ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಕಳೆದ ಕೆಲವು ದಿನಗಳಲ್ಲಿ ನಗರದ ಹಲವು ಕಡೆಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಲೇ ಇದೆ. ಅಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಇಲಾಖೆ ತನ್ನ ಲೈನ್‌ಗಳನ್ನು ಸರಿಪಡಿಸುವ ಕೆಲಸದಲ್ಲಿ ತೊಡಗಿಕೊಂಡಿದೆ. ಈ ಹಿನ್ನೆಲೆ ರಾಜ್ಯದ ಹಲವು ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ನಿರಂತರ ವಿದ್ಯುತ್ ವ್ಯತ್ಯಯಗಳಾಗುತ್ತಲೇ ಇದೆ. ಬೆಂಗಳೂರಿನ (Bengaluru) ಕೆಲವು ಪ್ರದೇಶದಲ್ಲಿ ಅಕ್ಟೋಬರ್ 12 ರಂದೂ ವಿದ್ಯುತ್ ವ್ಯತಯ (Power Cut) ಆಗಿದ್ದು, ಇಂದೂ (ಅ.13) ಕೂಡ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಸೂಚನೆ ನೀಡಿದೆ.

ಇಲ್ಲೆಲ್ಲಾ ನೋ ಕರೆಂಟ್!
ತಿಪಟೂರು ತಾಲೂಕಿನ ಕೆರೆಗೋಡಿ ಉಪಸ್ಥಾವರದ ನಾಗರಘಟ್ಟ ಮತ್ತು ನಾರಸಿಕಟ್ಟೆ ಪ್ರದೇಶಗಳಲ್ಲಿ ಲಿಂಕ್ ಲೈನ್ ಕಾಮಗಾರಿಯನ್ನು ಬೆಸ್ಕಾಂ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 13 ಮತ್ತು 14ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರಗೆ ಈ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಪೋಸ್ಟ್ ಮಾಡಿದೆ. ಅಲ್ಲದೇ ಸದರಿ ಪೂರಕಗಳ ವ್ಯಾಪ್ತಿಗೆ ಒಳಪಡುವ ಹೆಡಗರಹಳ್ಳಿ, ಬೆಳಗರಹಳ್ಳಿ, ಕನ್ನುಘಟ್ಟ, ನಾಗರಘಟ್ಟ, ಎನ್.ಮೇಲನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕೆಂದು ಬೆಸ್ಕಾಂ ಮನವಿ ಮಾಡಿದೆ.
ಅಕ್ಟೋಬರ್ 31 ರವರೆಗೆ ಬೆಂಗಳೂರಿನಲ್ಲಿ ಪವರ್ ಕಟ್!
ಇನ್ನು ಬೆಸ್ಕಾಂ ತನ್ನ ಸಬ್‌ಡಿವಿಶನ್ ಪ್ರದೇಶದಲ್ಲಿ ಫೀಡರ್ ನಿರ್ವಹಣಾ ಕಾರ್ಯವನ್ನು ನಡೆಸುತ್ತಿದೆ. ಇದೇ ಕಾರಣದಿಂದ ನಗರದ ಹಲವು ಕಡೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ನಿರಂತರವಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 13, 15, 17, 19, 21, 23, 25, 27, 29 ಮತ್ತು 31 ರಂದು ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ:
ಹನುಮಂತಪುರ, ಜಗನ್ನಾಥಪುರ, ನಿರ್ವಾಣಿ ಲೇಔಟ್, ಅಗ್ನಿಬನ್ನಿರಾಯ ನಗರ, ಬಿ.ಎ.ಗುಡಿಪಾಳ್ಯ, ಅಂಬೇಡ್ಕರ್ ನಗರ ಮುಂತಾದ ಪ್ರದೇಶಗಳಲ್ಲಿ ಪವರ್ ಕಟ್ ಆಗುವ ಸಾಧ್ಯತೆ ಇದೆ ಎಂದು ಸೂಚನೆ ನೀಡಲಾಗಿದೆ.
ಹಾಗೆಯೇ ಅಕ್ಟೋಬರ್ 12, 14, 16, 18, 24, 26, 28, ಮತ್ತು 30 ರಂದು ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳ ಪಟ್ಟಿಯನ್ನು ನೀಡಲಾಗಿದ್ದು, ಈ ದಿನಾಂಕಗಳಂದು ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿಗೇಟ್, ಕುಂಟಮ್ಮಂತೋಟ, ದಿಬ್ಬೂರು, ಬಿಎಚ್ ಪಾಳ್ಯ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿ ರಸ್ತೆ, ಪಿಎನ್‌ಆರ್ ಪಾಳ್ಯ, ಕುಪ್ಪೂರು, ಹೊಸಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಲಾಗಿದೆ.
ಜನರಿಗೆ ಸಲಹೆ:
ಇನ್ನು ಬೆಂಗಳೂರಿನಲ್ಲಿ ನಿರಂತರವಾಗಿ ವಿದ್ಯುತ್ ವ್ಯತ್ಯಯಗಳು ಆಗುತ್ತಲೇ ಇರುವುದರಿಂದ ಜನರಿಗೂ ಬೆಸ್ಕಾಂ ಇಲಾಖೆ ಸಲಹೆ ನೀಡಿದೆ. ಬೆಳಗ್ಗೆಯಿಂದ ದಿನವಿಡೀ ಕರೆಂಟ್ ಸಮಸ್ಯೆ ಇರುವುದರಿಂದ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಹೀಗೆ ಅಗತ್ಯ ಸಾಧನಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳುವುದು ಸೂಕ್ತ.


Click it and Unblock the Notifications