ಬೆಂಗಳೂರು, ಜನವರಿ 26: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಹಲವಾರು ಕಾಮಗಾರಿಯನ್ನು ಕೈಗೊಂಡಿರುವುದರಿಂದ ಬೆಂಗಳೂರಿನಲ್ಲಿ ಜನವರಿ 27, 28 ರಂದು ಅಂದರೆ ಶನಿವಾರ ಹಾಗೂ ಭಾನುವಾರ ವಿದ್ಯುತ್ ಕಡಿತವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ನಿಯತಕಾಲಿಕ ಯೋಜನೆಗಳಲ್ಲಿ ನವೀಕರಣ, ಆಧುನೀಕರಣ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಭೂಗತಕ್ಕೆ ಕೇಬಲ್‌ಗಳನ್ನು ಬದಲಾಯಿಸುವುದು, ಕಂಬಗಳ ಸ್ಥಳಾಂತರ, ರಿಂಗ್ ಮುಖ್ಯ ಘಟಕ (RMU) ನಿರ್ವಹಣೆ, ಮರದ ಟ್ರಿಮ್ಮಿಂಗ್, ಜಲಸಿರಿ 24 x 7 ನೀರು ಸರಬರಾಜು ಕೆಲಸ ಮತ್ತು ಭೂಗತ ಕೇಬಲ್ ಹಾನಿ ಸರಿಪಡಿಸುವಿಕೆ ಸೇರಿದಂತೆ ಹಲವು ಇತರ ಕೆಲಸಗಳು ಸೇರಿವೆ.

ವಿದ್ಯುತ್ ಕಡಿತವು ಹೆಚ್ಚಿನವು ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ವ್ಯತ್ಯವಾಗಲಿದೆ. ಆದಾಗ್ಯೂ,ಕೆಲವು ಕೆಲಸಗಳನ್ನು ಮೊದಲೇ ಪೂರ್ಣಗೊಳಿಸಬಹುದು. ವಿದ್ಯುತ್ ಕಡಿತದಿಂದ ತೊಂದರೆಗೊಳಗಾಗಬಹುದಾದ ಪ್ರದೇಶಗಳ ಪಟ್ಟಿ ಇಲ್ಲಿದೆ.
ಜನವರಿ 27, ಶನಿವಾರ:
ತಾಳಿಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರ್ಕಸಂದ್ರ, ಜಲಗುಣಿ, ಎಚ್ ಪಾಳ್ಯ, ನಿಂಬೆಕಾಟೆ, ಮಾದೇನಹಳ್ಳಿ, ಇಡಕನಹಳ್ಳಿ, ಸಿ ಹರಿವಸಂದ್ರ, ನಲ್ಲೂರು, ಕೊಡಿಯಾಲ, ಎಸ್ ಹಳ್ಳಿ, ಅಂಕಸಂದ್ರ ಪಂಚಾಯಿತಿ ವ್ಯಾಪ್ತಿ, ಗಂಗಯ್ಯನಪಾಳ್ಯ, ಕುಂಟಾರಾಮನಹಳ್ಳಿ, ರಣಲಹಳ್ಳಿ, ಸರಮನಹಳ್ಳಿ, ನಿರಂತರ ಜ್ಯೋತಿ, ಕಾಂತರಾಮನಹಳ್ಳಿ ಯರಬಳ್ಳಿ, ತೋವಿನಕೆರೆ, ಸರಿಗೇಹಳ್ಳಿ, ಬ್ಯಾಡರಹಳ್ಳಿ, ರಾಮಡಿಹಳ್ಳಿ, ಮಲ್ಲೇನಹಳ್ಳಿ, ಸಂಪಿಗೆ, ಅಂಗರೇಖನಹಳ್ಳಿ, ಹಳೇಸಂಪಿಗೆ, ರಾಘದೇವನಹಳ್ಳಿ, ಬಸವಪುರ, ಮಾಚೇನಹಳ್ಳಿ, ದೊಡ್ಡಹಟ್ಟಿ, ಬಿ.ಸಿ.ಕಾವಲ್, ಯಲ್ಲದಭಾಗಿ, ಕುರೇಹಳ್ಳಿ, ಮತ್ತಿಕೆರೆ, ಹಾಗಲಹಳ್ಳಿ ಮತ್ತು ಎಸ್.ಗುದ್ದರಮಣಹಳ್ಳಿ, ಹಾಗಲಹಳ್ಳಿ.
ಜನವರಿ 28, ಭಾನುವಾರ:
ದೊಡ್ಡಬಳ್ಳಾಪುರ ಕಿಯಾಡ್ಬಿ ಕೈಗಾರಿಕಾ ಪ್ರದೇಶ, ಅಪೆರಲ್ ಪಾರ್ಕ್ ಕೈಗಾರಿಕಾ ಪ್ರದೇಶ, ಹನುಮಂತನಗರ, ಯಡಮಡು, ದೇವನಹಳ್ಳಿ ಮತ್ತು ವಿಜಯಪುರ.


Click it and Unblock the Notifications