For Quick Alerts
ALLOW NOTIFICATIONS  
For Daily Alerts

ಪ್ರಧಾನಿ ನರೇಂದ್ರ ಮೋದಿಯಿಂದ ಈ ತನಕ 103 ಕೋಟಿ ರು.ಗೂ ಹೆಚ್ಚು ದಾನ

|

ವಿವಿಧ ಕಾರ್ಯಕ್ರಮ ಹಾಗೂ ಉದ್ದೇಶಗಳಿಗೆ ಇದುವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ದೇಣಿಗೆ ಎಷ್ಟು ಇರಬಹುದು ಅಂದಾಜು ಮಾಡಿ. ನಿಮಗೆ ಊಹಿಸುವುದಕ್ಕೆ ಕಷ್ಟ ಆಗಬಹುದು. ಈ ತನಕ ಅವರು ದಾನ ನೀಡಿರುವ ಮೊತ್ತ 103 ಕೋಟಿ ರುಪಾಯಿಗೂ ಹೆಚ್ಚು. ಅದರಲ್ಲಿ ಸ್ವಂತ ಉಳಿತಾಯ ಹಾಗೂ ಅವರಿಗೆ ಸೇರಿದ ವಸ್ತುಗಳನ್ನು ಹರಾಜು ಹಾಕಿದ್ದರಿಂದ ಬಂದ ಮೊತ್ತ ಎಲ್ಲವೂ ಸೇರಿದೆ.

PM- CARES ಫಂಡ್ ಗೆ ಆರಂಭದಲ್ಲಿ 2.25 ಲಕ್ಷ ರುಪಾಯಿ ದೇಣಿಗೆ ನೀಡಿದ್ದರು ಮೋದಿ. ಕೊರೊನಾದ ಸವಾಲನ್ನು ನಿರ್ವಹಿಸುವ ಕಾರಣಕ್ಕೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಸ್ವತಃ ಮೋದಿ ಇದನ್ನು ಆರಂಭಿಸಿದ್ದರು. ಇನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ, ಗಂಗಾ ಶುದ್ಧೀಕರಣ ಕಾರ್ಯಕ್ರಮ ಮತ್ತಿತರ ಉದ್ದೇಶಗಳಿಗೆ ದೇಣಿಗೆ ನೀಡಿದ್ದಾರೆ ಎನ್ನುತ್ತಾರೆ ಈ ಬಗ್ಗೆ ಮಾಹಿತಿ ಇರುವವರು.

2019ರಲ್ಲಿ ಕುಂಭ ಮೇಳ

2019ರಲ್ಲಿ ಕುಂಭ ಮೇಳ

2019ರಲ್ಲಿ ಕುಂಭ ಮೇಳ ನಡೆಯುವ ಸಂದರ್ಭದಲ್ಲಿ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ 21 ಲಕ್ಷ ರುಪಾಯಿ ದೇಣಿಗೆ ನೀಡಿದ್ದರು ಮೋದಿ. ದಕ್ಷಿಣ ಕೊರಿಯಾದಿಂದ ಕಳೆದ ವರ್ಷ ಸಿಯೋಲ್ ಶಾಂತಿ ಪ್ರಶಸ್ತಿ ಜತೆಗೆ ಬಂದ 1.3 ಕೋಟಿ ರುಪಾಯಿ ಹಣವನ್ನು ನಮಾಮಿ ಗಂಗಾ ಯೋಜನೆಗಾಗಿ ಘೋಷಣೆ ಮಾಡಿದರು.

ನಮಾಮಿ ಗಂಗಾ ಯೋಜನೆಗೆ

ನಮಾಮಿ ಗಂಗಾ ಯೋಜನೆಗೆ

ಪ್ರಧಾನಿಯಾದ ಮೇಲೆ ಮೋದಿ ಅವರಿಗೆ ಬಂದ ಸ್ಮರಣಿಕೆಗಳನ್ನು ಹರಾಜು ಹಾಕಲಾಯಿತು. ಅದರಿಂದ ಬಂದ ಮೊತ್ತ 3.40 ಕೋಟಿ ರುಪಾಯಿ. ಅದನ್ನೂ ನಮಾಮಿ ಗಂಗಾ ಯೋಜನೆಗೆ ದೇಣಿಗೆ ನೀಡಿದರು. ಕೆಲ ಸಮಯದ ಹಿಂದೆ ನಡೆದಿದ್ದ ಮತ್ತೊಂದು ಹರಾಜಿನಲ್ಲಿ 8.35 ಕೋಟಿ ರುಪಾಯಿ ಸಂಗ್ರಹ ಆಯಿತು. ಆ ಮೊತ್ತವನ್ನೂ ನಮಾಮಿ ಗಂಗಾ ಯೋಜನೆಗೆ ನೀಡಿದ್ದರು.

ಗುಜರಾತ್ ಮುಖ್ಯಮಂತ್ರಿ ಆಗಿದ್ದ ಅವಧಿ

ಗುಜರಾತ್ ಮುಖ್ಯಮಂತ್ರಿ ಆಗಿದ್ದ ಅವಧಿ

ಇನ್ನು ಗುಜರಾತ್ ನಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಮೋದಿ ಅವರು ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರುಪಾಯಿಯನ್ನು ಸರ್ಕಾರಿ ನೌಕರರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದೇಣಿಗೆ ನೀಡಿದ್ದರು. ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಂದಿದ್ದ ಉಡುಗೊರೆಗಳನ್ನು ಹರಾಜು ಹಾಕಿದ್ದರಿಂದ ಬಂದಿದ್ದ 89.96 ಕೋಟಿ ರುಪಾಯಿಯನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರೂಪಿಸಿದ್ದ ಕನ್ಯಾ ಕೆಲವಾಣಿ ಫಂಡ್ ಗೆ ನೀಡಿದ್ದರು.

English summary

PM Narendra Modi Donated More Than 103 Crore Till Date

According to sources, PM Narendra Modi donated more than 103 crore till date for various cause and program.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X