ಮೆಸ್ಕಾಂ ಇಲಾಖೆಗಳು (MESCOM) ತನ್ನ ಅಗತ್ಯ ಕೆಲಸಗಳಿದ್ದಾಗ ಪವರ್ ಕಟ್ ನಿರ್ಧಾರಕ್ಕೆ ಮುಂದಾಗುತ್ತದೆ. ಅಲ್ಲದೇ ಈ ಬಗ್ಗೆ ಮೊದಲೇ ಜನರಿಗೂ ಮಾಹಿತಿ ನೀಡುತ್ತದೆ. ಅದೇ ರೀತಿ ಇದೀಗ ಮಲೆನಾಡು ಭಾಗದಲ್ಲಿ ಮುಂದಿನ 2 ದಿನ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಮಾಹಿತಿ ನೀಡಿದೆ. ಮೆಸ್ಕಾಂ ಇಲಾಖೆಯ ಸ್ವಯಂ ಆರ್ಥಿಕ ಯೋಜನೆಯಡಿಯಲ್ಲಿ ನಗರಗಳಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕಮಗಳೂರು (Chikkamagaluru) ತಾಲೂಕು ಸೇರಿ, ನಗರದ ಹಲವು ಕಡೆಗಳಲ್ಲಿ ವಿದ್ಯುತ್ ಕಂಬ ಅಳವಡಿಸುವ ಹಿನ್ನೆಲೆ ಪವರ್ ಕಟ್ ಆಗುವ ಸಾಧ್ಯತೆ ಇರಲಿದೆ.

ವಿದ್ಯುತ್ ಕಂಬ ಅಳವಡಿಸುವ ಪರಿಣಾಮ ಚಿಕ್ಕಮಗಳೂರು ತಾಲೂಕು ಮತ್ತು ಹಲವು ಗ್ರಾಮಗಳಲ್ಲಿ ನವೆಂಬರ್ ಆರಂಭದ ದಿನಗಳಲ್ಲಿ ಕರೆಂಟ್ ಇರುವುದಿಲ್ಲ ಎಂದು ಮೆಸ್ಕಾಂ ಇಲಾಖೆ ಸೂಚನೆ ನೀಡಿದೆ. ಹಾಗಿದ್ರೆ ಎಲ್ಲೆಲ್ಲಾ, ಯಾವ ದಿನಾಂಕಗಳಲ್ಲಿ ಕರೆಂಟ್ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಇಲ್ಲೆಲ್ಲಾ ನೋ ಕರೆಂಟ್!
ಚಿಕ್ಕಮಗಳೂರು ತಾಲೂಕಿನಲ್ಲಿ ವಿದ್ಯುತ್ ಕಂಬ ಅಳವಡಿಸುವ ಹಿನ್ನೆಲೆ ವಿದ್ಯುತ್ ಸಪ್ಲೈನಲ್ಲಿ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ. ನಗರ ಉಪ ವಿಭಾಗದ ಘಟಕ-3 ರ ವ್ಯಾಪ್ತಿಯಲ್ಲಿ ಬರುವ 66\11 ಕೆ.ವಿ.ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಫ್-14 ತ್ರಿವಿಕ್, ಪೀಠಾ ಪೀಡರ್, ಕೆಂಪನಹಳ್ಳಿ, ಹಿರೇಕೊಳಲೆ ಪ್ರದೇಶಗಳಲ್ಲಿ ನವೆಂಬರ್ 3 ಮತ್ತು ನವೆಂಬರ್ 4 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯವಸ್ಥೆಯಲ್ಲಿ ಅಡಚಣೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ. ಸ್ವಯಂ ಆರ್ಥಿಕ ಯೋಜನೆಯ ಅಡಿಯಲ್ಲಿ ಚಿಕ್ಕಮಗಳೂರು ತಾಲೂಕಿನ ಹಾಲೇನಹಳ್ಳಿ ಗ್ರಾಮದಿಂದ ಅಲ್ಲಂಪುರ ರಸ್ತೆಯಲ್ಲಿ ವಿದ್ಯುತ್ ಕಂಬ ಸ್ಥಳಾಂತರಿಸುವ ಕಾಮಗಾರಿ ನಡೆಯುವ ಹಿನ್ನೆಲೆ ಈ ವಿದ್ಯುತ್ ವ್ಯತ್ಯಯವಾಗುವುದಾಗಿ ಹೇಳಲಾಗಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರ ಕೋರಿಕೆ ಮೇರೆಗೆ ಈ ಕಾಮಗಾರಿ ನಡೆಯುವ ಪರಿಣಾಮ ಮೇಲಿನ ಫೀಡರ್‌ನಲ್ಲಿ ಪವರ್ ಕಟ್ ಆಗುವುದಾಗಿ ಹೇಳಲಾಗಿದೆ. ಆದ್ದರಿಂದ ಈ ಫೀಡರ್ ಪ್ರದೇಶಗಳಾದ ಚಂದ್ರನಗರ, ಕೆಂಪನಹಳ್ಳಿ, ರತ್ನಗಿರಿ ಬಡಾವಣೆ, ಕರ್ಕಿಪೇಟೆ, ಬಾಳೇಹಳ್ಳಿ, ರಾಮನಹಳ್ಳಿ, ಅಲ್ಲಂಪುರ, ಹಾಲೇನಹಳ್ಳಿ, ಹೀರೇಕೊಳಲೆ, ತ್ರಿವಿಕ್, ಪೀಠಾ ಫೀಡರ್‌ನ ಸುತ್ತ ಮುತ್ತಲಿನ ಪ್ರದೇಶಗಲ್ಲಿ ವಿದ್ಯುತ್ ಕಟ್ ಮಾಡಲಾಗುತ್ತದೆ ಎನ್ನಲಾಗಿದೆ. ಆದ್ದರಿಂದ ಸಾರ್ವಜನಿಕರು ಈ ಕಾಮಗಾರಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಸಾಮಾನ್ಯವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ದಿನಕ್ಕೊಮ್ಮೆಯಾದರೂ ಪವರ್ ಕಟ್ ಮಾಡುತ್ತಾರೆ. ಏನಾದರೊಂದು ಕೆಲಸ ಇರುವ ಕಾರಣ ಮೊದಲೇ ಬೆಸ್ಕಾಂ ಇಲಾಖೆಗಳು ವಿದ್ಯುತ್ ವ್ಯತ್ಯಯದ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡುತ್ತದೆ. ಇನ್ನು ಚಿಕ್ಕಮಗಳೂರಿನಲ್ಲೂ ನವೆಂಬರ್ ಆರಂಭದಲ್ಲಿ ಎರಡು ದಿನ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ ಎಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಸಾರ್ವಜನಿಕರು ಮೊದಲೇ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬಹುದು. ಅಗತ್ಯ ಕೆಲಸಗಳಿದ್ದರೆ ಮೊದಲೇ ಮಾಡಿ ಮುಗಿಸಿಕೊಳ್ಳಬಹುದು.


Click it and Unblock the Notifications