ಕೊರೊನಾವೈರಸ್ ಹರಡುವಿಕೆ ತಪ್ಪಿಸಲು ಡಿಜಿಟಲ್ ಪೇಮೆಂಟ್ ಬಳಸಿ:ಮೋದಿ

ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾವೈರಸ್‌ ಜನರಲ್ಲಿ ಸಾಕಷ್ಟು ಭೀತಿಯನ್ನು ಸೃಷ್ಟಿಸಿದ್ದು, ಇದೇ ವೇಳೆ ಜನತಾ ಕರ್ಫ್ಯೂ ಕೂಡ ಯಶಸ್ವಿಯಾಗಿದೆ. ಈ ಹೊತ್ತಿನಲ್ಲಿ ಜನರು ಯಾವುದೇ ವ್ಯವಹಾರ ಮಾಡುವುದಿದ್ದರೂ ಡಿಜಿಟಲ್ ಪೇಮೆಂಟ್ ಆಯ್ದುಕೊಂಡರೆ ವೈರಸ್ ಹರಡುವಿಕೆ ತಪ್ಪಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಡಿಜಿಟಲ್ ಪೇಮೆಂಟ್ ಮುಖಾಂತರ ಹಣ ವ್ಯವಹಾರ ಮಾಡಿದರೆ ಒಬ್ಬರಿಂದ ಮತ್ತೊಬ್ಬರಿಗೆ ಹಣ ವಹಿವಾಟುವಾಗುವುದು ತಪ್ಪುತ್ತದೆ. ಇದರಿಂದ ವೈರಸ್ ಹರಡುವಿಕೆಯು ತಪ್ಪುತ್ತದೆ ಎಂಬುದು ಪ್ರಧಾನಿ ಸಂದೇಶದ ಹಿಂದಿನ ಅರ್ಥವಾಗಿದೆ.

ಕೊರೊನಾವೈರಸ್ ಹರಡುವಿಕೆ ತಪ್ಪಿಸಲು ಡಿಜಿಟಲ್ ಪೇಮೆಂಟ್ ಬಳಸಿ:ಮೋದಿ

ಉದ್ಯಮಿ ಮೋಹನ್ ದಾಸ್ ಪೈ ಕೂಡ ಕೊರೊನಾವೈರಸ್‌ನಿಂದ ದೂರವಿಡಲು ಡಿಜಿಟಲ್‌ ಪೇಮೆಂಟ್‌ನ ಅಗತ್ಯತೆ ಇದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಸುರಕ್ಷಿತವಾಗಿ ಪಾವತಿಸಿ, ಸುರಕ್ಷಿತವಾಗಿರಿ' ಎಂಬ ಅನಿಸಿಕೆಯುಳ್ಳ ಅವರ ವಿಡಿಯೋವನ್ನು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ರಿಟ್ವೀಟ್ ಮಾಡಿದ್ದಾರೆ.

ವಿಡಿಯೋ ರೀಟ್ವೀಟ್ ಮಾಡಿರುವ ಮೋದಿ 'ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇದು ಸಕಾಲ. ಅದಕ್ಕೆ ಡಿಜಿಟಲ್ ಪೇಮೆಂಟ್ ಸಹಕಾರಿ' ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+