ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಸುವಂತಿಲ್ಲ...ಹೋಟೆಲ್‌ಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ! ಈಗ ಇದೇನು ಹೊಸ ಕ್ರಮ...!

ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಕರ್ನಾಟಕದಲ್ಲಿ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಗೋಬಿ ಮಂಚೂರಿಗೆ ಬೆರೆಸುತ್ತಿದ್ದ ರಾಸಾಯನಿಕ ಬಣ್ಣವನ್ನು ಬಳಸದಂತೆ ನಿಷೇಧ ಹೇರಲಾಯಿತು. ಕಾಟನ್ ಕ್ಯಾಂಡಿಗೂ ಅದೇ ನಿಯಮ ತರಲಾಯಿತು. ಇದೀಗ ಇಡ್ಲಿ ಸರದಿ..ಅಂದರೆ ಇಡ್ಲಿ ತಯಾರಿಕೆಯಲ್ಲಿ ಬಳಸುತ್ತಿದ್ದ ಪ್ಲಾಸ್ಟಿಕ್ ಹಾಳೆಗಳ ವಿರುದ್ಧ ಸಮರ ಶುರುವಾಗಿದೆ. ಅಂದರೆ ಆರೋಗ್ಯ ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಸುವಂತಿಲ್ಲ..24 ತಿನಿಸುಗಳಿಗೆ ನೋಟಿಸ್

ಈಗಾಗಲೇ ರಾಜ್ಯದೆಲ್ಲೆಡೆ 254 ತಿನಿಸುಗಳ ತಪಾಸಣೆ ನಡೆಸಲಾಗಿದ್ದು, 24 ತಿನಿಸುಗಳಿಗೆ ನೋಟಿಸ್ ನೀಡಲಾಗಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಬೀದಿ ಬದಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದ ತಿನಿಸುಗಳನ್ನು ತಪಾಸಣೆ ಮಾಡಲಾಗಿದೆ. ಬಳಿಕ ಆರೋಗ್ಯದ ದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ, ಫೆಬ್ರವರಿ 14, 2025 ರಂದು ಈ ಸಂಬಂಧ ಆದೇಶ ಹೊರಡಿಸಲಾಯಿತು. ಈಗಾಗಲೇ ಅತಿಹೆಚ್ಚಿನ ತಾಪಮಾನ ಇದ್ದು, ತಾಪಮಾನಕಕ್ಎ ಒಳಗಾದ ಪ್ಲಾಸ್ಟಿಕ್‌ನಿಂದ ಆಹಾರ ಬೇಯಿಸುವುದೇ ತಪ್ಪು. ಏಕೆಂದರೆ ಅದನ್ನು ಬೇಯಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎನ್ನಲಾಗಿದೆ.

ಇನ್ನು ರೆಸ್ಟೋರೆಂಟ್‌ಗಳು, 50 ಆಹಾರ ಟ್ರಕ್‌ಗಳು ಮತ್ತು ಆಹಾರ ಮಳಿಗೆಗಳಿಗೆ ಬ್ಯಾಟರ್ ಮತ್ತು ಸಲಕರಣೆಗಳನ್ನು ಒದಗಿಸುವ ಇಡ್ಲಿ ಗುರುವಿನ ಸಂಸ್ಥಾಪಕ ಕಾರ್ತಿಕ್ ಬಿ ಶೆಟ್ಟಿ ಅವರು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬ್ಯಾಟರ್ ಮತ್ತು ಅಚ್ಚಿನ ನಡುವೆ ಸಾಂಪ್ರದಾಯಿಕವಾಗಿ ಬಳಸುವ ಬಟ್ಟೆಯನ್ನು ಸ್ವಚ್ಛಗೊಳಿಸುವಲ್ಲಿ ವೆಚ್ಚ ಮತ್ತು ಶ್ರಮವನ್ನು ಕಡಿಮೆ ಮಾಡುವ ದೃಷ್ಟಿಯಿಂದ, ತೆಳುವಾದ ಪ್ಲಾಸ್ಟಿಕ್ ಲ್ಯಾಮಿನೇಟ್ ಹೊಂದಿರುವ ಕಾಗದವನ್ನು ಬಳಸಲಾಗುತ್ತಿತ್ತು. ಏಕೆಂದರೆ ಬಟ್ಟೆಯನ್ನು ಪ್ರತಿ ಬಾರಿ ಬಳಸುವಾದ ಅದನ್ನ ನೀರಿನಲ್ಲಿ ತೊಳೆಯಬೇಕಾಗಿತ್ತು. ಆಗ ಕಾಗದದ ರೋಲ್‌ಗಳು ಶಾರ್ಟ್‌ಕಟ್ ಆಗಿದ್ದ ಸಿಕ್ಕವು. ಇವು ಬೆಣ್ಣೆ ಕಾಗದಕ್ಕೆ ಅಗ್ಗದ ಪರ್ಯಾಯವೂ ಆಗಿದ್ದವು. ದೊಡ್ಡ ಪ್ರಮಾಣದ ಇಡ್ಲಿಗಳ ಉತ್ಪಾದನೆಯು ಬಾಳೆ ಎಲೆಗಳಿಂದ ಬಟ್ಟೆ, ಪೇಪರ್ ರೋಲ್ ಮತ್ತು ಈಗ ಹೆಚ್ಚಾಗಿ ನಾನ್-ಸ್ಟಿಕ್ ಅಚ್ಚುಗಳಾಗಿ ವಿಕಸನಗೊಂಡಿತು ಎಂದಿದ್ದಾರೆ.

ಅಂದಹಾಗೆ ಈಗ ಬಹಳಷ್ಟು ಜನರು ಇಡ್ಲಿ ತಯಾರಿಕೆಗೆ ಬಟ್ಟೆಯನ್ನೇ ಬಳಸುತ್ತಿದ್ದಾರೆ. ಹಿಂದೆ ಮಾತ್ರ ಬಟ್ಟೆಗೆ ಪರ್ಯಾಯವಾಗಿ ಪ್ಲಾಸ್ಟಿಕ್ ಬಳಸಲಾಗತ್ತಿತ್ತು. ಏಕೆಂದರೆ ಬಟ್ಟೆಗಿಂತ ಅವುಗಳನ್ನು ನಿರ್ವಹಿಸುವುದು ಸುಲಭ, ಅದನ್ನು ಸ್ವಚ್ಛಗೊಳಿಸಿ ಒಣಗಿಸಬೇಕಾಗಿತ್ತು. ಅದಕ್ಕಾಗಿ ಕೆಲಸಗಾರರ ಕೊರತೆ ಕೂಡ ಇತ್ತು. ಹೀಗಾಗಿ ಆಗ ಈ ಪ್ಲಾಸ್ಟಿಕ್ ಅನುಕೂಲಕರ ಆಯ್ಕೆಯಾಗಿತ್ತು ಎಂದರು. ಜೊತೆಗೆ FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ) ಮಾನದಂಡಗಳಿಗೆ ತಲೆಬಾಗಿಮ ಪ್ಲಾಸ್ಟಿಕ್ ತ್ಯಜಿಸಲು ತಿಳಿಸುತ್ತೇವೆ ಎಂದಿದ್ದಾರೆ.

ಇದಲ್ಲದೇ ಈಗ ಸಂಪ್ರದಾಯವೇ ಒಂದು ದೊಡ್ಡ ಟ್ರೆಂಡ್ ಆಗಿದೆ. ಅದರಂತೆ, ಜನರು ಆರೋಗ್ಯಕರವಾದದ್ದನ್ನೇ ಬಳಸುತ್ತಿದ್ದಾರೆ. ಅಂದರೆ ಬಾಳೆ ಎಲೆಗಳಿಗೆ ಜನರು ಬದಲಾಗಿದ್ದಾರೆ. ಆದರೆ ಹೋಟೆಲ್‌ಗಳಲ್ಲಿ ಮಾತ್ರ ಕೆಲವೆಡೆ ಇನ್ನೂ ಪ್ಲಾಸ್ಟಿಕ್‌ನೇ ಬಳಸುತ್ತಿದ್ದಾರೆ. ಇದರಿಂದ ವಿಷಕಾರಿ ರಾಸಾಯನಿಕರಗಳು ದೇಹಕ್ಕೆ ಸೇರುವ ಸಾಧ್ಯತೆ ಇದೆ. ಇವು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತವೆ. ಮತ್ತು ಇದರಿಂದ ಬೆಳವಣಿಗೆಯ ಅಸ್ವಸ್ಥತೆಗಳು ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯಗಳು ಸೇರಿದಂತೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿಯೇ ಆರೋಗ್ಯ ಇಲಾಖೆ ಇಂಥದ್ದೊಂದು ಕ್ರಮಕ್ಕೆ ಕೈ ಹಾಕಿದೆ ಎನ್ನಲಾಗುತ್ತಿದೆ.

ಇನ್ನು ಜನರು ಅತಿಹೆಚ್ಚು ಇಷ್ಟ ಪಡುತ್ತಿದ್ದ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಗೊತ್ತೇ ಇರಲಿಲ್ಲ. ಆದರೆ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಮಿಶ್ರಣವಾಗುವ ಬಣ್ಣ ಕ್ಯಾನ್ಸರ್‍‌ಗೆ ತುತ್ತಾಗಿಸುತ್ತದೆ ಎಂಬುದು ತಿಳಿಯಿತು. ಅದರಂತೆ ಗೋಬಿ ಮಂಚೂರಿಗೂ ಅದೇ ಕಡಿವಾಣ ಹಾಕಿ, ರಾಸಾಯನಿಕ ಬಣ್ಣವಾಗಲಿ ಅಂಶವಾಗಲಿ ಬಳಸುವಂತಿಲ್ಲ ಎಂದು ನಿರ್ದೇಶನ ಮಾಡಲಾಯಿತು. ಈಗ ಇಡ್ಲಿ ತಯಾರಿಸುವ ಪ್ಲಾಸ್ಟಿಕ್‌ ಮೇಲೆ ತೂಗುಗತ್ತಿ ನೇತಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+