ಕರ್ನಾಟಕದಲ್ಲಿ (Karnataka) ಸಂಕ್ರಾಂತಿ ಹಬ್ಬ ಹೇಗೋ ಅದೇ ರೀತಿ ತಮಿಳುನಾಡಿನಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಪೊಂಗಲ್ ಹಬ್ಬ (Pongal Festival) ಆಚರಿಸಲಾಗುತ್ತದೆ. ಇದು ತಮಿಳುನಾಡಿನಲ್ಲಿ ಆಚರಿಸುವ ಸುಗ್ಗಿ ಹಬ್ಬ ಅಥವಾ ಕೃಷಿ ಉತ್ಸವ. ಇದು ಸೂರ್ಯ ದೇವರಿಗೆ, ಪೃಕೃತಿಗಾಗಿ ಮತ್ತು ರೈತರ ಕಠಿಣ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ಹಬ್ಬವೆಂದು ಪರಿಗಣಿಸಲಾಗಿದೆ. ಹೊಸ ಧಾನ್ಯ, ಅಕ್ಕಿ ಬೆಳೆದಾಗ ಅದಕ್ಕಾಗಿ ಸಮೃದ್ಧಿ ಮತ್ತು ಒಗ್ಗಟ್ಟನ್ನು ಸಾರುವ ದೃಷ್ಟಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ಪೊಂಗಲ್ ಎಂದರೇನು?
ಇನ್ನು ತಮಿಳಿನಲ್ಲಿ ಪೊಂಗಲ್ ಎಂದರೆ, ಉಕ್ಕಿ ಹರಿಯುವುದು ಅಥವಾ ಸಮೃದ್ಧಿಯಾಗಿ ತುಂಬುವುದು ಎಂಬ ಅರ್ಥ. ಹಾಲು, ಅಕ್ಕಿ, ಬೆಲ್ಲದಿಂದ ಮಾಡಿದ ಸಿಹಿ ಅನ್ನವನ್ನು ಪೊಂಗಲ್ ಎಂದು ಕರೆಯುತ್ತಾರೆ. ಇದೇ ಪೊಂಗಲ್ ಹಬ್ಬದ ಕೇಂದ್ರ ಬಿಂದುವಾಗಿರುತ್ತದೆ.
ಏನಿದು ಪೊಂಗಲ್ ಗಿಫ್ಟ್?
ತಮಿಳುನಾಡು ಸರ್ಕಾರದಿಂದ ಪ್ರತೀ ವರ್ಷ ಪೊಂಗಲ್ ಹಬ್ಬದ ಸಂದರ್ಭದಲ್ಲಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಗಿಫ್ಟ್ ಹ್ಯಾಂಪರ್ ನೀಡಲಾಗುತ್ತದೆ. 2026 ರಲ್ಲಿ ಇದೀಗ ಪೊಂಗಲ್ ಗಿಫ್ಟ್‌ನಲ್ಲಿ ಮಹತ್ವದ ಬದಲಾವಣೆ ತರಲು ತಮಿಳುನಾಡು ಸರ್ಕಾರ ಮುಂದಾಗಿದೆ.
ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಗಿಫ್ಟ್ ಪ್ಯಾಕೇಜ್‌ನಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ. ಜನವರಿ 3ರಿಂದ ಫಲಾನುಭವಿಗಳಿಗೆ ಸೀರೆ ಹಾಗೂ ವೇಷ್ಟಿಗಳ ಬದಲಿಗೆ ಹಣ ನೀಡುವುದಾಗಿ, ಅದರಲ್ಲೂ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ ಎಂದು ವರದಿಯಾಗಿದೆ.
ಪೊಂಗಲ್ ಹಬ್ಬ ಆಚರಿಸುವುದೇಕೆ?
ಸೂರ್ಯ ದೇವರಿಗೆ, ಜಾನುವಾರು ಮತ್ತು ಕೃಷಿಯನ್ನು ಪೋಷಿಸುವ, ಪ್ರಕೃತಿಯನ್ನು ಗೌರವಿಸುವ ಸುಗ್ಗಿ ಹಬ್ಬವೇ ಪೊಂಗಲ್ ಹಬ್ಬ. ತಮಿಳುನಾಡಿನಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ಈ ನಾಲ್ಕು ದಿನಗಳ ಹಬ್ಬಕ್ಕೆ ಭೋಗಿ, ಥೈ ಪೊಂಗಲ್, ಮಾಟ್ಟು ಪೊಂಗಲ್ ಮತ್ತು ಉಳವರ್ ತಿರುನಾಳ್ ಕೂಡ ಸೇರಿಗೆ. ಈಗಾಗಲೇ ಈ ಹಬ್ಬಕ್ಕಾಗಿ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿವೆ.
ಸಾಂಪ್ರದಾಯಿಕವಾಗಿ, ತಮಿಳುನಾಡು ಸರ್ಕಾರ ಕೂಡಾ ಈ ಹಬ್ಬಕ್ಕೆ ಬೆಂಬಲ ನೀಡುವ ಮೂಲಕ, ಪೊಂಗಲ್ ಆಚರಣೆಗೆ ಗಿಫ್ಟ್ ಪ್ಯಾಕೇಜ್‌ಗಳನ್ನು ನೀಡುತ್ತದೆ. 2026ನೇ ಸಾಲಿನ ಪೊಂಗಲ್ ಪ್ಯಾಕೇಜ್ ಕುರಿತ ಮಹತ್ವದ ಘೋಷಣೆಯೊಂದು ಹೊರಬಿದ್ದಿದೆ. ಹಬ್ಬದ ಪ್ರಯುಕ್ತ ಪಡಿತರ ಚೀಟಿದಾರರಿಗೆ 4 ಕೆಜಿ ಅಕ್ಕಿ, ಸಕ್ಕರೆ, ಹೆಸರುಕಾಳು, 300 ಗ್ರಾಂ ತುಪ್ಪ ಹಾಗೂ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಲಭ್ಯವಾಗಲಿದೆ.ಆದರೆ ಇದರ ಬದಲಿಗೆ ಹಣವನ್ನೂ ನೀಡಬಹುದು ಎಂದು ಹೇಳಲಾಗುತ್ತಿದೆ.
ಅಲ್ಲದೇ ಪೊಂಗಲ್ ನೆರವು ವಿತರಣೆಯ ಭಾಗವಾಗಿ, ಆದಿ ದ್ರಾವಿಡ ಕಲ್ಯಾಣ ಇಲಾಖೆಯು ಪಡಿತರ ಚೀಟಿದಾರರಿಗೆ ಸೀರೆ/ವೇಷ್ಟಿಗಳ ಬದಲು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಿದೆ. ಇದೇ ರೀತಿಯ ವ್ಯವಸ್ಥೆಗಳು ಪುದುಚೇರಿಯಲ್ಲಿಯೂ ಜಾರಿಯಲ್ಲಿವೆ.
ಪುದುಚೇರಿ ಸರ್ಕಾರದಿಂದ, ಏಕ ಸದಸ್ಯತ್ವದ ಪಡಿತರ ಚೀಟಿದಾರರಿಗೆ ₹500 ರೂ. ಹಾಗೂ ಎರಡಕ್ಕಿಂತ ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗಳಿಗೆ ₹1,000 ನಗದು ದೊರೆಯಲಿದೆ. ಇನ್ನು ಪುದುಚೇರಿಯಲ್ಲಿ ಸಾಂಪ್ರದಾಯಿಕ ಪೊಂಗಲ್ ಹ್ಯಾಂಪರ್ ಸಾಮಾನ್ಯವಾಗಿ 1 ಕೆಜಿ ಅಕ್ಕಿ, ಸಕ್ಕರೆ, ತಾಳೆ ಬೆಲ್ಲ ಮತ್ತು ಇತರೆ ಅಗತ್ಯ ವಸ್ತುಗಳನ್ನು ಒಳಗೊಂಡಿರುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications