PPF: ದೀರ್ಘಾವಧಿ ಹೂಡಿಕೆ.. 85 ಸಾವಿರ ಬಡ್ಡಿ.. ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

ದೀರ್ಘಾವಧಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣಗಳಿಸಲು ಬಯಸುವವರಿಗೆ ಸಾರ್ವಜನಿಕ ಭವಿಷ್ಯ ನಿಧಿಯು (ಪಿಪಿಎಫ್‌) ಉತ್ತಮ ಯೋಜನೆ ಎಂದೇ ಹೇಳಬಹುದು. ಈ ಯೋಜನೆ ನಿಮಗೆ ಸರ್ಕಾರದ ಭದ್ರತೆಯ ಗ್ಯಾರಂಟಿ ನೀಡುತ್ತಾದೆ. ಈ ಯೋಜನೆ ಮೂಲಕ ನೀವು ತಿಂಗಳಿಗೆ 85 ಸಾವಿರ ರೂಪಾಯಿ ಬಡ್ಡಿ ಕೂಡ ಗಳಿಸಬಹುದು ಹೇಗೆ? ಯೋಜನೆ ಖಾತೆಯನ್ನು ಹೇಗೆ ತೆರೆಯಬೇಕು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

ಹೌದು, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅನ್ನೋದು ಒಂದು ಸಣ್ಣ ಜನಪ್ರಿಯ ಉಳಿತಾಯ ಯೋಜನೆಯ ಹೂಡಿಕೆಯಾಗಿದೆ. ನೀವು ಈ ಯೋಜನೆಯ ಮೂಲಕ ಹೆಚ್ಚಿನ ಆದಾಯ ಮತ್ತು ತೆರಿಗೆ ಪ್ರಯೋಜನಗಳು ಸೇರಿದಂತೆ ಹಲವು ಉಪಯೋಗಗಳನ್ನು ಹೂಡಿಕೆದಾರರು ಪಡೆಯಬಹುದು. ಈ ಯೋಜನೆಯಲ್ಲಿ ನಿಮಗೆ ಶೇ.7.1 ಬಡ್ಡಿ ದರ ಸಿಗುತ್ತದೆ. ಹಾಗಿದ್ರೆ ಈ ಯೋಜನೆಗೆ ಹೇಗೆ ಖಾತೆಯನ್ನು ಓಫನ್ ಮಾಡಬೇಕು ಎಂಬ ಮಾಹಿತಿ ಈ ಕೆಳಗಿನಂತೆ ಇದೆ ಮುಂದೆ ಓದಿ..

PPF: ತಿಂಗಳಿಗೆ 85 ಸಾವಿರ ಬಡ್ಡಿ ಸಿಗುತ್ತೆ.. ಹೇಗೆ ಗೊತ್ತಾ?

ಖಾತೆ ತೆರೆಯವುದು ತುಂಬಾ ಸುಲಭ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯ ಖಾತೆಯನ್ನು ಯಾರು ಬೇಕಾದರು ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಕೇವಲ 500ಗೆ ಖಾತೆ ತೆರೆಯಬಹುದು.

ತಿಂಗಳಿಗೆ 85 ಸಾವಿರ ರೂಪಾಯಿ ಬಡ್ಡಿ ಗಳಿಸಬಹುದು ಹೇಗೆ?

ಪಿಪಿಎಫ್‌ ಯೋಜನೆ

ಸಾರ್ವಜನಿಕ ಭವಿಷ್ಯ ನಿಧಿಯು ನಿವೃತ್ತಿ ಕೇಂದ್ರಿತ ಯೋಜನೆಯಾಗಿದೆ.ಈ ಯೋಜನೆ ಒಬ್ಬರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಇದು ವ್ಯಕ್ತಿಗಳಿಗೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಖಾತರಿಪಡಿಸಿದ ರಿಟರ್ನ್ಸ್ ಮತ್ತು ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ. ಈ ಯೋಜನೆಯು ಸಣ್ಣ ಉಳಿತಾಯ ಯೋಜನೆಯ ವೇತನದಾರರು ಮತ್ತು ಸ್ವಯಂ ಉದ್ಯೋಗಿ ಸೇರಿದಂತೆ ಎಲ್ಲಾ ವ್ಯಕ್ತಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಗೆ ಅಪ್ರಾಪ್ತ ವಯಸ್ಕರು ಪೋಷಕರು ಕೂಡ ಮಕ್ಕಳ ಹೆಸರಲ್ಲಿ ಈ ಖಾತೆಯನ್ನು ಓಪನ್ ಮಾಡಬಹುದು.

ಮೆಚ್ಯುರಿಟಿ ಅವಧಿ ಎಷ್ಟು ವರ್ಷ?

ಪಿಪಿಎಫ್‌ ಮೆಚುರಿಟಿ ಅವಧಿಯು 15 ವರ್ಷ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ 15 ವರ್ಷಗಳ ನಂತರ, ಖಾತೆದಾರರು 5 ವರ್ಷಗಳ ಅನಿಯಮಿತ ಬ್ಲಾಕ್‌ಗಳಿಗೆ ಖಾತೆಯನ್ನು ವಿಸ್ತರಿಸುವ ಅವಕಾಶ ಕೂಡ ಇದೆ.

ಎಷ್ಟು ಹಣ ಹೂಡಿಕೆ ಮಾಡಬೇಕು?

ಈ ಯೋಜನೆಯ ಉಪಯೋಗ ಪಡೆಯಲು ನೀವು ಖಾತೆಯನ್ನು ತೆರೆಯುವಾಗ ಕೇವಲ 500 ರೂಪಾಯಿಯಿಂದ ಆರಂಭಿಸಿ, ಗರಿಷ್ಠ 1.5 ಲಕ್ಷ ರೂವರೆಗೆ ಹಣವನ್ನು ಹೂಡಿಕೆ ಮಾಡಬಹುದು.

ತೆರಿಗೆ ಪ್ರಯೋಜನಗಳು ಏನು?

ಪಿಪಿಎಫ್‌ನಲ್ಲಿ 1.5 ಲಕ್ಷದವರೆಗಿನ ಆಫರ್‌ಗಳಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ಯಾವುದೇ ತೆರಿಗೆ ಬರುವುದಿಲ್ಲ. ಇಲ್ಲಿ ಗಳಿಸಿದ ಬಡ್ಡಿ ಮತ್ತು ಕಾರ್ಪಸ್ ಸಹ ತೆರಿಗೆ ಮುಕ್ತವಾಗಿರುತ್ತದೆ.

ಮೆಚುರಿಟಿ ಅವಧಿಯ ಮೊದಲು ಪಿಪಿಎಫ್‌ ಮೊತ್ತವನ್ನು ಹಿಂಪಡೆಯಬಹುದೇ?

ಪಿಪಿಎಫ್‌ ಖಾತೆದಾರರಿಗೆ 5 ವರ್ಷಗಳ ನಂತರ ಹಣಕಾಸು ವರ್ಷದಲ್ಲಿ ಒಂದು ಬಾರಿ ಹಿಂಪಡೆಯಲು ಅವಕಾಶವಿರುತ್ತದೆ.

15 ವರ್ಷಗಳ ನಂತರ ಏನಾಗುತ್ತದೆ ನಿಮ್ಮ ಪಿಪಿಎಫ್‌ ಖಾತೆ?

ಯೋಜನೆಯ ಮುಕ್ತಾಯದ ಅವಧಿಯ 15 ವರ್ಷಗಳ ನಂತರ, ಹೂಡಿಕೆದಾರರು ಠೇವಣಿಗಳೊಂದಿಗೆ ಅಥವಾ ಇಲ್ಲದೆ ತಮ್ಮ ಖಾತೆಗಳನ್ನು ಮುಂದುವರಿಸಬಹುದು.

ಪಿಪಿಎಫ್‌ ಯೋಜನೆಯಲ್ಲಿ ತಿಂಗಳಿಗೆ 85,000 ರೂಪಾಯಿ ಆದಾಯ ಪಡೆಯುವುದು ಹೇಗೆ?

ಪಿಪಿಎಫ್‌ ಹೂಡಿಕೆ ಯೋಜನೆಯಲ್ಲಿ ನೀವು ತಿಂಗಳಿಗೆ 85,000 ರೂಪಾಯಿ ಗಳಿಸಬೇಕು ಅಂದರೆ, ಪ್ರತಿ ಹಣಕಾಸು ವರ್ಷದಲ್ಲಿ ರೂ 1.50 ಲಕ್ಷ ಹೂಡಿಕೆಯೊಂದಿಗೆ ಶುರುಮಾಡಬೇಕು.15 ವರ್ಷಗಳ ಮೆಚುರಿಟಿ ಅವಧಿಯವರೆಗೆ ಅದನ್ನು ಮುಂದುವರಿಸಬೇಕು. ಬಡ್ಡಿಯ ಗರಿಷ್ಠ ಲಾಭವನ್ನು ಪಡೆಯಲು ನೀವು ಪ್ರತಿ ಹಣಕಾಸು ವರ್ಷದಲ್ಲಿ ಏಪ್ರಿಲ್ 1-5 ರ ನಡುವೆ ಹೂಡಿಕೆ ಮಾಡಬೇಕು.

15 ವರ್ಷಗಳ ನಂತರ ಪಿಪಿಎಫ್ ಕಾರ್ಪಸ್

15 ವರ್ಷಗಳಲ್ಲಿ‌ ನಿಮ್ಮ ಹೂಡಿಕೆಯ ಮೊತ್ತವು 22,50,000ರೂ ಆಗಿರುತ್ತದೆ, ಇದರಲ್ಲಿ ಅಂದಾಜು ಬಡ್ಡಿ18,18,209 ರೂ ಆಗಿರುತ್ತದೆ ಮತ್ತು ಅಂದಾಜು ಮೆಚ್ಯೂರಿಟಿ ರೂಪಾಯಿ 40,68,209 ಆಗಿರುತ್ತದೆ. 15 ವರ್ಷಗಳ ನಂತರ ಹೂಡಿಕೆದಾರರು ಮತ್ತೆ 5 ವರ್ಷಗಳ ಕಾಲ ಹೊಡಿಕೆ ಮಾಡಿದ್ದರೆಮೊದಲಿನ ರೀತಿಯಲ್ಲಿಯೇ ವರ್ಷಕ್ಕೆ 1.50 ಲಕ್ಷ ರೂ. ಹೂಡಿಕೆ ಮಾಡಿ ಶುರುಮಾಡಬೇಕಾಗುತ್ತದೆ.

ನಿಮ್ಮ ಬಡ್ಡಿ ಮೊತ್ತ ಎಷ್ಟು?

ಪಿಪಿಎಫ್‌ ನಲ್ಲಿ ಶೇ.7.1 ರಷ್ಟು ಬಡ್ಡಿ ದರದಲ್ಲಿ ಒಂದು ವರ್ಷದಲ್ಲಿ ಬಡ್ಡಿಯು 10,13,640 ರೂ ಆಗಿರುತ್ತದೆ, ಅಂದರೆ ತಿಂಗಳಿಗೆ ನಿಮಗೆ ಈ ಯೋಜನೆಯ ಮೂಲಕ 85,000 ರೂ ಗಳ ಹಣವನ್ನು ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+