ಟಾಟಾ ಸೇರಿದಂತೆ ಹಲವಾರು ಸಂಸ್ಥೆಗಳು 5,000 ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆ ಪಡೆದಿದ್ದು, ಇದರ 2,000 ಕೋಟಿ ರೂಪಾಯಿ ಬಾಕಿ ಉಳಿದಿದೆ. ಈ ಮೊತ್ತವನ್ನು ವಸೂಲಿ ಮಾಡುವಂತೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಮೂಲಕ ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿರುವ ದಶಕಗಳ ಸಮಸ್ಯೆ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಯಿದೆ.
ಈ ವಿಚಾರವೂ ಇನ್ನು ನ್ಯಾಯಾಲದ ತೊಡಕಾಗುವ ಸಾಧ್ಯತೆಯೂ ಕೂಡಾ ಇದೆ. ಅರಣ್ಯ ಭೂಮಿಯನ್ನು ಗುತ್ತಿಗೆ ಪಡೆದವರಿಂದ ಹಣ ಸಂಗ್ರಹ ಮಾಡುವ ಬಗ್ಗೆ ಮಂಗಳವಾರ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಖಂಡ್ರೆ ಖಡಕ್ ಆಗಿ ಮಾತನಾಡಿದ್ದಾರೆ.

ಇಂತಹ ಕೆಲವು ಗುತ್ತಿಗೆ ಒಪ್ಪಂದಗಳು ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿವೆ ಎಂದು ಖಂಡ್ರೆ ಹೇಳಿದರು. "1997ರವರೆಗೆ ಸಂಸ್ಥೆಗಳು ಪ್ರತಿ ಎಕರೆಗೆ ಎರಡರಿಂದ ನಾಲ್ಕು ರೂಪಾಯಿ ಪಾವತಿ ಮಾಡುತ್ತಿತ್ತು. ಆದರೆ ಅದಾದ ಬಳಿಕ ಈ ಮೊತ್ತವನ್ನು ಪ್ರತಿ ಎಕರೆಗೆ ಐದು ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ," ಎಂದು ಖಂಡ್ರೆ ತಿಳಿಸಿದರು.
"ಆದರೆ ಅವರಲ್ಲಿ ಹಲವರು ಪಾವತಿ ಮಾಡಿಲ್ಲ. ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಬಾಕಿ ಮೊತ್ತ ಮತ್ತು ಬಡ್ಡಿ ಸೇರಿ ಈಗ 2,000 ಕೋಟಿ ರೂಪಾಯಿಗೆ ತಲುಪಿದೆ," ಎಂದು ಹೇಳಿದ ಸಚಿವರು, ಕೊಡಗು ಜಿಲ್ಲೆಯ ಇತರ ಗುತ್ತಿಗೆದಾರರಿಂದ 1,601 ಕೋಟಿ ರೂಪಾಯಿ ಪಡೆಯಬೇಕಾಗಿದೆ ಎಂದರು.
ಮನುಷ್ಯ-ಪ್ರಾಣಿ ಸಂಘರ್ಷ!
ತೋಟಗಳು ನೈಸರ್ಗಿಕ ಕಾಡುಗಳ ಮೇಲೆ ಪರಿಣಾಮ ಬೀರಿವೆ ಎಂದು ಅಧ್ಯಯನಗಳು ತೋರಿಸಿವೆ. ಇದು ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಉತ್ತೇಜನ ನೀಡುವ ಪ್ರಮುಖ ಅಂಶವಾಗಿದೆ. ವರ್ಷಗಳಲ್ಲಿ ಮರದ ನಷ್ಟವು ಮಣ್ಣಿನ ಫಲವತ್ತತೆ ಮತ್ತು ನೈಸರ್ಗಿಕ ವ್ಯವಸ್ಥೆಯ ಮೇಲೆಯೂ ಪ್ರಭಾವ ಬೀಡಿದೆ. ಕೊಡಗಿನ ಪ್ರವಾಹ ಮತ್ತು ಅನಾವೃಷ್ಟಿಗೆ ತೋಟಗಳು ಕಾರಣವೆಂದು ಆರೋಪಿಸಲಾಗಿದೆ.
ಕರ್ನಾಟಕದಲ್ಲಿ ಪ್ಲಾಂಟರ್ಸ್‌ಗೆ ಗುತ್ತಿಗೆ ನೀಡಲಾಗಿರುವ 5,500 ಎಕರೆಗಳಲ್ಲಿ 4,500 ಎಕರೆ ಪ್ರದೇಶವು ವಿರಾಜಪೇಟೆ ವಿಭಾಗದಲ್ಲಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳು ಕಂಡು ಬಂದಿದೆ. ವಿರಾಜಪೇಟೆಯಲ್ಲಿ ಪ್ರತಿ ವರ್ಷ 1,000 ಕ್ಕೂ ಹೆಚ್ಚು ಬೆಳೆ ಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಇದು 2021-22 ರಲ್ಲಿ 2,122 ಪ್ರಕರಣಗಳಿಗೆ ತಲುಪಿದೆ. 2020-21 ರಿಂದ 2023-24 ರವರೆಗೆ ಪ್ರಾಣಿ ದಾಳಿಗೆ ಒಂಬತ್ತು ಜನರು ಮೃತಪಟ್ಟರೆ, 21 ಜಾನುವಾರುಗಳು ಸಾವನ್ನಪ್ಪಿವೆ.
4,824 ಎಕರೆ ಗುತ್ತಿಗೆ ನೀಡಿರುವ ಆರು ಕಂಪನಿಗಳ ಹೆಸರುಗಳನ್ನು ಸಚಿವರು ಉಲ್ಲೇಖಿಸಿದ್ದಾರೆ. ಆರರಲ್ಲಿ, 2015 ರಿಂದ ಕೆಲವು ವರ್ಷಗಳವರೆಗೆ ಕೆಲವು ಕಂಪನಿಗಳು ಸ್ವೀಕರಿಸಬೇಕಾದ ಮೊತ್ತವನ್ನು ಅಧಿಕಾರಿಗಳು ಇನ್ನೂ ಲೆಕ್ಕ ಹಾಕಿಲ್ಲ.
ವಿಶೇಷ ತಂಡ ರಚನೆ
ಈ ಕುರಿತು ಪರಿಶೀಲಿಸಲು ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಧಾನ ಕಾರ್ಯದರ್ಶಿ (ಪರಿಸರ) ಬಿ ಪಿ ರವಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದೆ ಎಂದು ಖಂಡ್ರೆ ಹೇಳಿದರು. ನಮ್ಮ ಮುಂದೆ ಎರಡು ಸಮಸ್ಯೆಗಳಿವೆ. ಒಂದು ಬಾಕಿ ಇರುವ ಮೊತ್ತವನ್ನು ವಸೂಲಿ ಮಾಡುವುದು ಮತ್ತು ಗುತ್ತಿಗೆ ಅವಧಿ ಮುಗಿದ ಪ್ರಕರಣಗಳಲ್ಲಿ ಭೂಮಿಯನ್ನು ಮರುಪಡೆಯುವುದು. ಇನ್ನೊಂದು ಇದರಲ್ಲಿನ ಕಾನೂನು ಸಮಸ್ಯೆಗಳನ್ನು ಪರಿಗಣಿಸಿ, ವಿಶೇಷ ತಂಡವು ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಅಂತ್ಯಗೊಳಿಸಲು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಎಂದು ಸಚಿವರು ಹೇಳಿದ್ದಾರೆ.
ಅಧಿಕಾರಿಗಳು ಈಗ ಸ್ವಾತಂತ್ರ ಪೂರ್ವದ ಕಡತಗಳನ್ನು ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೋಡುತ್ತಿದ್ದಾರೆ. ಇದರಲ್ಲಿ ತೋಟಗಾರರು ಗುತ್ತಿಗೆ ಶುಲ್ಕವನ್ನು ಕೋರಿ ಇಲಾಖೆಯ ನೋಟಿಸ್ ಅನ್ನು ಪ್ರಶ್ನಿಸಿದ್ದಾರೆ.


Click it and Unblock the Notifications