ಭಾರತದಾದ್ಯಂತ ಅಂಚೆ ಕಚೇರಿಗಳಲ್ಲಿ ಡಿಜಿಟಲ್ ಪಾವತಿಯನ್ನು ಸ್ವೀಕರಿಸುವುದನ್ನು ಆಗಸ್ಟ್ ತಿಂಗಳಿಂದ ಆರಂಭಿಸಲಿದೆ. ಇನ್ನುಂದೆ ನೀವು ಹಣದ ವಹಿವಾಟುಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಮಾಡಬಹುದು.
ಹೌದು,ಎಲ್ಲಾ ಅಂಚೆ ಕಚೇರಿಗಳ ಕೌಂಟರ್‌ಗಳಲ್ಲಿ ನೀವು ಆಗಸ್ಟ್ 2025 ರಿಂದ ಡಿಜಿಟಲ್ ಪಾವತಿಗಳನ್ನು ಮಾಡಬಹುದು. ಅಂಚೆ ಕಚೇರಿ ಐಟಿ 2.0 ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ನವೀಕರಿಸಿದ ನಂತರ, ಯುಪಿಐಗೆ ಲಿಂಕ್ ಮಾಡುವ ಡೈನಾಮಿಕ್ ಕ್ಯೂಆರ್ ಕೋಡಿಂಗ್ ಮೂಲಕ ಡಿಜಿಟಲ್ ಪಾವತಿಗಳನ್ನು ಒದಗಿಸಲು ಇದು ಸಾಧ್ಯವಾಗುತ್ತದೆ.

ನಗದು ಬದಲು ಡಿಜಿಟಲ್ ಪಾವತಿ
ನೀವು ಅಂಚೆ ಕಚೇರಿಯಲ್ಲಿ ಯಾವುದೇ ಯೋಜನೆಗಳಿಗೆ ಹಣವನ್ನು ಕಟ್ಟುಲು ಅಥವಾ ಎಫ್‌ಡಿಗಳಲ್ಲಿ ಹೂಡಿಕೆ ಮಾಡಲು ಉಳಿತಾಯ ಖಾತ ಹಣ ಹಾಕಲು ನಗದಉ ಅವಶ್ಯಕತೆ ಇಲ್ಲ ಇನ್ನುಂದೆ ನೀವು ಯುಪಿಐ ಮೂಲಕವು ಸಹ ಅಂಚೆ ಕಚೇರಿಗೆ ಹಣವನ್ನು ಕಟ್ಟಬಹುದು. ನಗದು ಬದಲು ಡಿಜಿಟಲ್ ಪಾವತಿ ಮಾಡಲು ಬಯಸುವ ಗ್ರಾಹಕರಿಗೆ ಇದು ಹೆಚ್ಚಿನ ಅನುಕೂಲವಾಗುತ್ತದೆ.
ಪ್ರಸ್ತುತ ಭಾರತದಲ್ಲಿ ಇಲ್ಲಿಯವರೆಗೂ ಅಂಚೆ ಕಚೇರಿಗಳು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಏಕೆಂದರೆ ವ್ಯವಸ್ಥೆಗಳು UPI (ಏಕೀಕೃತ ಪಾವತಿ ಇಂಟರ್ಫೇಸ್) ನೊಂದಿಗೆ ಜೋಡಣೆಯನ್ನು ಮಾಡದ ಕಾರಣ ಡಿಜಿಟಲ್ ಪಾವತಿಯನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅದು ಈಗ ಬದಲಾಗುತ್ತಿದೆ. ಈಟಿ 2.0 ಹೊಸ ಅಪ್ಲಿಕೇಶನ್ ಅಳವಡಿಸಿಕೊಂಡ ಬಳಿಕ ಕೌಂಟರ್‌ಗಳಲ್ಲಿ ಕ್ಯೂಆರ್ ಕೋಡ್ ಬಳಸಿ ವಾಹಿವಾಟು ಮಾಡಲಿ ಸಾಧ್ಯವಾಗುತ್ತದೆ. ಈ ಸೇವೆಗಳು ಡಿಜಿಟಲ್ ಆಗಿ ಪಾವತಿಸಲು ಬಯಸುವ ಗ್ರಾಹಕರಿಗೆ ಸುಲಭ ಮತ್ತು ಸುರಕ್ಷಿತವಾದ ಆಯ್ಕೆಯಾಗಿದೆ. ಜನರು ಅತಿ ಹೆಚ್ಚಾಗಿ ಡಿಜಿಟಲ್ ಪಾವತಿಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ.
ಈ ಯೋಜನೆಯ ಪ್ರಾಯೋಗಿಕ ಕಾರ್ಯ ಕರ್ನಾಟಕದಲ್ಲಿ ಹೊಸ ವ್ಯವಸ್ಥೆಯ ಅನುಷ್ಠಾನ ಈಗಾಗಲೇ ನಡೆದಿದೆ ಮೈಸೂರು, ಬಾಗಲಕೋಟೆಯ ಎಲ್ಲಾ ಪ್ರಧಾನ ಕಚೇರಿಗಳು ಮತ್ತು ಹಲವಾರು ಸಣ್ಣ ಕಚೇರಿಗಳು ಕ್ಯೂ ಆರ್ ಆಧಾರಿತ ಮೇಲ್ ಉತ್ಪನ್ನಗಳ ಬುಕಿಂಗ್ ಅನ್ನು ಯಶಸ್ವಿಯಾಗಿ ಜಾರಿಯಾಗಿವೆ.
ಡಿಜಿಟಲ್ ಪಾವತಿಗಳನ್ನು ಮಾಡುವ ಸಾಮರ್ಥ್ಯವಿರುವ ಹೊಸ ಪಾವತಿ ವ್ಯವಸ್ಥೆಯು ಮುಂಬರುವ ವರ್ಷಗಳಲ್ಲಿ ಎಲ್ಲಾ ಅಂಚೆ ಕಚೇರಿಗಳಲ್ಲಿ ಜಾರಿಯಲ್ಲಿರುತ್ತದೆ ಮತ್ತು ಆಗಸ್ಟ್ 2025 ರ ವೇಳೆಗೆ ಸಿದ್ಧವಾಗುವಂತಹ ನಿರೀಕ್ಷೆ ಕೂಡ ಇದೆ ಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.
ಡಿಜಿಟಲ್ ಪಾವತಿಗಳನ್ನು ಸುಗಮಗೊಳಿಸಲು ಈ ಹಿಂದೆ ಅಂಚೆ ಇಲಾಖೆಯು ಕೌಂಟರ್‌ಗಳಲ್ಲಿ ಸ್ಟ್ಯಾಟಿಕ್ ಕ್ಯೂಆರ್ ಕೋಡ್‌ಗಳನ್ನು ಜಾರಿಗೆ ತಂದಿತ್ತು. ಈ ಉಪಕ್ರಮವು ತಾಂತ್ರಿಕ ದೋಷಗಳು ಮತ್ತು ಗ್ರಾಹಕರಿಂದ ಹೆಚ್ಚಿನ
ಸಂಖ್ಯೆಯ ದೂರಗಳನ್ನು ಎದುರಿಸಬೇಕಾಗಿತ್ತು. ಆದರಿಂದ ಇದನ್ನು ನಿಲ್ಲಿಸಲಾಗಿತ್ತು. ಅಂಚೆ ಕಚೇರಿ ಇಲಾಖೆಯು ಈಗ ಅನುಭವದಿಂದ ಪಾಠಗಳನ್ನು ಕಲಿತು ಡೈನಾಮಿಕ್ ಕ್ಯೂಆರ್ ಕೋಡ್‌ಗಳನ್ನು ಜಾರಿಗೆ ತರಲು ನಿರ್ಧರವನ್ನು ಮಾಡಿದೆ. ಡೈನಾಮಿಕ್ ಕ್ಯೂಆರ್ ಕೋಡ್‌ಗಳನ್ನು ಪ್ರತಿ ವಹಿವಾಟಿಗೆ ನೈಜ ಸಮಯ ಮತ್ತು ಗ್ರಾಹಕರು ಸ್ಟ್ಯಾಟಿಕ್ ಕೋಡ್‌ಗಳಿಗಿಂತ ಸುರಕ್ಷಿತವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿ ಪಾವತಿಗಳನ್ನು ಮಾಡಲು ಅವಕಾಶವನ್ನು ಮಾಡಿಕೊಡಲಾಗುತ್ತದೆ.
ಅಂಚೆ ಕಚೇರಿಗಳಲ್ಲಿ ಡಿಜಿಟಲ್ ಪಾವತಿಗಳನ್ನು ಬಳಕೆ ಮಾಡಿಕೊಳ್ಳವುದರಿಂದ ಪ್ರತಿದಿನ ಅಂಚೆ ಕಚೇರಿಗಳಿಗೆ ಭೇಟಿ ನೀಡುವ ಲಕ್ಷಾಂತರ ಜನರಿಗೆ ಮತ್ತು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ಗ್ರಾಹಕರಿಗೆ, ಅಂಚೆ, ಪಾರ್ಸೆಲ್‌ಗಳು, ಮತ್ತು ಕೋರಿಯರ್,ಉಳಿತಾಯ ಯೋಜನೆಗಳಿಗೆ ಠೇವಣಿಗಳಂತಹ ಸೇವೆಗಳಿಗೆ ಡಿಜಿಟಲ್ ಪಾವತಿಗಳನ್ನು ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ. ಭಾರತ ದೇಶ ಡಿಜಿಟಲ್ ಯುಗವಾಗಿ ವೇಗವಾಗಿ ಬೆಳೆಯುತ್ತಲೇ ಇದೆ. ಅಂಚೆ ಕಚೇರಿಗಳು ಡಿಜಿಟಲ್ ಪಾವತಿ ಹೊಸ ಕ್ರಾಂತಿಯನ್ನು ಸೃಷ್ಟಿ ಮಾಡಬಹುದು.


Click it and Unblock the Notifications