ನವದೆಹಲಿ, ಆಗಸ್ಟ್ 25: ಪಿಕ್ ಅಪ್ ಶುಲ್ಕದ ಬಿಸಿ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ತಟ್ಟಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಬರ್ ಮತ್ತು ಓಲಾ ಕ್ಯಾಬ್‌ಗಳ ಬುಕ್ಕಿಂಗ್ ವೆಚ್ಚವು ಈ ಶುಲ್ಕದ ಪರಿಣಾಮ ಏರಿಕೆಯಾಗಿದೆ. Uber ಶುಲ್ಕ ಶೇ. 23-40 ರಷ್ಟು ಮತ್ತು Ola ದರ ಶೇ. 25 ರಷ್ಟು ಏರಿಕೆಯಾಗಿದೆ.
ಉಬರ್ ನ ಟರ್ಮಿನಲ್ 1 ರ ಪಿಕ್ ಅಪ್ ಚಾರ್ಜ್ 187 ರೂಪಾಯಿಯಿಂದ 230ಕ್ಕೆ ಏರಿಕೆಯಾಗಿದೆ. ಟರ್ಮಿನಲ್ 2 ದಲ್ಲಿ 187 ರೂ. ಬದಲು ಇನ್ನು ಮುಂದೆ 260 ರೂ. ನೀಡಬೇಕಿದೆ. ಇನ್ನು ಓಲಾ ಪಿಕಪ್ ಚಾರ್ಜ್ ಸಹ ಏರಿಕೆ ಮಾಡಿದ್ದು 172 ರೂ. ನೀಡುತ್ತಿದ್ದ ಜಾಗದಲ್ಲಿ 215 ರೂ. ನೀಡಬೇಕಿದೆ.

ವಿಮಾನ ನಿಲ್ದಾಣ ನಿರ್ವಹಣೆ ಜವಾಭ್ದಾರಿ ಹೊತ್ತಿರುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಈ ಪಿಕ್ ಅಪ್ ಶುಲ್ಕ ವಿಧಿಸುತ್ತದೆ. ಸಹಜವಾಗಿಯೇ ಈ ಶುಲ್ಕಗಳ ಹೊರೆ ಪ್ರಯಾಣಿಕರ ಮೇಲೆ ಬೀಳಲಿದೆ. ಆದರೆ ಈ ಶುಲ್ಕ ಸಂಪೂರ್ಣವಾಗಿ ವಿಮಾನ ನಿಲ್ದಾಣದ ಪಾಲಾಗಲಿದ್ದು ಸರ್ವೀಸ್ ಪ್ರೊವೈಡರ್ ಗಳಿಗೆ ದೊರೆಯುವುದಿಲ್ಲ ಎಂದು ಊಬರ್ ಹೇಳಿದೆ.
Uber ಬಳಸಿಕೊಂಡು ವಿಮಾನ ನಿಲ್ದಾಣದಲ್ಲಿ ತೆಗೆದುಕೊಳ್ಳುವ ಎಲ್ಲ ಟ್ರಿಪ್ ಗಳಿಗೆ ವಾಣಿಜ್ಯ ಒಪ್ಪಂದಗಳ ಭಾಗವಾಗಿ ಪಿಕಪ್ ಶುಲ್ಕವನ್ನು ವಿಧಿಸಲಾಗುತ್ತದೆ ಇದನ್ನು ವಿಮಾನ ನಿಲ್ದಾಣ ಆಡಳಿತಕ್ಕೆ ರವಾನಿಸಲಾಗುತ್ತದೆ. ಪಾರದರ್ಶಕತೆಯ ಉದ್ದೇಶಕ್ಕಾಗಿ ನಾವು ನಮ್ಮ ಸವಾರರಿಗೆ ಪರಿಷ್ಕೃತ ದರಗಳ ಬಗ್ಗೆ ತಿಳಿಸುತ್ತಿದ್ದೇವೆ. ನಮ್ಮ ಕಮಿಷನ್ ಮತ್ತು ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ ಯಾವುದೇ ಟ್ರಿಪ್‌ಗಳಿಗೆ ಅಂದಾಜು ದರವನ್ನು ಬುಕಿಂಗ್ ಸಮಯದಲ್ಲಿ ಮುಂಗಡವಾಗಿ ತೋರಿಸಲಾಗುತ್ತದೆ ಎಂದು ಊಬರ್ ತಿಳಿಸಿದೆ.
ಟೆಂಡರ್ ಮೂಲಕ ಟ್ಯಾಕ್ಸಿ ನಿಲ್ದಾಣ ನಿರ್ಧಾರ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣದ ಟರ್ಮಿನಲ್-1 ಹಾಗೂ ಟರ್ಮಿನಲ್-2ರಲ್ಲಿ ವಿವಿಧ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಗಳು ಟೆಂಡರ್ ಮೂಲಕ ಅವರ ಟ್ಯಾಕ್ಸಿ ನಿಲ್ದಾಣದ ಜಾಗ ಪಡೆದುಕೊಳ್ಳಲಿದ್ದು, ಕಂಪನಿ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಅವರ ಸೇವೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ.
BIAL ನ ವಕ್ತಾರರು ಒಬ್ಬರು ಹೇಳುವಂತೆ ಈ ಕ್ಯಾಬ್ ಗಳು ಅಧಿಕೃತವಾಗಿಯೇ ಸೇವೆ ನೀಡುತ್ತಿವೆ. 'ಸಾರಿಗೆ ಇಲಾಖೆ-ಅನುಮೋದಿತ ಸುಂಕದ ಪ್ರಕಾರ ದರವೇ ಕಾರ್ಯ ನಿರ್ವಹಿಸುತ್ತವೆ. KSTDC, Ola, Uber, Refex Mobility, WTI, COR ಮತ್ತು Blusmart ಗಳು BIAL ಸೇವೆ ನೀಡುತ್ತಿವೆ. ಟೆಂಡರ್‌ಗಳ ಮೂಲಕವೇ ನೇಮಕ ಮಾಡಿಕೊಳ್ಳಲಾಗುತ್ತದೆ. ಸೇವಾ ದರಗಳನ್ನು ಅಂತರೆ ತಾರಿಫ್ ಗಳನ್ನು ಪಾರ್ದರ್ಶಕವಾಗಿಯೇ ನಿರ್ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ (ರಿಯಾಯ್ತಿದಾರರನ್ನು ಹೊರತುಪಡಿಸಿ) ಪ್ರವೇಶ ಶುಲ್ಕವನ್ನು ಸಂಗ್ರಹಿಸಲು BIAL ಕಳೆದ ಮೇ ನಲ್ಲಿ ಪ್ರಯತ್ನ ಮಾಡಿತ್ತು. ಆದರೆ ವಾಣಿಜ್ಯ ವಾಹನಗಳ ಚಾಲಕರಿಂದ ಬಲವಾದ ಪ್ರತಿರೋಧವನ್ನು ಎದುರಿಸಿದ ನಂತರ, BIAL ಪ್ರವೇಶ ಶುಲ್ಕವನ್ನು ಸಂಗ್ರಹಿಸುವುದನ್ನು ಕೈಬಿಟ್ಟಿತು. ಕಮರ್ಷಿಯಲ್ ವೆಹಿಕಲ್ ಗಳಿಗೆ ಮೊದಲ ಏಳು ನಿಮಿಷಗಳಿಗೆ 150 ರೂ. ಮತ್ತು ನಂತರ ದ ಏಳು ಏಳು ನಿಮಿಷಗಳಿಗೆ ರೂ 300 ಆಗಿದ್ದರೆ, ಖಾಸಗಿ ವಾಹನಗಳಿಗೆ ಮೊದಲ ಏಳು ನಿಮಿಷಗಳು ಉಚಿತ ಮತ್ತು ಮುಂದಿನ ಏಳು ನಿಮಿಷಗಳಿಗೆ ರೂ 150 ಶುಲ್ಕ ವಿಧಿಸುವ ಪ್ರಸ್ತಾವನೆ ಇಟ್ಟುಕೊಳ್ಳಲಾಗಿತ್ತು.


Click it and Unblock the Notifications