ಬೆಂಗಳೂರಿನ ಕೆಆರ್‌ಎಸ್ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣದಂತೆ ಪುನರಾಭಿವೃದ್ಧಿ ಮಾಡಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಬಸ್‌ಗಳ ಸೇವೆಯಲ್ಲದೆ ಮೆಟ್ರೋ ಅಭಿವೃದ್ಧಿಯ ನಂತರ ಮತ್ತೆ ರೈಲ್ವೇ ನಿಲ್ದಾಣವನ್ನು ಕೂಡ ಪುನರಾಭಿವೃದ್ಧಿ ಮಾಡಲು ರೈಲ್ವೇ ಸಚಿವಾಲಯ ಮುಂದಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸೌಕರ್ಯಗಳು ಮತ್ತು ಶೈಲಿಯನ್ನು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲೂ ಇನ್ಮುಂದೆ ಕಾಣಬಹುದು. 1,500 ಕೋಟಿ ರೂ. ವೆಚ್ಚವನ್ನ ಹೂಡಿಕೆ ಮಾಡಿ ರೈಲು ನಿಲ್ದಾಣವನ್ನ ಬದಲಾವಣೆಗೆ ಮಾಡಲಾಗುತ್ತದೆ. ಈ ಯೋಜನೆಯು ನಿಲ್ದಾಣವನ್ನು ಅತ್ಯುನ್ನತ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಸಾರಿಗೆ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.

ರೈಲ್ವೇ ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 1,75,000 ಜನಸಂದಣಿ ಇರುತ್ತದೆ. ಇನ್ನು ಅಧಿಕಾರಿಗಳ ಪ್ರಕಾರ, ಭವಿಷ್ಯದಲ್ಲಿ, ಕೆಎಸ್ಆರ್ ಭಾರತದ ಅತ್ಯಂತ ಜನನಿಬಿಡ ರೈಲು ನಿಲ್ದಾಣಗಳಲ್ಲಿ ಒಂದಾಗಲದೆ ಎಂದು ಹೇಳಲಾಗ್ತಿದೆ. ರೈಲ್ವೇ ನಿಲ್ದಾಣವನ್ನ ನವೀಕರಿಸಬೇಕೆನ್ನುವ ಯೋಜನೆ ಹಲವು ವರ್ಷಗಳಿಂದ ಪರಿಗಣನೆಯಲ್ಲಿತ್ತು, ಹೀಗಾಗಿ ಅದರ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ.
ಇನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಈ ಯೋಜನೆಯ ಕುರಿತು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರು ವಿವರವಾದ ವರದಿಯನ್ನು ಒದಗಿಸುವ ಮೂಲಕ ಮಹತ್ವದ ಬದಲಾವಣೆಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗ್ತಿದೆ. ಜೊತೆಗೆ ಇದರ ಪ್ರಸ್ತಾವನೆಯನ್ನುಈಗಾಗಲೇ ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ ಎಂದು ರೈಲ್ವೇ ಸಚಿವರು ಹೇಳಿದ್ದಾರೆ.
ಹಾಗೆ ರೈಲು ನಿಲ್ದಾಣವನ್ನ ಅಭಿವೃದ್ಧಿ ಪಡಿಸಲು, ಲಭ್ಯವಿರುವ ದೊಡ್ಡ 160 ಎಕರೆ ಜಾಗದ ಬಗ್ಗೆ ಸಚಿವ ಸೋಮಣ್ಣ ಪ್ರಸ್ತಾಪಿಸಿದ್ದಾರೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರೀತಿ ರೈಲು ನಿಲ್ದಾಣದಲ್ಲಿ ಬದಲಾಣೆ ತರುವುದರಂದ ಪ್ರಯಾಣಿಕರ ಅನುಭವು ಹೆಚ್ಚಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದೆಲ್ಲದರ ಜೊತೆಗೆ ಪುನರಾಭಿವೃದ್ಧಿಯಿಂದಾಗಿ ಸ್ಥಳೀಯ ನಿವಾಸಿಗಳಿಗೆ ಉದ್ಯೋಗಾವಕಾಶವು ಸಿಗುತ್ತದೆ ಎಂದು ಸೋಮಣ್ಣ ಹೇಳಿದರು.
ಹಾಗೆ ದೇಶದ ಮೂಲಸೌಕರ್ಯದ ಅಭಿವೃದ್ಧಿಗೆ ಪ್ರಮುಖವಾದ ಇಂತಹ ನೂತನ ಯೋಜನೆಗಳಿಗೆ ಬೆಂಬಲಸುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವರು ಕೃತಜ್ಞತೆ ತಿಳಿಸಿದ್ರು. ಹಾಗೆ ಈ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಚರ್ಚೆ ಮಾಡುವುದಾಗಿ ಜೊತೆಗೆ ಶೀಘ್ರದಲ್ಲೇ ನಿಲ್ದಾಣದ ಅಭಿವೃದ್ಧಿ ಕಾರ್ಯಗಳನ್ನ ಆರಂಭಿಸುವ ಕುರಿತು ಅಧಿಕೃತ ಘೋಷಣೆಯ ನಿರೀಕ್ಷೆಯಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
'ಅತ್ಯಂತ ಸುಂದರ ವಿಮಾನ ನಿಲ್ದಾಣ'
2023 ರಲ್ಲಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಅನ್ನು ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಗುರುತಿಸಿ ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್, ವಿಶೇಷ ಬಹುಮಾನವನ್ನ ನೀಡಿತು.
ವಿಮಾನ ನಿಲ್ದಾಣದ ಟರ್ಮಿನಲ್ 2ರ ಮೊದಲ ಹಂತದ ನಿರ್ಮಾಣಕ್ಕೆ ಅಂದಾಜು 13,000 ಕೋಟಿ ರೂ. ವೆಚ್ಚವಗಿದೆ ಎಂದು ವರದಿ ಹೇಳಿದೆ. ಜೊತೆಗೆ ಇದು ಸುಮಾರು 2.5 ಲಕ್ಷ ಚದರ ಮೀಟರ್‌ನ ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿದ್ದು, ಎರಡನೇ ಹಂತದಲ್ಲಿ ಇನ್ನೂ 4.41 ಲಕ್ಷ ಚದರ ಮೀಟರ್‌ಗಳನ್ನು ಟರ್ಮಿನಲ್‌ಗೆ ಸೇರಿಸಲಾಗುವುದು. ಹಾಗೆ ಹೊಸ ಟರ್ಮಿನಲ್‌ನ ಮೊದಲ ಹಂತವು ವರ್ಷಕ್ಕೆ 25 ಮಿಲಿಯನ್ ಪ್ರಯಾಣಿಕರಿಗೆ ಇದು ಸಹಾಯಕವಾಗಲಿದೆ ಎಂಬ ನಿರೀಕ್ಷೆಯಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications