Post Office Jobs: ಅಂಚೆ ಇಲಾಖೆ ಉದ್ಯೋಗ ಪಡೆಯಲು ಉತ್ತಮ ಅವಕಾಶ! ಈಗಲೇ ಅರ್ಜಿ ಸಲ್ಲಸಿ

ನೀವು ಉದ್ಯೋಗಗಳಿಗಾಗಿ ಎದುರು ನೋಡತ್ತಿದ್ರೆ, ನಿಮಗಾಗಿ ಅಂಚೆ ಇಲಾಖೆ ಉದ್ಯೋಗವಕಾಶವನ್ನ ನೀಡ್ತಿದೆ. ನೀವು 10 ನೇ ತರಗತಿ ತೇರ್ಗಡೆಯಾಗಿದ್ದರೆ ಸಾಕು ನೀವು ಉದ್ಯೋಗವನ್ನ ಪಡೆಯಬಹುದು. ಹೌದು ಭಾರತೀಯ ಅಂಚೆ ಇಲಾಖೆ ಸ್ಟಾಫ್‌ ಕಾರ್‌ ಡ್ರೈವರ್‌ ಹುದ್ದೆಯ ನೇಮಕಾತಿಗಾಗಿ ಅರ್ಜಿಯನ್ನ ಆಹ್ವಾನಿಸಿದೆ. ಈ ಹುದ್ದೆಗೆ ನೀವು ಆಫ್‌ಲೈನ್‌ ಅಥವಾ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಭಾರತೀಯ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ indiapost.gov.inಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್‌ ಮಾಡಿ ನಿರ್ದಿಷ್ಟ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

ಅಂಚೆ ಇಲಾಖೆ ಉದ್ಯೋಗ ಅವಕಾಶ! ಈಗಲೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಅವಧಿ

ಈ ಹುದ್ದೆಗಾಗಿ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 8, 2025ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಮೂಲಕ ಭಾರತೀಯ ಅಂಚೆ ಇಲಖೆ ಒಟ್ಟು 25 ಚಾಲಕರ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ಈ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.

ಇನ್ನು ಈ ಹುದ್ದೆಗಳು ಎಲ್ಲೆಲ್ಲಿ ಎಷ್ಟಿವೆ ಅನ್ನೋದನ್ನ ನೋಡೋದಾದ್ರೆ, ಕೆಂದ್ರ ವಲಯದಲ್ಲಿ 1 ಹುದ್ದೆ, MMS, ಚೆನ್ನೈನಲ್ಲಿ 15 ಹುದ್ದೆಗಳು, ದಕ್ಷಿಣ ವಲಯದಲ್ಲಿ 4 ಹುದ್ದೆಗಳು, ಪಶ್ಚಿಮ ವಲಯದಲ್ಲಿ 5 ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದೆ.

ಈ ಉದ್ಯೋಗಕ್ಕಾಗಿ ಇರುವ ಅರ್ಹತೆ ಮತ್ತು ಮಾದಂಡಗಳು

ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಬೇಕಾದ ಅರ್ಹತೆಗಳನ್ನ ನಾವು ಗಮನಿಸುವುದಾದ್ರೆ, ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಮೋಟಾರು ವಾಹನಗಳ ಚಾಲನಾ ಪರವಾನಗಿಯನ್ನ ಹೊಂದಿಬೇಕು.

ಮೋಟಾರ್ ಮೆಕ್ಯಾನಿಕ್ ಬಗ್ಗೆ ಒಂದಿಷ್ಟು ಜ್ಞಾನವನ್ನ ಹೊಂದಿರಬೇಕು.

ವಯಸ್ಸಿನ ಮಿತಿ: ಅಂಚೆ ಇಲಾಖೆ ಉದ್ಯೋಗಕ್ಕಾಗಿ 56 ವರ್ಷ ವಯಸ್ಸಿನ ಒಳಗಿರುವ ಹಾಗು 56 ವರ್ಷ ವಯಸ್ಸಿನವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.

ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 19,900 ರೂಗಳ ವೇತನವನ್ನ ನೀಡಲಾಗುತ್ತದೆ. ಅಲ್ಲದೆ ಈ ಹುದ್ದೆಯ ನೇಮಕಾತಿ ಎರಡು ವರ್ಷಗಳಿಗೆ ಒಮ್ಮೆ ಇರುತ್ತದೆ. ಇನ್ನು ಈ ಬಾರಿ ನೇಮಕಾತಿ ಆರಂಭವಾಗಿದ್ದು ಮತ್ತೆ ಮರುನೇಮಕಾತಿ ಎರಡು ವರ್ಷಗಳ ನಂತರ ಇರಲಿದೆ.

ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲಿರುವ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆ ಅಧಿಕೃತ ವೆಬ್‌ಸೈಟ್‌ indiapost.gov.inಗೆ ಭೇಟಿ ನೀಡಿ ಅಜಿ ನಮೂನೆಯನ್ನ ಡೌನ್‌ಲೋಡ್‌ ಮಾಡಬೇಕು. ಇನ್ನು ಈ ಸರ್ಜಿಯನ್ನ ಭರ್ತಿ ಮಾಡಿ ನಂತರ ಫೆಬ್ರವರಿ 8, 2025 ರೊಳಗೆ ಸರಿಯಾದ ವಿಳಾಸಕ್ಕೆ ಅರ್ಜಿಯನ್ನ ಪೋಸ್ಟ್‌ ಮಾಡಬೇಕು. ಇದ ಜೊತೆಗೆ ಅಗತ್ಯ ದಾಖಲೆಗಳನ್ನ ಲಗತ್ತಿಸಬೇಕಾಗುತ್ತದೆ. ಹಿರಿಯ ವ್ಯವಸ್ಥಾಪಕರು, ಮೇಲ್ ಮೋಟಾರ್ ಸೇವೆ, ನಂ. 37, ಗ್ರೀಮ್ಸ್ ರಸ್ತೆ, ಚೆನ್ನೈ - 600006 ವಿಳಾಸಕ್ಕೆ ನಿಮ್ಮ ಮಾಹಿತಿಯನ್ನ ಪೋಸ್ಟ್‌ ಮಾಡಬೇಕು.

ನೀವು ಅರ್ಜಿಯನ್ನ ಕಳಹಿಸುವ ಮೊದಲು, ಅರ್ಜಿಯನ್ನ ಪರಿಶೀಲಿಸಬೇಕು. ನಿಮ್ಮ ಅರ್ಜಿಯಲ್ಲಿ ಯಾವುದೇ ದೋಷ ಇದ್ದಲ್ಲಿ ನಿಮ್ಮ ಅರ್ಜಿ ತಿರಸ್ಕಾರವಾಗಬಹುದು. ಇನ್ನು ಈ ಅರ್ಜಿಯನ್ನ ಕಳುಹಿಸುವ ಮೊದಲು ಅಗತ್ಯ ದಾಖಲೆಗಳನ್ನ ಲಗತ್ತಿಸಬೇಕು ಹಾಗೆ ಅಂತಿಮ ದಿನಾಂಕದೊಳಗೆ ಅರ್ಜಿಯನ್ನ ಇಲ್ಲಿರುವಂತಹ ಪೋಸ್ಟ್‌ ಮಾಡಬೇಕು.

ಪೋಸ್ಟ್‌ ಆಫೀಸ್‌ ಹುದ್ದೆಗಳ ಬಗ್ಗೆ ಇಲ್ಲಿ ತಿಳಿಯಿರಿ

ಭಾರತದಲ್ಲಿ ಪೋಸ್ಟ್ ಆಫೀಸ್ ಉದ್ಯೋಗಗಳು ದೇಶದ ಪೋಸ್ಟಲ್ ಮತ್ತು ಲಾಜಿಸ್ಟಿಕ್ಸ್ ವಲಯದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ವ್ಯಾಪಕವಾದ ವೃತ್ತಿ ಅವಕಾಶಗಳನ್ನು ನೀಡುತ್ತವೆ. ಈ ಉದ್ಯೋಗಗಳು ಪೋಸ್ಟಲ್ ಅಸಿಸ್ಟೆಂಟ್‌ಗಳು, ವಿಂಗಡಣೆ ಸಹಾಯಕರು, ಮೇಲ್ ಗಾರ್ಡ್‌ಗಳು, ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS), ಮತ್ತು ಪೋಸ್ಟಲ್ ಸರ್ವಿಸ್ ಗ್ರೂಪ್ ಬಿ ಅಧಿಕಾರಿಗಳಂತಹ ಉನ್ನತ ಹುದ್ದೆಗಳನ್ನು ಒಳಗೊಂಡಿವೆ. ಪ್ರಾಥಮಿಕ ಜವಾಬ್ದಾರಿಗಳಲ್ಲಿ ಸಾಮಾನ್ಯವಾಗಿ ಮೇಲ್ ಮತ್ತು ಪಾರ್ಸೆಲ್‌ಗಳನ್ನು ನಿರ್ವಹಿಸುವುದು, ದಾಖಲೆಗಳನ್ನು ನಿರ್ವಹಿಸುವುದು, ಅಂಚೆ ಸೇವೆಗಳೊಂದಿಗೆ ಗ್ರಾಹಕರಿಗೆ ಸಹಾಯ ಮಾಡುವುದು ಮತ್ತು ಅಂಚೆ ಕಚೇರಿ ಶಾಖೆಗಳಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದು ಒಳಗೊಂಡಿರುತ್ತದೆ.

ಪೋಸ್ಟ್ ಆಫೀಸ್ ಉದ್ಯೋಗಗಳು ಸರ್ಕಾರಿ ಉದ್ಯೋಗದ ಅಡಿಯಲ್ಲಿ ಬರುವುದರಿಂದ, ಉದ್ಯೋಗ ಭದ್ರತೆ, ಪಿಂಚಣಿ ಪ್ರಯೋಜನಗಳು ಮತ್ತು ಸ್ಥಿರವಾದ ಕೆಲಸದ ವಾತಾವರಣವನ್ನು ನೀಡುವುದಕ್ಕಾಗಿ ಉತ್ತಮವಾಗಿ ಪರಿಗಣಿಸಲಾಗಿದೆ. ಈ ಹುದ್ದೆಗಳನ್ನು ಸಾಮಾನ್ಯವಾಗಿ ಅಧಿಕೃತ ನೇಮಕಾತಿ ಅಧಿಸೂಚನೆಗಳ ಮೂಲಕ ಜಾಹೀರಾತು ಮಾಡಲಾಗುತ್ತದೆ, ಇದು ಶೈಕ್ಷಣಿಕ ಅರ್ಹತೆಗಳು ಮತ್ತು ವಯಸ್ಸಿನ ಮಿತಿಗಳಂತಹ ಅರ್ಹತಾ ಮಾನದಂಡಗಳನ್ನು ಒಳಗೊಂಡಿರುತ್ತದೆ.

ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಂದರ್ಶನಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುವುದರಿಂದ ಬಡ್ತಿಗಳು ಮತ್ತು ಉದ್ಯೋಗಿಗಳು ವೈದ್ಯಕೀಯ ಭತ್ಯೆಗಳು, ರಜೆ ಅರ್ಹತೆಗಳು ಮತ್ತು ಇತರ ಸರ್ಕಾರಿ ಸವಲತ್ತುಗಳಂತಹ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+