ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಇತ್ತೀಚೆಗೆ ವಿದ್ಯುತ್ ವ್ಯತ್ಯಯವಾಗುತ್ತಲೇ (Power Cut) ಇದೆ. ವಿದ್ಯುತ್ ಲೈನ್ ಸೇವೆಯನ್ನ ಗುಣಮಟ್ಟಗೊಳಿಸುವ ಉದ್ದೇಶದಿಂದ ಇದೀಗ ಬೆಸ್ಕಾಂ (BESCOM) ಇಲಾಖೆ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿದೆ. ಇದೀಗ ಇಂದೂ (ಜ.22) ಕೂಡಾ ರಾಜ್ಯದ ವಿವಿಧೆಡೆ ವಿದ್ಯುತ್ ವ್ಯತ್ಯ ಯವಾಗಲಿದೆ. ಆ ಪ್ರಕಾರ, 220/66 ಕೆ.ವಿ. ಹೊನ್ನಾಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸ ಹಿನ್ನೆಲೆ ತಾಲೂಕಿನ ವಿವಿಧೆಡೆ ಪವರ್ ಕಟ್ (Power Cut) ಆಗಲಿದೆ.

ಎಲ್ಲೆಲ್ಲಾ ಇರಲ್ಲ ಕರೆಂಟ್?
220/66 ಕೆ.ವಿ. ಹರಿಹರ ತಾಲೂಕಿನ ನಂದಿಗುಡಿ, ದೇವರಬೆಳೆಕೆರೆ, ಮಲೇ ಬೆನ್ನೂರು, ಭಾನುವಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಜ.22 ರಂದು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ ಎಂದು ಸೂಚನೆ ನೀಡಿದೆ.
ನಂದಿಗುಡಿ ವಿ.ವಿ. ಕೇಂದ್ರದ ನಂದಿಗುಡಿ, ಮರಳಹಳ್ಳಿ, ಇಂಗಳಗೊಂದಿ, ಹುಲಗಿನಹೊಳೆ, ಕೊಕ್ಕ ನೂರು, ವಾಸನ, ಕಡಾರನಾಯಕನಹಳ್ಳಿ, ಎಳೆಹೊಳೆ, ಮೂಗಿನಗೊಂದಿ, ಉಕ್ಕಡಗಾತ್ರಿ, ಜಿ.ಟಿ.ಕಟ್ಟೆ, ಗೋವಿನ ಹಾಳು, ಹಿಂಡಸಘಟ್ಟ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಅದೇ ರೀತಿ ದೇವರಬೆಳೆಕೆರೆ ವಿವಿ ಕೇಂದ್ರ ವ್ಯಾಪ್ತಿಯ, ದೇವರಬೆಳೆಕೆರೆ, ಕಡ್ಲೆಗೊಂದಿ, ಸತ್ಯನಾರಾಯಣ ಕ್ಯಾಂಪ್, ಸಾಲಕಟ್ಟೆ, ಮಿಟ್ಲಕಟ್ಟೆ ಐಪಿ ವಲಯ ಹಾಗೂ ಸುತ್ತಲಿನ ಪ್ರದೇಶದಲ್ಲೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇನ್ನು ಮಲೆಬೆನ್ನೂರು, ಹಾಲಿವಾಣ, ಒಡೆಯರ ಬಸಾಪುರ, ಜಿ.ಬೇವಿನಹಳ್ಳಿ, ಹಳ್ಳಿಹಾಳು, ಕಂಬತ್ತನಹಳ್ಳಿ, ಹಾಲಿವಾಣ, ದಿಬ್ಬದಹಳ್ಳಿ, ಹರಳಹಳ್ಳಿ, ಕುಮಾರನಹಳ್ಳಿ, ಕೊಪ್ಪ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಆಗಲಿದೆ. ಭಾನುವಳ್ಳಿ ವಿವಿ ಕೇಂದ್ರ ವ್ಯಾಪ್ತಿಯ ಭಾನುವಳ್ಳಿ, ಇಎಚ್ ಟಿ ಕಾರ್ಗಿಲ್ ಕಂಪನಿ, ಬೆಳ್ಳೂಡಿ, ಹನಗವಾಡಿ, ಬನ್ನಿಕೋಡು, ಕೆ.ಬೇವಿನಹಳ್ಳಿ, ಕಮಲಾಪುರ, ಹೊಳೆಸಿರಿಗೆರೆ, ಲಕ್ಕಶೆಟ್ಟಿಹಳ್ಳಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆ ಸೂಚನೆ ನೀಡಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!



Click it and Unblock the Notifications