PM Dhan-Dhanya Krishi Yojana: ‘ಧನ ಧಾನ್ಯ ಕೃಷಿ’ ಯೋಜನೆಗೆ ಸಚಿವ ಸಂಪುಟ ಅನುಮೋದನೆ?1.75 ಕೋಟಿ ರೈತರಿಗೆ ಲಾಭ!

ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ (PMDKY) ಇದು ಕೇಂದ್ರ ಸರ್ಕಾರದ ಪ್ರಮುಖವಾದ ಯೋಜನೆಯಾಗಿದೆ. ಮೂಲಗಳ ಪ್ರಕಾರ ಮಾಹಿತಿ ಪ್ರಕಾರ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯ ಪಡೆಯುವ ಸಾದ್ಯತೆ ಇದೆ. ಈ ಯೋಜನೆಯು ವಿಶೇಷವಾಗಿ ಕೃಷಿ ಉತ್ಪಾದನೆ ಕಡಿಮೆ ಇರುವ ಜಿಲ್ಲೆಗಳಿಗೆ ಸಹಾಕಾರಿಯಾಗುತ್ತದೆ.

ಪ್ರಧಾನಮಂತ್ರಿ ‘ಧನ ಧಾನ್ಯ ಕೃಷಿ’ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆಯನ್ನು ಸೂಚಿಸಿದ್ದರೆ ದೇಶದ 1.7 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಸಾಧ್ಯತೆಯಿದೆ. ಈ ಯೋಜನೆ ಕೃಷಿಯನ್ನು ಆಧುನೀಕಕರವನ್ನು ಮಾಡುವದರ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸುವಂತಹ ಕಾರ್ಯವನ್ನು ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆಯನ್ನು 2025 ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆಯನ್ನು ಮಾಡಿದ್ದರು. ಈ ಯೋಜನೆಯ ಮೂಲಕ ಕೃಷಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸುವುದು. ಒಂದು ಬೆಳೆಯ ಬದಲು ಮಿಶ್ರ ಬೇಸಾಯ ಮಾಡುವುದು.ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವುದು. ಗ್ರಾಮ ಮಟ್ಟದಲ್ಲಿ ನೀರಾವರಿ ಮತ್ತು ಸಾಲ ಸೌಲಭ್ಯಗಳನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

ಈ ಯೋಜನೆಗಾಗಿ ಕೇಂದ್ರ ಸರ್ಕಾರ 1.37 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಕೃಷಿ ರಚನೆಯನ್ನು ಬಲಪಡಿಸಲು ಈ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಖರ್ಚು ಮಾಡಬೇಕಾಗುತ್ತದೆ.

ಎಷ್ಟು ಜಿಲ್ಲೆಗಳಲ್ಲಿ ಜಾರಿ?

ಕೇಂದ್ರ ಸರ್ಕಾರ ದೇಶದ 100 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಯೋಜನೆಯನ್ನು ಜಾರಿಗೆ ತರಲಿದೆ. ಇವು ಕೃಷಿ ಉತ್ಪಾದನೆ ಸರಾಸರಿ ಕಡಿಮೆ ಇರುವ ಜಿಲ್ಲೆಗಳಾಗಿರುತ್ತವೆ. ಈ ಪ್ರದೇಶಗಳಲ್ಲಿ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ನೀತಿಗಳನ್ನು ರೂಪಿಸುತ್ತದೆ, ಇದರಿಂದ ರೈತರು ನೇರ ಪ್ರಯೋಜನಗಳನ್ನು ಪಡೆಯಬಹುದು.

ಈ ಯೋಜನೆಗ ಒಂದು ಹೆಕ್ಟೇರ್ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರ ಮೇಲೆ. ಅಂದರೆ, ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಪ್ರಾಥಮಿಕ ಫಲಾನುಭವಿಗಳಾಗಿರುತ್ತಾರೆ. ಹೆಚ್ಚಿನ ಮಹಿಳೆಯರು ಕೃಷಿಯತ್ತ ಆಕರ್ಷಿತರಾಗುವಂತೆ ಮಾಡಲು ಈ ಯೋಜನೆಯಲ್ಲಿ ಮಹಿಳಾ ರೈತರಿಗೆ ವಿಶೇಷ ಪ್ರೋತ್ಸಾಹಧನ ಸಹ ನೀಡಲಾಗುತ್ತದೆ.

ಪ್ರಯೋಜನಗಳೇನು..?

  • ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯಿಂದ ರೈತರ ಬೆಲೆಯ ಇಳುವರಿ ಮತ್ತು ಆದಾಯ ಎರಡೂ ಹೆಚ್ಚಾಗಬಹುದು.
  • ರೈತರು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯಲು ಸಹಾಯಕ.
  • ಕೃಷಿಗೆ ಬೆಲೆಗೆ ಅಗತ್ಯವಾದ ರಸಗೊಬ್ಬರವನ್ನು ಸಹ ಉಚಿತವಾಗಿ ನೀಡಲಾಗುತ್ತದೆ.
  • ಪಂಪ್ ಅಥವಾ ಟ್ರ್ಯಾಕ್ಟರ್ ನಂತಹ ನೀರಾವರಿ ಉಪಕರಣಗಳ ಖರೀದಿಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದು.
  • ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಯ ಬಗ್ಗೆ ರೈತರಿಗೆ ತರಬೇತಿ ನೀಡಲಾಗುವುದು.
  • ಕೊಯ್ಲು ಮಾಡಿದ ನಂತರ ಬೆಳೆಯನ್ನು ಸುರಕ್ಷಿತವಾಗಿಡಲು ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಶೇಖರಣಾ ಸೌಲಭ್ಯಗಳನ್ನು ಸಿದ್ಧಪಡಿಸಲಾಗುತ್ತದೆ.
  • ರೈತರು ಕೃಷಿಗಾಗಿ ಸುಲಭವಾಗಿ ಸಾಲಗಳನ್ನು ಪಡೆದುಕೊಳ್ಳಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+