್ತು ಶಿಕ್ಷಣ ಶುಲ್ಕಗಳನ್ನು ಪಾವತಿ ಮಾಡಬಹುದಾಗಿದೆ.
ಗೂಗಲ್ ಪೇನಿಂದಾಗಿ ಕೆಳಕ್ಕೆ ಕುಸಿದಿದ್ದ ಫೋನ್‌ಪೇ
ಕೊರೊನಾ ವೈರಸ್ ಸೋಂಕು ಬಳಿಕ ಯುಪಿಐ ವಹಿವಾಟು ದೇಶದಲ್ಲಿ ಅಧಿಕವಾಗಿದೆ. ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ಮಾಡಲಾಗಿದ್ದ ಕಾರಣದಿಂದಾಗಿ ಜನರ ಮನೆಯಲ್ಲಿಯೇ ಇರಬೇಕಾಯಿತು. ಈ ವೇಳೆ ಜನರು ಎಲ್ಲಾ ವಹಿವಾಟುಗಳಿಗೆ ಆನ್‌ಲೈನ್‌ಗೆ ಜೋತು ಬೀಳಾದ ಪರಿಸ್ಥಿತಿ ಉಂಟಾಯಿತು. ಮೊದಲ ಲಾಕ್‌ಡೌನ್ ಬಳಿಕ ಫೋನ್‌ಪೇಗೆ ಅಧಿಕ ಲಾಭವನ್ನು ಬರಲು ಆರಂಭವಾಗಿದೆ. ಆದರೆ 2020 ರ ಡಿಸೆಂಬರ್‌ನಲ್ಲಿ ಗೂಗಲ್ ಪೇ ಯು ಯುಪಿಐ ವಹಿವಾಟಿನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಫೋನ್‌ಪೇ ಅನ್ನು ಕೆಳಕ್ಕೆ ತಳಿತ್ತು. ಈ ವರ್ಷದಲ್ಲಿ ಫೆಬ್ರವರಿಯಲ್ಲಿ ಫೋನ್‌ಪೇ ಒಂದು ಮಿಲಿಯನ್ ವಹಿವಾಟು ದಾಟಿತ್ತು. ಅದಾದ ಬಳಿಕ ಈಗ ಫೋನ್‌ಪೇನಲ್ಲಿ 2 ಶತಕೋಟಿ ವಹಿವಾಟು ನಡೆದಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications