ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿ ಹೊಡಿಕೆ ಮಾಡುವುದು ಪ್ರತಿಯೊಬ್ಬರ ಆಸೆ. ಅನೇಕ ಜನರು ಷೇರು ಮಾರುಕಟ್ಟೆಯಿಂದ ದೂರ ಉಳಿಯಲು ಅದರಲ್ಲಿರುವ ಅಪಾಯಕಾರಿ ಅಂಶ ಕಾರಣವಾಗಿದೆ.ಷೇರು ಮಾರುಕಟ್ಟೆಯಂತಹ ಅಪಾಯಕಾರಿ ಆಯ್ಕೆಗಳಿಂದ ದೂರವಿರಲು ಬಯಸುವವರಿಗೆ, ಪೋಸ್ಟ್ ಆಫೀಸ್ ಸುರಕ್ಷಿತ ಹೂಡಿಕೆ ಯೋಜನೆಗಳನ್ನು ನೀಡುತ್ತದೆ.ಕೇಂದ್ರ ಸರ್ಕಾರದಿಂದ ಬೆಂಬಲಿತವಾದ ಪೋಸ್ಟ್ ಆಫೀಸ್ ಹೂಡಿಕೆದಾರರಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿದೆ ಯೋಜನೆಯಾಗಿದೆ. ನೀವು ಈ ಯೋಜನೆಯಲ್ಲಿ ನಿಮ್ಮ ಹೆಂಡತಿ ಜೊತೆ ಹೂಡಿಕೆ ಮಾಡಿದ್ದರೆ ನಿಮ್ಮ ಹಣ ಡಬಲ್ ಆಗುತ್ತದೆ.
ಹೌದು, ನಿಮ್ಮ ಬಳಿ ಸಾಕಷ್ಟು ಹಣ ಇದ್ದರೂ, ನಿಯಮಿತ ಆದಾಯಕ್ಕೆ ಬೇರೆ ವ್ಯವಸ್ಥೆ ಇಲ್ಲದಿದ್ದರೆ, ಪೋಸ್ಟ್ ಆಫೀಸಿನ ಒಂದು ಯೋಜನೆ ನಿಮಗೆ ತುಂಬಾ ಉಪಯೋಗವಾಗುತ್ತದೆ ಎಂದೇ ಹೇಳಬಹುದು.ಯಾಕೆಂದರೆ ನೀವು ಈ ಯೋಜನೆಯ ಮೂಲಕ ನೀವು ಪ್ರತಿ ತಿಂಗಳು ಆದಾಯ ಗಳಿಸಬಹುದು.ಅದರಲ್ಲೂ ನೀವು ಈ ಹಣದ ಉಳಿತಾಯ ಯೋಜನೆಯನ್ನು ನಿಮ್ಮ ಹೆಂಡತಿ ಜೊತೆ ಸೇರಿ ಹೂಡಿಕೆ ಮಾಡಿದರೆ ಈ ಯೋಜನೆಯ ಮೂಲಕವೇ ಪ್ರತಿ ವರ್ಷ 1,11,000 ರೂ ಹಣವನ್ನು ಉಳಿತಾಯ ಮಾಡಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಪ್ರತಿ ತಿಂಗಳು ಆದಾಯ ಹಣಗಳಿಸಲು ಸಹಾಯ ಮಾಡುತ್ತದೆ. ಈ ಯೋಜನೆಯಲ್ಲಿ, ಒಂದು ಒಟ್ಟು ಮೊತ್ತವನ್ನು 5 ವರ್ಷಗಳವರೆಗೆ ಠೇವಣಿ ಇಡಲಾತ್ತದೆ.ಅದರ ಮೇಲೆ ಬಡ್ಡಿ ನಿಮಗೆ ದೂರುಕುತ್ತದೆ.ಮಾಸಿಕ ಆದಾಯ ಯೋಜನೆಲ್ಲಿ ನೀವು ಏಕ ಮತ್ತು ಜಂಟಿ ಖಾತೆಗಳನ್ನು ತೆರೆಯುವ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿ ನಿಮ್ಮ ಹೆಂಡತಿಯ ಸಹಾಯದಿಂದ 5 ವರ್ಷಗಳಲ್ಲಿ ಮನೆಯಲ್ಲಿ ಕುಳಿತು 5,55,000ರೂ ಹಣಗಳಿಸಬಹುದು.
ಪೋಸ್ಟ್ ಆಫೀಸ್ MIS ಎಷ್ಟು ಹಣ ಗಳಿಸಹುದು?
ನೀವು ಪೋಸ್ಟ್ ಆಫೀಸ್ MIS ನಲ್ಲಿ, ಒಂದು ಖಾತೆಯಲ್ಲಿ 9 ಲಕ್ಷ ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ಠೇವಣಿ ಇಡಬಹುದು.ಈ ಯೋಜನೆಯು ಶೇ.7.4 ಬಡ್ಡಿ ದರವನ್ನು ನೀಡುತ್ತದೆ. ಹೀಗಾಗಿ, ನಿಮ್ಮ ಹೆಂಡತಿಯೊಂದಿಗೆ ಖಾತೆ ತೆರೆದು 15,00,000 ಠೇವಣಿ ಇಟ್ಟರೆ, ವರ್ಷಕ್ಕೆ 1,11,000 ಮತ್ತು 5 ವರ್ಷಗಳಲ್ಲಿ 5,55,000 ಹಣ ಗಳಿಸಬಹುದು.
ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಲ್ಲಿ ಶೇ.7.4 ಬಡ್ಡಿ ನೀಡಲಾಗುತ್ತಿದೆ. ಅದರಲ್ಲಿ ನಿಮ್ಮ ಹೆಂಡತಿಯೊಂದಿಗೆ ಸೇರಿ 15 ಲಕ್ಷ ಠೇವಣಿ ಇಟ್ಟರೆ, ಶೇ.7.4ಬಡ್ಡಿ ದರದಲ್ಲಿ ಪ್ರತಿ ತಿಂಗಳು 9,250 ಗಳಿಸಬಹುದು. 9,250 x 12 = 1,11,000 ಖಾತ್ರಿಯ ಆದಾಯ. 1,11,000 x 5 = 5,55,000 ಈ ರೀತಿ, ನೀವಿಬ್ಬರೂ 5 ವರ್ಷಗಳಲ್ಲಿ 5,55,000 ಬಡ್ಡಿಯಲ್ಲಿ ಹಣವನ್ನು ಗಳಿಸಬಹುದು.
ಮಾಸಿಕ ಉಳಿತಾಯ ಯೋಜನೆ
ಉಳಿತಾಯ ಯೋಜನೆಯಲ್ಲಿ ಖಾತೆಯನ್ನು ಒಂದೇ ಖಾತೆಯಾಗಿ ಪ್ರಾರಂಭಿಸಿದರೆ 9 ಲಕ್ಷದವರೆಗೆ ಠೇವಣಿ ಇಡಬಹುದು. ಈ ಸಂದರ್ಭದಲ್ಲಿ, ನೀವು ಪ್ರತಿ ತಿಂಗಳು 5,550 ಬಡ್ಡಿಯಿಂದ ಗಳಿಸುವಿರಿ.ಹೀಗೆ ಒಂದು ವರ್ಷದಲ್ಲಿ 5,550 x 12 = 66,600 ಬಡ್ಡಿಯಾಗಿ ಪಡೆಯಬಹುದು. 66,600 x 5 = 3,33,000, ಈ ರೀತಿ, ನೀವು ಒಂದು ಖಾತೆಯ ಮೂಲಕ 5 ವರ್ಷಗಳಲ್ಲಿ ಬಡ್ಡಿಯ ಮೂಲಕ ಒಟ್ಟು 3,33,000 ಲಕ್ಷದ ಮೂಲಕ ಹಣವನ್ನು ಗಳಿಸಬಹುದು.
ಪೋಸ್ಟ್ ಆಫೀಸ್ MIS ನಿಂದ ಸಿಗುವ ಪ್ರಯೋಜನಗಳು?
ನಿಮ್ಮ ಖಾತೆಯಲ್ಲಿ ಇರಿಸಲಾಗಿರುವ ಠೇವಣಿ ಮೊತ್ತಕ್ಕೆ ಸಿಗುವ ಬಡ್ಡಿಯನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಪ್ರತಿ ತಿಂಗಳು ಪಾವತಿಸಲಾಗುತ್ತದೆ. ಈ ಮಧ್ಯೆ, ಠೇವಣಿ ಇಟ್ಟ ಮೊತ್ತ ಸಂಪೂರ್ಣವಾಗಿ ಸುರಕ್ಷಿತವಾಗಿದೆ. 5 ವರ್ಷಗಳ ನಂತರ,ನೀವು ಠೇವಣಿ ಇಟ್ಟ ಮೊತ್ತವನ್ನು ಹಿಂಪಡೆಯಬಹುದು. ಈ ಯೋಜನೆಯನ್ನು ಮತ್ತಷ್ಟು ಬಳಸಿಕೊಳ್ಳಲು ಬಯಸಿದರೆ, ಮೆಚ್ಯೂರಿಟಿ ನಂತರ ಹೊಸ ಖಾತೆಯನ್ನು ನೀವು ತೆರೆಯಬಹುದು.
ಪೋಸ್ಟ್ ಆಫೀಸ್ MIS ನಿಯಮಗಳು ಯಾವುವು?
ಹಿರಿಯ ನಾಗರಿಕರು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. ಅಥವಾ ಮಗುವಿನ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದರೆ, ಅವರ ಪೋಷಕರು ಅಥವಾ ಕಾನೂನುಬದ್ಧ ಪಾಲಕರು ಅವರ ಹೆಸರಿನಲ್ಲಿ ಖಾತೆ ಓಪನ್ ಮಾಡಬಹುದು.
ಮಗುವಿಗೆ 10 ವರ್ಷ ತುಂಬಿದಾಗ, ಅವರು ಖಾತೆಯನ್ನು ನಿರ್ವಹಿಸುವ ಹಕ್ಕನ್ನು ಸಹ ಪಡೆಯಬಹುದು. MIS ಖಾತೆಗೆ, ನೀವು ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.


Click it and Unblock the Notifications