For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್ ನಲ್ಲಿ ಸತತ ಎರಡನೇ ವಾರ ಪ್ರೀಮಿಯಂ ಬೆಲೆಗೆ ಚಿನ್ನದ ಮಾರಾಟ

By ಅನಿಲ್ ಆಚಾರ್
|

ಭಾರತದಲ್ಲಿ ಫಿಸಿಕಲ್ ಚಿನ್ನದ ಡೀಲರ್ ಗಳು ಅಧಿಕೃತ ದೇಶೀ ಬೆಲೆಯ ಮೇಲೆ ಪ್ರೀಮಿಯಂನಲ್ಲಿ ಮಾರಾಟ ಮಾಡುತ್ತಿದ್ದಾರೆ. ಸತತ ಎರಡನೇ ವಾರ ಪ್ರೀಮಿಯಂನಲ್ಲಿ ಮಾರಾಟ ಆಗುತ್ತಿದೆ. ಹಬ್ಬದ ಸೀಸನ್ ಇರುವುದರಿಂದ ಜ್ಯುವೆಲ್ಲರ್ ಗಳು ಚಿನ್ನವನ್ನು ಶೇಖರಣೆ ಮಾಡುತ್ತಿದ್ದಾರೆ.

ಭಾರತದ ಯಾವ ನಗರದಲ್ಲಿ ಚಿನ್ನದ ದರ ಕಡಿಮೆ ಮತ್ತು ಯಾಕೆ?ಭಾರತದ ಯಾವ ನಗರದಲ್ಲಿ ಚಿನ್ನದ ದರ ಕಡಿಮೆ ಮತ್ತು ಯಾಕೆ?

ಭಾರತದಲ್ಲಿ ಚಿನ್ನದ ದರದಲ್ಲಿ 12.5% ಜಿಎಸ್ ಟಿ ಹಾಗೂ 3% ಜಿಎಸ್ ಟಿ ಒಳಗೊಂಡಿರುತ್ತದೆ. ಡೀಲರ್ ಗಳು ಪ್ರತಿ ಔನ್ಸ್ ಗೆ(28.3495 ಗ್ರಾಮ್) ದೇಶೀ ಅಧಿಕೃತ ಬೆಲೆಗಿಂತ $ 1 ಹೆಚ್ಚು ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಕಳೆದ ವಾರ $ 2ರ ಪ್ರೀಮಿಯಂಗೆ ಮಾರಲಾಗುತ್ತಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಸೆಪ್ಟೆಂಬರ್ ನಲ್ಲಿ ಚಿನ್ನದ ಆಮದು ಇಳಿಕೆ

ಸೆಪ್ಟೆಂಬರ್ ನಲ್ಲಿ ಚಿನ್ನದ ಆಮದು ಇಳಿಕೆ

ಸೆಪ್ಟೆಂಬರ್ ನಲ್ಲಿ ಆಮದು ಪ್ರಮಾಣ ಭಾರೀ ಇಳಿಕೆ ಆಗಿತ್ತು. ಆದರೆ ಡೀಲರ್ ಗಳಿಂದ ನಿಧಾನಕ್ಕೆ ಬೇಡಿಕೆ ಚೇತರಿಸಿಕೊಳ್ಳುತ್ತಿರುವುದರಿಂದ ಪ್ರೀಮಿಯಂಗೆ ಮಾರಾಟ ಮಾಡಲಾಗುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಸೆಪ್ಟೆಂಬರ್ ನಲ್ಲಿ ಚಿನ್ನದ ಆಮದು 53% ಇಳಿಕೆ ಆಗಿ, 601.43 ಮಿಲಿಯನ್ ಅಮೆರಿಕನ್ ಡಾಲರ್ ಗೆ ಕುಸಿದಿದೆ.

ಫ್ಯೂಚರ್ಸ್ ಮಾರ್ಕೆಟ್ ನಲ್ಲಿ ಬೆಲೆ ಕುಸಿತ

ಫ್ಯೂಚರ್ಸ್ ಮಾರ್ಕೆಟ್ ನಲ್ಲಿ ಬೆಲೆ ಕುಸಿತ

ಫ್ಯೂಚರ್ಸ್ ಮಾರ್ಕೆಟ್ ನಲ್ಲಿ ಚಿನ್ನದ ದರವು 0.3% ಇಳಿಕೆ ಆಗಿ, ಶುಕ್ರವಾರ ಪ್ರತಿ 10 ಗ್ರಾಮ್ ಗೆ 50,552 ರುಪಾಯಿ ಮುಕ್ತಾಯ ಆಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರವು ಈ ವಾರ 1% ಇಳಿಕೆ ಆಗಿದೆ. ಯುಎಸ್ ನ ಕೊರೊನಾ ಆರ್ಥಿಕ ಪ್ಯಾಕೇಜ್ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಬರುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಡಾಲರ್ ಸ್ಥಿರವಾಗಿದ್ದು, ಚಿನ್ನದ ಬೆಲೆ ಇಳಿಕೆ ಆಗಿದೆ.

ಈ ವರ್ಷ 25% ದರ ಏರಿಕೆ

ಈ ವರ್ಷ 25% ದರ ಏರಿಕೆ

ಇಲ್ಲಿಯ ತನಕ ಚಿನ್ನದ ಬೆಲೆಯಲ್ಲಿ ಈ ವರ್ಷ 25% ಏರಿಕೆ ಆಗಿದೆ. ಭಾರತದಲ್ಲಿ ಆಗಸ್ಟ್ 7ನೇ ತಾರೀಕಿನಂದು 56,200 ರುಪಾಯಿ ಗರಿಷ್ಠ ಮಟ್ಟ ಮುಟ್ಟಿತ್ತು. ಜಾಗತಿಕ ಆರ್ಥಿಕತೆಯಲ್ಲಿ ಸವಾಲುಗಳು ಹೆಚ್ಚುತ್ತಿರುವುದರಿಂದ ಚಿನ್ನದ ದರಕ್ಕೆ ತಳ ಮಟ್ಟದಲ್ಲಿ ಬೆಂಬಲ ದೊರೆಯುವ ಅವಕಾಶಗಳಿವೆ. ಇಟಿಎಫ್ ಹರಿವು ಬರುತ್ತಿದ್ದು, ಚಿನ್ನದ ಖರೀದಿಯಲ್ಲಿ ಆಸಕ್ತಿ ಕಂಡುಬರುತ್ತಿದೆ. ಯುಎಸ್ ಆರ್ಥಿಕ ಪ್ಯಾಕೇಜ್ ಮಾತುಕತೆ ಅನಿಶ್ಚಿತತೆ, ಬ್ರೆಕ್ಸಿಟ್ ಒಪ್ಪಂದ, ಕೊರೊನಾ ಪ್ರಕರಣ ಹೆಚ್ಚಳ ಹಾಗೂ ಲಸಿಕೆ ಬೆಳವಣಿಗೆ ಇವೆಲ್ಲ ಕಾರಣಗಳಿಂದಾಗಿ ಚಿನ್ನದ ದರವು ಮುಂದಿನ ಕೆಲವು ಸಮಯ ಏರಿಳಿತದಿಂದ ಕೂಡಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

English summary

Physical Gold Premium Dips In India As Rates Fall

Physical gold premium dips in India as rates of precious metal price fall. Here is the details of the gold rate.
Story first published: Sunday, October 18, 2020, 12:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X