ಏಪ್ರಿಲ್ 14ರಂದು ಪ್ರಧಾನಿ ಮೋದಿ ಭಾಷಣ: ಲಾಕ್‌ಡೌನ್‌ನಿಂದ ಏನೆಲ್ಲಾ ವಿನಾಯ್ತಿ ಸಿಗಲಿದೆ?

ಕೊರೊನಾವೈರಸ್‌ನಿಂದಾಗಿ 21 ದಿನಗಳ ಲಾಕ್‌ಡೌನ್ ಏಪ್ರಿಲ್ 14ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ದೇಶದ 130 ಕೋಟಿ ಜನರ ಎರಡು ಪ್ರಶ್ನೆಗಳೆಂದರೆ ಲಾಕ್‌ಡೌನ್ ವಿಸ್ತರಣೆಯಾಗುತ್ತಾ? ಅಥವಾ ಇಲ್ಲವಾ? ಎಂಬುದು.

ಕೋಟ್ಯಾಂತರ ಜನರ ಜೀವನದ ಮೇಲೆ ಪರಿಣಾಮ ಬೀರಿರುವ ಲಾಕ್‌ಡೌನ್‌ ವಿಸ್ತರಣೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 14 ರಂದು ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮಾರ್ಚ್‌ 24ರಂದು 21 ದಿನಗಳ ಲಾಕ್‌ಡೌನ್ ಘೋಷಣೆಯ ಬಳಿಕ ಪ್ರಧಾನಿ ಮೋದಿ ಮೂರನೇ ಬಾರಿಗೆ ಜನತೆಯನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಡಿಮೆ ಇರುವಂತಹ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಮೊದಲು ಹಂತ ಹಂತವಾಗಿ ಹಿಂದಕ್ಕೆ ಪಡೆಯಬಹುದು ಎಂಬ ವ್ಯಾಪಕ ನಿರೀಕ್ಷೆಯಿದೆ. ಹೀಗಾಗಿ ಏನೆಲ್ಲಾ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.

ಏಪ್ರಿಲ್‌ 30ರವರೆಗೆ ಲಾಕ್‌ಡೌನ್ ವಿಸ್ತರಿಸಿವೆ ಕೆಲವು ರಾಜ್ಯಗಳು

ಏಪ್ರಿಲ್‌ 30ರವರೆಗೆ ಲಾಕ್‌ಡೌನ್ ವಿಸ್ತರಿಸಿವೆ ಕೆಲವು ರಾಜ್ಯಗಳು

ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ಅನೇಕ ರಾಜ್ಯಗಳು ಈಗಾಗಲೇ ಏಪ್ರಿಲ್ 30 ರವರೆಗೆ ಲಾಕ್ ಡೌನ್ ವಿಸ್ತರಣೆಯನ್ನು ಘೋಷಿಸಿವೆ.

ವಾರಾಂತ್ಯದಲ್ಲಿ, ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಕೆಲವು ವಲಯಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅವಕಾಶ ನೀಡುವ ಬಗ್ಗೆ ಕೇಂದ್ರ ಗೃಹ ಸಚಿವಾಲಯವನ್ನು ಕೇಳಲಾಗಿದೆ. ಏಕೆಂದರೆ ಈಗಾಗಲೇ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರಿದ್ದು ಸರ್ಕಾರದ ಖಜಾನೆಗೂ ಪೆಟ್ಟು ಬಿದ್ದಿದೆ. ಹೀಗಾಗಿ ಜನರ ಆರ್ಥಿಕ ಸ್ಥಿತಿಯನ್ನೂ ಗಮನದಲ್ಲಿಟ್ಟುಕೊಂಡು ಏನೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಸಹ ಕುತೂಹಲ ಮೂಡಿಸಿದೆ.

 

ಉತ್ಪಾದನೆ/ಸೇವಾ ವಲಯಗಳಿಗೆ ನಿಧಾನಗತಿಯಲ್ಲಿ ಆರಂಭ ನೀಡುವುದು

ಉತ್ಪಾದನೆ/ಸೇವಾ ವಲಯಗಳಿಗೆ ನಿಧಾನಗತಿಯಲ್ಲಿ ಆರಂಭ ನೀಡುವುದು

ಯಾವುದೇ ಕೆಲಸ ಇರುವುದಕ್ಕಿಂತ ಸ್ವಲ್ಪವಾದರೂ ಕೆಲಸ ಇರುವುದು ಉತ್ತಮವಾಗಿರುತ್ತದೆ. ಹೀಗಾಗಿ ಕೈಗಾರಿಕಾ ಘಟಕಗಳು ಒಂದೇ ಶಿಫ್ಟ್‌ನಲ್ಲಿ ಕೇವಲ 20 ಪರ್ಸೆಂಟ್‌ರಿಂದ 25 ಪರ್ಸೆಂಟ್‌ನಷ್ಟು ಸಾಮರ್ಥ್ಯದೊಂದಿಗೆ(ಉದ್ಯೋಗಿಗಳು) ಕೆಲಸವನ್ನು ಪ್ರಾರಂಭಿಸಬಹುದು ಎಂದು ಡಿಪಿಐಐಟಿ ಸೂಚಿಸುತ್ತದೆ.

ಕೆಲಸ ಪುನರಾರಂಭಗೊಳ್ಳಲು, ಕೈಗಾರಿಕೆಗಳು ಕಾರ್ಮಿಕರಿಗೆ ಒಂದೇ ಪ್ರವೇಶ ಇರುವುದನ್ನು ಖಚಿತಪಡಿಸಿಕೊಳ್ಳಬೇಕು, ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಸ್ಥಳಾವಕಾಶ, ಕಾರ್ಮಿಕರನ್ನು ಕರೆಸಲು ಕಳುಹಿಸಲು ಪ್ರತ್ಯೇಕ ಸಾರಿಗೆಯ ಬಳಕೆ ಅಥವಾ ಕಾರ್ಖಾನೆಯ ಆವರಣದಲ್ಲಿ ವಾಸ್ತವ್ಯದ ವ್ಯವಸ್ಥೆ ಒದಗಿಸುವುದು ಆಗಿದೆ. ಜೊತೆಗೆ ಆವರಣದಲ್ಲಿ ಉತ್ತಮ ಗುಣಮಟ್ಟದ ನಿಯಮಿತ ನೈರ್ಮಲ್ಯೀಕರಣವನ್ನು ಖಚಿತಪಡಿಸಿಕೊಳ್ಳಬೇಕು.

ಡಿಪಿಐಐಟಿಯ ಪ್ರಕಾರ ಕೆಲಸ ಪುನರಾರಂಭಿಸುವ ಕೈಗಾರಿಕೆಗಳ ಪಟ್ಟಿಯಲ್ಲಿ ಇವು ಸೇರಿವೆ: ಸಿಮೆಂಟ್, ಜವಳಿ, ವಾಹನಗಳು, ಬೀಜ, ರಸಗೊಬ್ಬರಗಳು ಮತ್ತು ಪ್ಲಾಸ್ಟಿಕ್.

 

ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡುವುದು

ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡುವುದು

ಈಗಾಗಲೇ ಆಮದು -ರಫ್ತು ಇಲ್ಲದೆ ವ್ಯವಹಾರ ಕುಸಿದಿದೆ. ಅದರಲ್ಲೂ ಭಾರತದ ಉತ್ಪಾದನಾ ಕ್ಷೇತ್ರದ ಜೀವನಾಡಿಯಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇಗಳು) ನಿರ್ಬಂಧಿತ ಕಾರ್ಯಾಚರಣೆಗಳೊಂದಿಗೆ ಆರಂಭಿಸಲು ಅವಕಾಶ.

ಆದರೂ ಶೂನ್ಯ ಉತ್ಪಾದನೆಯೊಂದಿಗೆ ಸಾಲವನ್ನು ಮರುಪಾವತಿಸುವ ಕ್ಷೇತ್ರದ ಸಾಮರ್ಥ್ಯವು ಈ ವಲಯವನ್ನು ಕಾಡುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂರು ತಿಂಗಳವರೆಗೆ ಸಾಲ ಮರುಪಾವತಿ ಕುರಿತು ನಿಷೇಧವನ್ನು ಘೋಷಿಸಿದ್ದರೂ, ಟರ್ಮ್ ಸಾಲಗಳ ಬಡ್ಡಿ ಪಾವತಿಗಳ ಬಗ್ಗೆ ಸ್ಪಷ್ಟತೆಯ ಕೊರತೆಯ ದೂರುಗಳಿವೆ. ಆರ್ಥಿಕ ಚಟುವಟಿಕೆಗಳ ಪುನರಾರಂಭವು ಈ ವಲಯಕ್ಕೆ ಸ್ವಲ್ಪ ಚೇತರಿಕೆ ನೀಡುತ್ತದೆ.

 

ವಸತಿ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ಅವಕಾಶ ನೀಡುವುದು

ವಸತಿ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ಅವಕಾಶ ನೀಡುವುದು

ಎಲ್ಲಾ ಸೌಕರ್ಯಗಳಿದ್ದು ಮತ್ತು ಸುರಕ್ಷತೆಗಳೊಂದಿಗೆ ಕಟ್ಟಡ ಕಾಮಗರಿ ಸ್ಥಳಗಲ್ಲೇ ಕಾರ್ಮಿಕರು ಉಳಿದಿದ್ದರೆ ಅವರಿಗೆ ವಸತಿ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಜನರ ಕೈಯಲ್ಲಿ ಹಣ ವಹಿವಾಟು ನಡೆಯಲು ಈ ಚಟುವಟಿಕೆ ಅವಶ್ಯಕ.

ದೇಶವು ಸಂಪೂರ್ಣ ಲಾಕ್‌ಡೌನ್ ಘೋಷಣೆಯ ನಂತರ, ಲಕ್ಷಾಂತರ ವಲಸೆ ಕಾರ್ಮಿಕರು ನಗರ ಬಿಟ್ಟು ತಮ್ಮ ಊರಿಗೆ ವಾಪಸ್ ಹೋದರು. ಆದರೆ ಈ ನಿರ್ಮಾಣ ಚಟುವಟಿಕೆಗಳು ಪುನರಾರಂಭಗೊಂಡರೆ, ಕೆಲಸವಿಲ್ಲದ ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ದು ಅನೌಪಚಾರಿಕ ಕಾರ್ಮಿಕರ ಉಳಿವಿಗಾಗಿ ಮತ್ತು ಅವರನ್ನು ಅವರು ಪೋಷಿಸಿಕೊಳ್ಳಲು ಇರುವ ಕಳವಳವನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು.

 

ಜನರ ಆದಾಯದ ಕೊರತೆ ಪರಿಣಾಮ ತಗ್ಗಿಸುವ ಪ್ರಯತ್ನ

ಜನರ ಆದಾಯದ ಕೊರತೆ ಪರಿಣಾಮ ತಗ್ಗಿಸುವ ಪ್ರಯತ್ನ

ಲಾಕ್‌ಡೌನ್ ದೈನಂದಿನ ಕೂಲಿಯ ಮೇಲೆ ಅವಲಂಭಿತರಾಗಿರುವ ಜನರು ಪಟ್ಟಣಗಳು ಮತ್ತು ನಗರಗಳಲ್ಲಿ ಕೆಲಸ ಮಾಡುವ ಹತ್ತಾರು ಜನರ ಆದಾಯದ ಮೇಲೆ ಪರಿಣಾಮ ಬೀರಿದೆ.

ಚಮ್ಮಾರರಿಂದ ಹಿಡಿದು ಎಸಿ ರಿಪೇರಿ ಮೆಕ್ಯಾನಿಕ್ಸ್‌ನಿಂದ ಎಲೆಕ್ಟ್ರಿಷಿಯನ್‌ಗಳವರೆಗೆ, ನೆರೆಹೊರೆಯ ಧೋಬಿಯಿಂದ ಕಾರು ಮತ್ತು ಸೈಕಲ್ ರಿಪೇರಿ ಮೆಕ್ಯಾನಿಕ್‌ಗಳವರೆಗೆ ಹಾಗೂ ತರಕಾರಿ ಮತ್ತು ಹಣ್ಣು ಮಾರಾಟಗಾರರವರೆಗೆ ಭಾರೀ ಪರಿಣಾಮ ಬೀರಿದೆ. ಇದನ್ನೂ ಸಹ ಗಮನದಲ್ಲಿಟ್ಟುಕೊಂಡು ಅಂತಹ ಸೇವೆಗಳನ್ನು ನೀಡುವ ಆನ್‌ಲೈನ್ ಅಗ್ರಿಗೇಟರ್‌ಗಳು ಸೇರಿದಂತೆ ಜನರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಲ್ಲಿ ಡಿಪಿಐಐಟಿ ಪರವಾಗಿದೆ.

ಈ ಮೇಲಿನ ಎಲ್ಲಾ ಅಂಶಗಳು ದೇಶದ ಆರ್ಥಿಕತೆ ಮೇಲಿನ ಪರಿಣಾಮದ ದೃಷ್ಟಿಯಿಂದ ಕೆಲವು ಮಾರ್ಪಾಡುಗಳನ್ನು ತರುವ ಸಾಧ್ಯತೆ ಇದೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+